ವೈರಲ್ ವಿಡಿಯೊ: ಸಪ್ತಋಷಿ ಪಾರ್ಕ್‌ನಲ್ಲಿ ರೀಲ್ಸ್ ಮಾಡುತ್ತಾ ಆ ಯುವ ಜೋಡಿ ಏನು ಮಾಡಿತು ನೋಡಿ! ನೆಟಿಜನ್‌ಗಳಂತೂ ಕಿಡಿಕಿಡಿ

|

Updated on: Nov 03, 2023 | 5:04 PM

Viral Video: ಈ ವಿಡಿಯೋವನ್ನು @TheSquind ಹ್ಯಾಂಡಲ್‌ನಲ್ಲಿ ಹಂಚಿಕೊಳ್ಳಲಾಗಿದೆ. ಇನ್‌ಸ್ಟಾ ರೀಲರ್‌ಗಳು ಈ ಸ್ಥಳವನ್ನು ಅಶ್ಲೀಲ ತಾಣವನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದಿರುವ ವಿಡಿಯೋ ಶೇರ್ ಮಾಡಿದ ವ್ಯಕ್ತಿಯು ನೋಯ್ಡಾ ಪೊಲೀಸರಿಗೆ ಪೋಸ್ಟ್​ ಟ್ಯಾಗ್ ಮಾಡಿದ್ದು, ಪಾರ್ಕ್‌ನ ಪಾವಿತ್ರ್ಯತೆ ಕಾಪಾಡಲು ಕಾನ್‌ಸ್ಟೆಬಲ್‌ಗಳನ್ನು ನೇಮಿಸುವಂತೆ ಒತ್ತಾಯಿಸಿದ್ದಾರೆ.

ವೈರಲ್ ವಿಡಿಯೊ: ಸಪ್ತಋಷಿ ಪಾರ್ಕ್‌ನಲ್ಲಿ ರೀಲ್ಸ್ ಮಾಡುತ್ತಾ ಆ ಯುವ ಜೋಡಿ ಏನು ಮಾಡಿತು ನೋಡಿ! ನೆಟಿಜನ್‌ಗಳಂತೂ ಕಿಡಿಕಿಡಿ
ಪಾರ್ಕ್‌ನಲ್ಲಿ ರೀಲ್ಸ್ ಮಾಡುತ್ತಾ ಆ ಯುವ ಜೋಡಿ ಏನು ಮಾಡಿತು ನೋಡಿ!
Follow us on

ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯವಾಗಲು, ನಾನಾ ಜನ ಹಲವಾರು ಕಸರತ್ತು ಮಾಡುವುದನ್ನು ನೀವು ನೋಡಿರುರುತ್ತೀರಿ. ಹೆಚ್ಚಾಗಿ ವಿನೋದ, ತಮಾಷೆಯ ಪ್ರಸಂಗಗಳನ್ನು ದಾಖಲಿಸುವ ಮೂಲಕ ಜನರನ್ನು ಆಕರ್ಷಿಸುತ್ತಾರೆ. ಜನರರನ್ನು ನಗಿಸುತ್ತಾರೆ. ಆದರೆ ಆ ಸೂಕ್ಷ್ಮದ ಆಚೆಗೆ ಮಾಡುವ ಕೆಲಸಗಳು ಬೇಸರ, ಅಸಹ್ಯ ಮೂಡಿಸುತ್ತದೆ. ಅದೇ ಸಮಯದಲ್ಲಿ, ಕೆಲವರು ಅನೈತಿಕ ಕೆಲಸಗಳನ್ನು ಮಾಡುವ ಮೂಲಕ ಸಾರ್ವಜನಿಕ ಕೋಪಕ್ಕೆ ತುತ್ತಾಗುತ್ತಾರೆ. ಇತ್ತೀಚೆಗಷ್ಟೇ ದೆಹಲಿ ಮೆಟ್ರೋದಲ್ಲಿ ಯುವ ಜೋಡಿಗಳು ಮಾಡಿದ ಕೆಲಸ ಎಲ್ಲರ ಗಮನಕ್ಕೂ ಬಂದಿದೆ. ಇದೀಗ ನೋಯ್ಡಾದ ಪ್ರಸಿದ್ಧ ವೇದ್ ವನ್ ಪಾರ್ಕ್ ನಲ್ಲಿ ಯುವ ಜೋಡಿಯೊಂದು ಮಾಡಿರುವ ಕೆಲಸಕ್ಕೆ ಜನ ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅದಕ್ಕಾಗಿಯೇ ಕೆಲವರು ನೋಯ್ಡಾ ಪೊಲೀಸರನ್ನು ಟ್ಯಾಗ್ ಮಾಡಿ ಈ ಜೋಡಿಯನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ. ಈ ಜೋಡಿ ಏನು ಮಾಡಿದೆ ಎಂದು ತಿಳಿದರೆ, ಜನ ಆಶ್ಚರ್ಯಚಕಿತರಾಗುವಷ್ಟು ಕೋಪಗೊಳ್ಳುತ್ತಾರೆ, ನೀವೂ ನೋಡಿ.

ಇತ್ತೀಚೆಗೆ ದೆಹಲಿ ಮೆಟ್ರೋದಲ್ಲಿ ಯುವ ಜೋಡಿಗೆ ಸಂಬಂಧಿಸಿದ ವೀಡಿಯೊ ವೈರಲ್ ಆಗಿತ್ತು. ಇದರಲ್ಲಿ ಇಬ್ಬರೂ ಸಾರ್ವಜನಿಕವಾಗಿ ಚುಂಬಿಸುತ್ತಿರುವುದು ಕಂಡುಬಂದಿತ್ತು. ಈ ವೀಡಿಯೋ ಕುರಿತು ಅಂತರ್ಜಾಲದಲ್ಲಿ ಕೋಲಾಹಲ ಎದ್ದಿತ್ತು. ಇದೀಗ ನೋಯ್ಡಾ ಸೆಕ್ಟರ್ 78ರಲ್ಲಿರುವ ‘ವೇದ್ ಒನ್’ ಪಾರ್ಕ್‌ನಲ್ಲಿ ಅದೇ ರೀತಿಯ ಯುವ ಜೋಡಿ ಮತ್ತೊಂದು ಅಸಹ್ಯದ ಕೃತ್ಯ ಎಸಗಿದೆ. ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ವೇದ್ ಫಾರೆಸ್ಟ್ ಪಾರ್ಕ್‌ನಲ್ಲಿ ಯುವ ಜೋಡಿ ತಮ್ಮ ಪರಸ್ಪರ ಪ್ರೀತಿಯನ್ನು ವ್ಯಕ್ತಪಡಿಸಿದ ರೀತಿಯನ್ನು ನೀವು ವಿಡಿಯೋದಲ್ಲಿ ನೋಡಬಹುದು.

ಹುಡುಗ ಮೊದಲು ಹುಡುಗಿಗೆ ಪ್ರಪೋಸ್ ಮಾಡಿ ಅವಳ ಮೇಲೆ ಖೈ ಹಾಕಿದ. ಅದೇ ಸಮಯದಲ್ಲಿ ಯುವತಿ ನೀರಿನ ಬಾಟಲಿಯಿಂದ ನೀರು ಕುಡಿಯುತ್ತಿದ್ದಳು. ಅದೇ ನೀರನ್ನು ಯುವಕನ ಬಾಯಿಗೆ ಹಾಕುತ್ತಾಳೆ. ಯುವಕನ ಬಾಯಿಯ ಮೇಲೆ ಬೆರಳಿಟ್ಟು ಅವನ ತುಟಿಗೆ ಮುತ್ತಿಡಲು ಯತ್ನಿಸುತ್ತಾಳೆ. ಯುವತಿ ತನ್ನ ಬಾಯಲ್ಲಿದ್ದ ನೀರನ್ನು ಯುವಕನ ಬಾಯಿಗೆ  ಚಿಮ್ಮಿಸುತ್ತಾಳೆ. ಆಗ ಯುವಕನೂ ಅದೇ ಉತ್ಸಾಹದಿಂದ ನೀರು  ಸೇವಿಸುತ್ತಾನೆ. ಯುವ ಜೋಡಿ ಮಾಡಿರುವ ಈ ಕೆಲಸಕ್ಕೆ ಜನ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಈ ಯುವ ಜೋಡಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಜನರು ನೋಯ್ಡಾ ಪೊಲೀಸರನ್ನು ಒತ್ತಾಯಿಸುತ್ತಿದ್ದಾರೆ.

ಈ ವಿಡಿಯೋವನ್ನು @TheSquind ಹ್ಯಾಂಡಲ್‌ನಲ್ಲಿ ಹಂಚಿಕೊಳ್ಳಲಾಗಿದೆ. ಇನ್‌ಸ್ಟಾ ರೀಲರ್‌ಗಳು ಈ ಸ್ಥಳವನ್ನು ಅಶ್ಲೀಲ ತಾಣವನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದಿರುವ ವಿಡಿಯೋ ಶೇರ್ ಮಾಡಿದ ವ್ಯಕ್ತಿಯು ನೋಯ್ಡಾ ಪೊಲೀಸರಿಗೆ ಪೋಸ್ಟ್​ ಟ್ಯಾಗ್ ಮಾಡಿದ್ದು, ಪಾರ್ಕ್‌ನ ಪಾವಿತ್ರ್ಯತೆ ಕಾಪಾಡಲು ಕಾನ್‌ಸ್ಟೆಬಲ್‌ಗಳನ್ನು ನೇಮಿಸುವಂತೆ ಒತ್ತಾಯಿಸಿದ್ದಾರೆ. ಈ ವೇಳೆ ಸೈಬರ್ ಸೆಲ್ ಸಹಾಯದಿಂದ ಯುವ ಜೋಡಿಯನ್ನು ಬಂಧಿಸುತ್ತೇವೆ ಎಂದು ನೋಯ್ಡಾ ಡಿಸಿಪಿ ತಿಳಿಸಿದ್ದಾರೆ.

ಅಶ್ಲೀಲ/ಅನೈತಿಕ ಕೃತ್ಯ ಎಸಗುವವರ ವಿರುದ್ಧ ಕ್ರಮಕ್ಕೆ ಆಗ್ರಹ

ಸಾರ್ವಜನಿಕ ಸ್ಥಳಗಳಲ್ಲಿ ಅಶ್ಲೀಲತೆಯನ್ನು ಹರಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಸಾಮಾಜಿಕ ಜಾಲತಾಣ ಬಳಕೆದಾರರು ಬರೆದಿದ್ದಾರೆ. ಅದೇ ಸಮಯದಲ್ಲಿ, ಇತರ ಕೆಲ ಬಳಕೆದಾರರು ಅವರನ್ನು ಬಂಧಿಸುವವರೆಗೂ ಇದೇ ರೀತಿಯ ಕೆಲಸಗಳನ್ನು ಮುಂದುವರೆಸುತ್ತಾರೆ ಎಂದು ಎಚ್ಚರಿಸಿದ್ದಾರೆ.

ಹೆಚ್ಚಿನ ಟ್ರೆಂಡಿಂಗ್ ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ