Viral Video: ಬೇಸಿಗೆಗೆ ತಂಪು ನೀಡುವ ಐಸ್​ ಗೋಲಗಪ್ಪಾ ನೋಡಿ ಮೂಗು ಮುರಿದ ನೆಟ್ಟಿಗರು

ಸಾಮಾಜಿಕ ಜಾಲತಾಣದಲ್ಲಿ ಈ ಐಸ್​ ಗೋಲಗಪ್ಪಾದ ವಿಡಿಯೋವೊಂದು ಸಖತ್​ ಸದ್ದು ಮಾಡುತ್ತಿದೆ. ಆದರೆ ಹಲವು ಹೊಸ ರುಚಿಯನ್ನು ನೋಡಿ ಮೂಗು ಮುರಿದಿದ್ದಾರೆ.

Viral Video: ಬೇಸಿಗೆಗೆ ತಂಪು ನೀಡುವ ಐಸ್​ ಗೋಲಗಪ್ಪಾ ನೋಡಿ ಮೂಗು ಮುರಿದ ನೆಟ್ಟಿಗರು
ಐಸ್​ ಗೋಲಗಪ್ಪಾ
Edited By:

Updated on: Mar 12, 2022 | 3:11 PM

ಬೇಸಿಗೆಯ ಬಿಸಿಲಿಗೆ ತಂಪನೆಯ ಅನುಭವವಾಗಲು ಕೋಲ್ಡ್​ ಜ್ಯೂಸ್​, ಐಸ್​​ಕ್ರೀಮ್​ ಎಳೆನೀರಿನಂತಹ ಆಹಾರಗಳ ಮೊರೆಹೋಗುತ್ತೇವೆ. ಇನ್ನೇನು ಬೇಸಿಗೆ ಆರಂಭವಾಗುತ್ತಿದೆ. ಮಸಾಲೆಯುಕ್ತ ಪದಾರ್ಥಗಳನ್ನು ಸೇವಿಸಿದರೆ ದೇಹದಲ್ಲಿ ಉಷ್ಣತೆ ಹೆಚ್ಚಾಗಿ ಸೆಕೆ ಜಾಸ್ತಿಯಾಗುತ್ತದೆ. ಹೀಗಾಗಿ ತಂಪನೆಯ ಆಹಾರಗಳೆಡೆ ಗಮನ ಹೋಗುತ್ತದೆ. ಇಲ್ಲೊಂದು ವಿಭಿನ್ನ ಆಹಾರ ಬೇಸಿಗೆಯ ಬಿಸಲಿಗೆ ತಂಪು ನೀಡುವಂತಿದೆ. ಆದರೂ ಅದನ್ನು ನೋಡಿ ನೆಟ್ಟಿಗರು ಮೂಗು ಮುರಿದಿದ್ದಾರೆ.  ಅದೇನು ಅಂತೀರಾ ಅದುವೇ ಐಸ್​ ಗೋಲಗಪ್ಪಾ (Ice Gol Gappa) . ಸಾಮಾಜಿಕ ಜಾಲತಾಣದಲ್ಲಿ ಈ ಐಸ್​ ಗೋಲಗಪ್ಪಾದ ವಿಡಿಯೋವೊಂದು ಸಖತ್​ ಸದ್ದು ಮಾಡುತ್ತಿದೆ.

ಇನ್ಸ್ಟಾಗ್ರಾಮ್​ನಲ್ಲಿ ಫುಡ್​ ಬ್ಲಾಗರ್​ ಒಬ್ಬರು ಈ ಐಸ್​ ಗೋಲಗಪ್ಪಾದ ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಮೊದಲು ಐಸ್​ ಕ್ಯೂಬ್​ ಅನ್ನು ತುರಿದು ನಂತರ ಅದನ್ನು ಪೂರಿ ಒಳಗೆ ತುಂಬಿಸಲಾಗುತ್ತದೆ. ನಂತರ ಅದಕ್ಕೆ ಸಾಸ್​ ಹಾಕಿ ನೀಡಲಾಗುತ್ತದೆ.  ಇನ್ಸ್ಟಾಗ್ರಾಮ್​ನಲ್ಲಿ ವೈರಲ್​ ಇಂಡಿಯಾ ಆಫೀಷಿಯಲ್​ ಖಾತೆ ಹಂಚಿಕೊಂಡಿದೆ. ಸದ್ಯ ವಿಡಿಯೋ ನೋಡಿ ನೆಟ್ಟಿಗರು ತರಹೇವಾರಿ ಕಾಮೆಂಟ್​ ಮಾಡಿದ್ದಾರೆ. ಐಸ್ ಗೊಲಗಪ್ಪಾ ನೋಡಿ ಹಲವರು ಮೂಗು ಮುರಿದಿದ್ದಾರೆ.

ಸದ್ಯ ವೈರಲ್​ ಆದ ವಿಡಿಯೋ 1 ಲಕ್ಷಕ್ಕೂ ಹೆಚ್ಚು ವೀವ್ಸ್​​ ಗಳಿಸಿದ್ದು, 5 ಸಾವಿರಕ್ಕೂ ಅಧಿಕ ಲೈಕ್ಸ್​ ಗಳಿಸಿದೆ. ವಿಡಿಯೋವನ್ನು ಎಲ್ಲಿ ಸೆರೆಹಿಡಿಯಲಾಗಿದೆ ಎನ್ನುವುದನ್ನು ಹೇಳಲಾಗಿಲ್ಲ. ಐಸ್​ ಗೋಲಗಪ್ಪಾ ಎಂದು ಕ್ಯಾಪ್ಷನ್​ ನೀಡಲಾಗಿದೆ.

ಇದನ್ನೂ ಓದಿ:

ಪಾರ್ಶ್ವವಾಯು ಬಳಿಕ ನಾಲಿಗೆಯ ಮೇಲೆ ಬೆಳೆದ ಕಪ್ಪು ಕೂದಲು: ವಿಚಿತ್ರ ಕಾಯಿಲೆಗೆ ತುತ್ತಾದ ವ್ಯಕ್ತಿ