ಮುಂಗಾಲಿಗಳೇ ಇಲ್ಲ ಈ ಟ್ರಕ್​ಗೆ; ಭಾರತೀಯ ಡ್ರೈವರ್​ಗಳಿಗೆ ಮಾತ್ರ ಈ ಸಾಹಸ ಸಾಧ್ಯ ಎನ್ನುತ್ತಿದ್ದಾರೆ ನೆಟ್ಟಿಗರು

| Updated By: ಶ್ರೀದೇವಿ ಕಳಸದ

Updated on: Jan 04, 2023 | 10:21 AM

Viral Video : ಆದರೆ ತಿರುವಿನಲ್ಲಿ ಇವನು ಹೇಗೆ ಇದನ್ನು ನಿಭಾಯಿಸುತ್ತಾನೆ ಎಂದು ಕೇಳಿದ್ದಾರೆ ಕೆಲವರು. ನೀವು 2050ರಲ್ಲಿ ಜೀವಿಸುತ್ತಿದ್ದೀರಿ! ಎಂದಿದ್ದಾರೆ ಮತ್ತೊಬ್ಬರು. ಭಾರತೀಯ ಡ್ರೈವರ್​ಗಳ ಶಕ್ತಿಯೇ ಇದು ಎಂದಿದ್ದಾರೆ ಹಲವರು.

ಮುಂಗಾಲಿಗಳೇ ಇಲ್ಲ ಈ ಟ್ರಕ್​ಗೆ; ಭಾರತೀಯ ಡ್ರೈವರ್​ಗಳಿಗೆ ಮಾತ್ರ ಈ ಸಾಹಸ ಸಾಧ್ಯ ಎನ್ನುತ್ತಿದ್ದಾರೆ ನೆಟ್ಟಿಗರು
ಟ್ರಕ್ಕಿನ ಮುಂಗಾಲಿಗಳಿಲ್ಲದೆ ಚಲಿಸುತ್ತಿದೆ!
Follow us on

Viral Video : ನಮ್ಮ ಭಾರತದಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ ಎನ್ನುವುದನ್ನು ಆಗಾಗ ನೋಡುತ್ತಲೇ ಇರುತ್ತೇವೆ. ತಮ್ಮ ಕೌಶಲದಿಂದ ಯಾರನ್ನೂ ಮೋಡಿಗೆ ಒಳಮಾಡುವಂಥ ಸಾಮರ್ಥ್ಯ ಇಲ್ಲಿಯವರಿಗಿದೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಈ ಮನುಷ್ಯ ಓಡಿಸುತ್ತಿರುವ ಟ್ರಕ್​ಗೆ ಮುಂಗಾಲಿಗಳೇ ಇಲ್ಲ. ಬಹುಶಃ ಈ ಟ್ರಕ್​ ಅಪಘಾತಕ್ಕೆ ಒಳಗಾದದ್ದು ಇರಬೇಕು. ಆದರೂ ಅದನ್ನು ತನ್ನ ಮಾತು ಕೇಳುವಷ್ಟರ ಮಟ್ಟಿಗೆ ರಿಪೇರಿ ಮಾಡಿಕೊಂಡು ಹೆದ್ದಾರಿಯಲ್ಲಿ ಓಡಿಸುತ್ತಿರುವ ಅವನ ಧೈರ್ಯಕ್ಕೆ ಸಲಾಮ್!

ಇದನ್ನು ನೋಡುತ್ತಿರುವ ಯಾರಿಗೂ ಇದು ಖಂಡಿತ ಗೊಂದಲಕ್ಕೆ ಬೀಳಿಸುತ್ತದೆ. ಹೀಗೆ ಅಪಾಯಕ್ಕೆ ಒಡ್ಡಿಕೊಳ್ಳಲು ಮಹಾನ್​ ಧೈರ್ಯ ಬೇಕು ಒಂದು. ಇನ್ನೊಂದು ಮುಂಗಾಲಿಗಳಿಲ್ಲದೆ ಅದು ಓಡುತ್ತಿರುವುದಾದರೂ ಹೇಗೆ? ವಿಡಿಯೋ ಅನ್ನು ಈಗಾಗಲೇ 4.8 ಮಿಲಿಯನ್ ಜನರು ನೋಡಿದ್ದಾರೆ. 4 ಲಕ್ಷಕ್ಕಿಂತಲೂ ಹೆಚ್ಚು ಜನರು ಈ ವಿಡಿಯೋ ಇಷ್ಟಪಟ್ಟಿದ್ದಾರೆ.

ಇದನ್ನೂ ಓದಿ : ಮದುವೆಯಲ್ಲಿ ವರ, ವಧುವಿನ ಲೈವ್ ಪೋರ್ಟ್ರೇಟ್ ಮಾಡಿದ ವಿಡಿಯೋ ವೈರಲ್; ಎಂಥಾ ಅದೃಷ್ಟ ಎಂದ ನೆಟ್ಟಿಗರು ​

ಆದರೆ ಅನೇಕರು ಇದು ಅತ್ಯಂತ ಅಪಾಯಕಾರಿ ನಡೆ ಎಂದು ಹೇಳಿದ್ದಾರೆ. ಏನಿದ್ದರೂ ಇಂಥದೆಲ್ಲ ಭಾರತೀಯ ಟ್ರಕ್​ ಡ್ರೈವರ್​ಗಳಿಗೆ ಮಾತ್ರ ಸಾಧ್ಯ ಎಂದಿದ್ದಾರೆ ಹಲವರು. ಆದರೆ ತಿರುವಿನಲ್ಲಿ ಇವನು ಹೇಗೆ ಇದನ್ನು ನಿಭಾಯಿಸುತ್ತಾನೆ ಎಂದು ಕೇಳಿದ್ದಾರೆ ಕೆಲವರು. ನೀವು 2050ರಲ್ಲಿ ಜೀವಿಸುತ್ತಿದ್ದೀರಿ! ಎಂದಿದ್ದಾರೆ ಮತ್ತೊಬ್ಬರು. ಭಾರತೀಯ ಡ್ರೈವರ್​ಗಳ ಶಕ್ತಿಯೇ ಇದು ಎಂದಿದ್ದಾರೆ ಹಲವರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ 

 

Published On - 10:21 am, Wed, 4 January 23