Viral Video: ಡೆಲಿವರಿ ಮಾಡಬೇಕಿದ್ದ ಆಹಾರವನ್ನೇ ತಿನ್ನುತ್ತಿರುವ ಡೆಲಿವರಿ ಬಾಯ್; ವಿಡಿಯೋ ವೈರಲ್​​

|

Updated on: Jul 25, 2024 | 11:50 AM

ತನ್ನಮನೆಯ ಮುಂಭಾಗದಲ್ಲೇ ಡೆಲಿವರಿ ಹುಡುಗ ಆರ್ಡರ್​​​ ಮಾಡಿದ್ದ ಫುಡ್​​ ತಿನ್ನುತ್ತಿರುವುದನ್ನು ಕಂಡು ಗ್ರಾಹಕ ದಂಗಾಗಿ ಹೋಗಿದ್ದಾರೆ. ಈ ಘಟನೆಯನ್ನು ಫೋನಿನಲ್ಲಿ ಸೆರೆ ಹಿಡಿದ್ದಿದ್ದು, ಸೋಶಿಯಲ್​ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ವಿಡಿಯೋ ಎಲ್ಲೆಡೆ ಭಾರೀ ವೈರಲ್​​ ಆಗುತ್ತಿದೆ.

Viral Video: ಡೆಲಿವರಿ ಮಾಡಬೇಕಿದ್ದ ಆಹಾರವನ್ನೇ ತಿನ್ನುತ್ತಿರುವ ಡೆಲಿವರಿ ಬಾಯ್; ವಿಡಿಯೋ ವೈರಲ್​​
Follow us on

ಓಲಾ ಫುಡ್ಸ್‌ನಿಂದ ನೋಯ್ಡಾದ ಉದ್ಯಮಿಯೊಬ್ಬರು ಫ್ರೆಂಚ್ ಫ್ರೈಸ್ ಆರ್ಡರ್​​ ಮಾಡಿದ್ದರು. 40 ನಿಮಿಷವಾದರೂ ಬಾರದೇ ಇದ್ದರಿಂದ ಮನೆಯಿಂದ ಕೆಳಗಡೆ ಇಳಿದು ಹೋಗಿ ಡೆಲಿವರಿ ಬಾಯ್ಗೆ ಕರೆಮಾಡಿದ್ದಾರೆ. ಈ ವೇಳೆ ಮನೆಯ ಮುಂಭಾಗದಲ್ಲೇ ಡೆಲಿವರಿ ಏಜೆಂಟ್ ಆರ್ಡರ್​​​ ಮಾಡಿದ್ದ ಫುಡ್​​ ತಿನ್ನುತ್ತಿರುವುದನ್ನು ಕಂಡು ದಂಗಾಗಿ ಹೋಗಿದ್ದಾರೆ. ಈ ಘಟನೆಯನ್ನು ಉದ್ಯಮಿ ತನ್ನ ಫೋನಿನಲ್ಲಿ ಸೆರೆ ಹಿಡಿದ್ದಿದ್ದು, ಸೋಶಿಯಲ್​ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ವಿಡಿಯೋ ಎಲ್ಲೆಡೆ ಭಾರೀ ವೈರಲ್​​ ಆಗುತ್ತಿದೆ.

ಉದ್ಯಮಿ ಅಮನ್ ಬಿರೇಂದ್ರ ಜೈಸ್ವಾಲ್ ತಮ್ಮ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದು, ವಿಡಿಯೋ ಹಂಚಿಕೊಂಡ ಕೇವಲ ಮೂರು ದಿನದಲ್ಲಿ 3.6 ಅಂದರೆ 30 ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. “ಓಲಾ ನಿಮ್ಮ ಆಹಾರ ವಿತರಣಾ ಪಾಲುದಾರರು ತಮ್ಮ ಕೆಲಸವನ್ನು ಹೀಗೆ ಮಾಡುತ್ತಿದ್ದಾರೆ, ಮೊದಲು ಅವರು ಬರಲು ಹೆಚ್ಚುವರಿ 10 ರೂಗಳನ್ನು ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು. ನಾನು 10 ರೂ. ಹೆಚ್ಚುವರಿಯಾಗಿ ಪಾವತಿಸಿದ ಮೇಲೂ ನನ್ನನ್ನು ಸುಮಾರು 45 ನಿಮಿಷಗಳ ಕಾಲ ಕಾಯಿಸಿದ್ದಾರೆ. ಬಳಿಕ ಡೆಲಿವರಿ ಮಾಡಬೇಕಿದ್ದ ಆಹಾರವನ್ನು ಕೂಡ ಅವರೇ ತಿಂದಿದ್ದಾರೆ” ಎಂದು ಕ್ಯಾಪ್ಷನ್​ನಲ್ಲಿ ಬರೆದುಕೊಂಡಿದ್ದಾರೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ತೀವ್ರ ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾದ ವ್ಯಕ್ತಿ; ಸಿಟಿ ಸ್ಕ್ಯಾನ್ ನೋಡಿ ಬೆಚ್ಚಿಬಿದ್ದ ವೈದ್ಯರು

ವಿಡಿಯೋ ಎಲ್ಲೆಡೆ ವೈರಲ್​​ ಆಗುತ್ತಿದ್ದಂತೆ ಸಾಕಷ್ಟು ನೆಟ್ಟಿಗರು ಕಾಮೆಂಟ್​​ ಮಾಡಿದ್ದಾರೆ. ಒಬ್ಬ ಬಳಕೆದಾರರು, “ಇದಕ್ಕಾಗಿಯೇ ನಾನು ಝೊಮಾಟೊಗೆ ಆದ್ಯತೆ ನೀಡುತ್ತೇನೆ” ಎಂದು ಬರೆದರೆ, ಮತ್ತೊಬ್ಬರು “ಅತ್ಯಂತ ಕೆಟ್ಟ ಆಹಾರ ವಿತರಣಾ ಸೇವೆ, ಕೆಟ್ಟ ಅಪ್ಲಿಕೇಶನ್ Ola. ಜನರು ಇದನ್ನು ಬಳಸುವುದನ್ನು ನಿಲ್ಲಿಸಬೇಕು” ಎಂದು ಬರೆದುಕೊಂಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ