New York : ಪರಿಚಿತರಿಗೆ ಸಹಾಯ ಮಾಡುವುದು ಸಹಜ. ಆದರೆ ಅಪರಿಚಿತರಿಗೆ, ಅದರಲ್ಲೂ ಮಧ್ಯರಾತ್ರಿ, ಮತ್ತದರಲ್ಲೂ ಒಬ್ಬ ಪುರುಷ ಮಹಿಳೆಗೆ? ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ ಶಕುಲಾ ಜದ್ರಾನ್ ಎಂಬ ಅಫ್ಘಾನಿಸ್ತಾನದ (Afghanistan) ವಿದ್ಯಾರ್ಥಿನಿಯ ಟ್ವೀಟ್ ಇದೀಗ ವೈರಲ್ ಆಗುತ್ತಿದೆ. ನ್ಯೂಯಾರ್ಕ್ನಲ್ಲಿ ಮಧ್ಯರಾತ್ರಿ ಆಕೆ ತಪ್ಪಾದ ಬಸ್ ಹತ್ತಿದಾಗ ಅಪರಿಚಿತನಾದ ಡ್ರೈವರ್ ತನಗೆ ಹೇಗೆ ಸಹಾಯ ಮಾಡಿದ ಎಂಬುದನ್ನು ಆಕೆ ಟ್ವೀಟ್ ಮೂಲಕ ಹಂಚಿಕೊಂಡಿದ್ದಾಳೆ.
It was midnight, my phone was dead. I didn’t have any cash or cards on me. I got on the wrong bus which brought me to the opposite side of the city. I was lost and stressed, but the bus driver was kind enough to help me. He offered me a ride and drove me back to my destination.… pic.twitter.com/Bmi83rENsi
ಇದನ್ನೂ ಓದಿ— Shkula Zadran ښکلا ځدراڼ ?? (@ShkulaZadran) June 19, 2023
ಮಧ್ಯರಾತ್ರಿ ನ್ಯೂಯಾರ್ಕ್ನಲ್ಲಿ ಪ್ರಯಾಣಿಸುತ್ತಿದ್ದಾಗ ಆಕೆಯ ಅರಿವಿಗೆ ಬಂದಿದ್ದು ಮೊಬೈಲ್ನಲ್ಲಿ ಚಾರ್ಜಿಲ್ಲ ಜೊತೆಗೆ ಜೇಬಿನಲ್ಲಿ ಹಣವೂ ಇಲ್ಲ, ಯಾವುದೇ ಥರದ ಕಾರ್ಡ್ ಕೂಡ ಇಲ್ಲ. ಇದೆಲ್ಲದಕ್ಕಿಂತ ಹೆಚ್ಚಾಗಿ ಆಕೆ ಹತ್ತಿದ್ದು ತಪ್ಪಾದ ಬಸ್! ಮುಂದೇನು ಮಾಡುವುದು ಎಂದು ಆಕೆ ಕಳವಳಕ್ಕೀಡಾದಳು. ಬಸ್ ಡ್ರೈವರ್ ನೋಯಲ್ ಬಳಿ ಆಕೆ ತನ್ನ ಸಂಕಷ್ಟವನ್ನು ತೋಡಿಕೊಂಡಳು. ಆಕೆಯನ್ನು ಈ ಒತ್ತಡದಿಂದ ಪಾರು ಮಾಡಲೇಬೇಕೆಂದು ನಿರ್ಧರಿಸಿ ಆಕೆ ವಾಸವಾಗಿದ್ದ ಪ್ರದೇಶದೆಡೆ ಬಸ್ ತಿರುಗಿಸಿದ.
ಇದನ್ನೂ ಓದಿ : Viral: 34 ವರ್ಷಗಳ ಹಿಂದಿನ ಸಂದೇಶವೊಂದು ಸಮುದ್ರ ದಂಡೆಯ ಮೇಲೆ ಸಿಕ್ಕಾಗ
ನಂತರ ಮನೆಯನ್ನು ತಲುಪಿದ ಮೇಲೆ ಡ್ರೈವರ್ಗೆ ಸ್ವಲ್ಪ ಹಣ ಕೊಡಲು ಮುಂದಾದಳು. ಆದರೆ ಆತ ನಿರಾಕರಿಸಿದನು. ಮತ್ತೆ ಆತ ಕೆಲ ದಿನಗಳಲ್ಲೇ ತನ್ನ ವೃತ್ತಿಯಿಂದ ನಿವೃತ್ತನೂ ಆಗುವವನಿದ್ಧಾನೆ ಎಂಬ ವಿಷಯವೂ ಆಕೆಗೆ ತಿಳಿಯಿತು. ಸಾರ್ವಜನಿಕ ಸೇವಾಕ್ಷೇತ್ರದಲ್ಲಿರುವವರು ನಿಮಗೆ ಸಹಾಯ ಮಾಡಿದಾಗ ತಪ್ಪದೇ ಧನ್ಯವಾದ ತಿಳಿಸಿ ಎಂದು ಆಕೆ ನೆಟ್ಟಿಗರಲ್ಲಿ ಮನವಿ ಮಾಡಿಕೊಂಡಿದ್ದಾಳೆ.
ಇದನ್ನೂ ಓದಿ : Viral: ವೃಂದಾವನದ ಹೋಳಿ ಸಂಭ್ರಮದಲ್ಲಿ ಮುಕೇಶ್ ಅಂಬಾನಿ, ಎಲಾನ್, ಝುಕರ್ಬರ್ಗ್?
ದಯಾಮಯಿಯಾದ ಡ್ರೈವರ್ನನ್ನು ನೆಟ್ಟಿಗರು ಶ್ಲಾಘಿಸುತ್ತಿದ್ದಾರೆ. ನಿಜ, ಸಹಾಯ ಹಸ್ತ ಚಾಚುವಂಥ ಜನ ಯಾವಾಗಲೂ ಎಲ್ಲೆಡೆಯೂ ಇದ್ದೇ ಇರುತ್ತಾರೆ ಎಂದು ಒಬ್ಬರು ಹೇಳಿದ್ದಾರೆ. ಅವನು ನಿಜವಾದ ಮನುಷ್ಯ, ಅಂಥವರು ಈ ಜಗತ್ತಿಗೆ ಬೇಕು ಎಂದು ಮತ್ತೊಬ್ಬರು ಹೇಳಿದ್ದಾರೆ. ಕರುಣೆ ದಯೆವುಳ್ಳ ಈತನಿಗೆ ದೀರ್ಘಾಯಸ್ಸು ದೊರೆಯಲಿ ಎಂದು ಮತ್ತೊಬ್ಬರು ಹಾರೈಸಿದ್ದಾರೆ. ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ