ಆಳವಾದ ಗುಂಡಿಯಲ್ಲಿ ಬಿದ್ದಿದ್ದ ಆನೆಯನ್ನು ಅರಣ್ಯ ಇಲಾಖೆ ರಕ್ಷಿಸಿದೆ. ರಕ್ಷಣಾ ಕಾರ್ಯಾಚಾರಣೆಯಲ್ಲಿ ಜೆಸಿಬಿಯನ್ನು ತಂದು ಆನೆಯನ್ನು ರಕ್ಷಿಸಿ ಒಡಿಶಾ ಬಾಂಗಿರಿಪೋಸಿ ಅರಣ್ಯ ಇಲಾಖೆ ಕರ್ತವ್ಯ ಮೆರೆದಿದೆ. ಈ ಕುರಿತಂತೆ ಎಎನ್ಐ ವರದಿ ಮಾಡಿದೆ. ರಾತ್ರಿ ವೇಳೆಯಲ್ಲಿ ಸುಮಾರು 10 ಆನೆಗಳು ಮಯೂರ್ಭಂಜ್ ಜಿಲ್ಲೆಯಲ್ಲಿರುವ ಪುಟ್ಟ ಹಳ್ಳಿಯನ್ನು ಪ್ರವೇಶಿಸಿವೆ. ಹಳ್ಳಿ ದಾಟಿ ಕಾಡಿಗೆ ಹೋಗಲು ದಾರಿ ತೋಚದೇ ಆನೆಗಳು ಪರದಾಡುತ್ತಿದ್ದವು, ಈ ವೇಳೆಯಲ್ಲಿ ಜನರನ್ನು ಕಂಡು ಕಂಗಾಲಾದ ಆನೆಗಳು ದಿಕ್ಕಾ ಪಾಲಾಗಿ ಓಡಿವೆ. ಅದರಲ್ಲೊಂದು ವಯಸ್ಕ ಆನೆ ಆಳವಾದ ಹಳ್ಳಕ್ಕೆ ಬಿದ್ದಿದೆ ಎಂದು ವರದಿ ಮಾಡಲಾಗಿದೆ.
ಶನಿವಾರ ತಡ ರಾತ್ರಿ ಮಯೂರ್ಭಂಜ್ ಜಿಲ್ಲೆಯ ಟೆಂಬಟೊಲ ಗ್ರಾಮದ ಸಮೀಪದಲ್ಲಿರುವ ಹಳ್ಳದಲ್ಲಿ ಆನೆ ಜಾರಿ ಬಿದ್ದಿದೆ. ಜನರನ್ನು ನೋಡಿದ ಆನೆಗಳು ಹೆದರಿ ಓಡಲು ಪ್ರಾರಂಭಿಸಿದವು ಆ ವೇಳೆ ಆನೆಯೊಂದು ಹಳ್ಳಕ್ಕೆ ಬಿದ್ದಿದೆ ಎಂಬ ಮಾಹಿತಿಯನ್ನು ವನ್ಯಜೀವಿ ತಜ್ಞ ಅನೂಮಿತ್ರ ಆಚಾರ್ಯ ಎಎನ್ಐಗೆ ತಿಳಿಸಿದ್ದಾರೆ.
Odisha | An elephant was rescued from a pit near Tembatola village in Mayurbhanj, late Saturday. A group of elephants had entered a village. On seeing them, people started running, which is when one of them fell into the pit: Anoomitra Acharya, Wildlife researcher (03.10) pic.twitter.com/6N9ARiyX3D
— ANI (@ANI) October 3, 2021
ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಕ್ಷಣ ವಿಷಯ ತಿಳಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಕೈಗೊಂಡ ಇಲಾಖೆ ಆನೆಯನ್ನು ರಕ್ಷಿಸಿದೆ. ಬಳಿಕ ಕಾಡಿಗೆ ಕಳುಹಿಸಲಾಗಿದೆ. ಮಯೂರ್ಭಂಜ್ ಜಿಲ್ಲೆಯಲ್ಲಿ ಇಂಥಹ ಘಟನೆ ನಡೆಯುತ್ತಿರುವುದು ಇದೇ ಮೊದಲಲ್ಲ. 2021 ಏಪ್ರಿಲ್ನಲ್ಲಿ ಮರಿ ಆನೆಯೊಂದು 15ಅಡಿ ಆಳದ ಬಾವಿಗೆ ಬಿದ್ದಿತ್ತು. ಕಾರ್ಯಾಚರಣೆಯನ್ನು ಕೈಗೊಂಡ ಇಲಾಖೆ ಸುರಕ್ಷಿತವಾಗಿ ಆನೆ ಮರಿಯನ್ನು ರಕ್ಷಿಸಿತ್ತು.
#WATCH | An elephant calf was rescued from a 15-feet deep well at a village in Mayurbhanj district of Odisha on Saturday.
“The calf fell into the well while it was roaming in the area on Friday night,” said Rabi Narayan Mohanty, Range Officer, Deuli Forest Range. pic.twitter.com/TPIrWN52Ti
— ANI (@ANI) April 10, 2021
ಇದನ್ನೂ ಓದಿ:
ಶೌಚಗುಂಡಿಗೆ ಬಿದ್ದು ಮೇಲೆ ಬರಲಾಗದೆ ಆನೆ ಮರಿ ನರಳಾಟ; ರಕ್ಷಣೆಗೆ ಮುಂದಾಗಿರುವ ಗ್ರಾಮಸ್ಥರು
Published On - 12:27 pm, Wed, 6 October 21