Viral Video: 35 ವರ್ಷಗಳ ನಂತರ ಹಳೆಯ ಪ್ರೇಮಿಗಳ ಪುನರ್ಮಿಲನ

Reunion : ನಿನ್ನ ತಂದೆ ಒಳ್ಳೆಯ, ಶ್ರೀಮಂತ ಮನೆತನದ ಗಂಡು ಹುಡುಕಿ ಮದುವೆ ಮಾಡಿರಬೇಕಲ್ಲವೆ? ಎಂದು ಅವ. ಎಲ್ಲಿ ನಿನ್ನ ಹೆಂಡತಿ ಮಕ್ಕಳ ಫೋಟೋ ತೋರಿಸು ಅಂತ ಆಕೆ. ಅದು ನನ್ನ ವೈಯಕ್ತಿಕ ಹಾಗೆಲ್ಲ ತೋರಿಸಲಾಗದು ಎಂದು ಅವ. ಮುಂದೆ?

Viral Video: 35 ವರ್ಷಗಳ ನಂತರ ಹಳೆಯ ಪ್ರೇಮಿಗಳ ಪುನರ್ಮಿಲನ
ನಾ ಬರೆದ ಮೊದಲ ಪ್ರೇಮಪತ್ರ ನೆನಪಿದೆಯಾ? ನಾನೇ ಪ್ರೊಪೋಸ್ ಮಾಡಿದ್ದೆ ನಿನ್ನನ್ನು...

Updated on: Jul 07, 2023 | 3:24 PM

Old Lovers : ಪ್ರೀತಿಸಿದವರೆಲ್ಲರೂ ಮದುವೆಯಾಗುತ್ತಾರಾ? ಆಗುತ್ತಾರೆ, ಅವರು ಇನ್ನೊಬ್ಬರನ್ನು ಇವರು ಮತ್ತೊಬ್ಬರನ್ನು. ಆದರೆ ಪ್ರೀತಿಸಿದವರು ಪ್ರೀತಿಸಿದವರನ್ನೇ ಮದುವೆಯಾಗುತ್ತಾರಾ? ಕೆಲವರಷ್ಟೇ ಆಗುತ್ತಾರೆ. ಉಳಿದವರು? ಅವರ ಪಾಡಿಗೆ ಅವರು, ಇವರ ಪಾಡಿಗೆ ಇವರು ದೂರದೂರ ಉಳಿದುಬಿಡುತ್ತಾರೆ. ಆಕೆ ಚೆನ್ನಾಗಿರಲಿ ಎಂದು ಅವ, ಅವ ಚೆನ್ನಾಗಿರಲೆಂದು ಆಕೆ ಹಾರೈಸಿ ಸುಮ್ಮನಾಗಿಬಿಡುತ್ತಾರೆ. ಆದರೆ ಇಬ್ಬರೂ ಮದುವೆಯಾಗದೆ ಹಾಗೇ ಉಳಿದು ಮುಂದೊಂದು ದಿನ ಅಚಾನಕ್​ ಆಗಿ ಸಿಕ್ಕಾಗ ಅವರ ನಡುವಿನ ಸಂಭಾಷಣೆ ಹೇಗಿರುತ್ತದೆ? ಇದೀಗ ಟ್ವಿಟರ್​​ನಲ್ಲಿ ವೈರಲ್ (Twitter) ಆಗುತ್ತಿರುವ ಈ ವಿಡಿಯೋಗಳನ್ನು ನೋಡಿ.

ಈ ವಿಡಿಯೋದಲ್ಲಿ ಹಳೆಯ ಪ್ರೇಮಿಗಳಿದ್ದಾರೆ. 35 ವರ್ಷಗಳ ನಂತರ ಅವರು ಭೇಟಿಯಾಗಿದ್ದಾರೆ. ಇಬ್ಬರೂ ಬೇರ್ಪಟ್ಟ ನಂತರ ಅವರು ಅವಿವಾಹಿತರಾಗಿಯೇ ಉಳಿದಿದ್ದಾರೆ. ನನ್ನ ಪ್ರಕಾರ ಪ್ರೀತಿ ಎಂದರೆ ಇದೂ! ಎಂದು ರಾಜ್​ ಎನ್ನುವವರು ಈ ವಿಡಿಯೋ ಥ್ರೆಡ್​ಗಳನ್ನು ಟ್ವೀಟ್ ಮಾಡಿದ್ದಾರೆ. ಅನೇಕರು ಇವರನ್ನ ಇದು ನಿಜವಾಗಲೂ ನಡೆದ ಘಟನೆಯೇ? ಎಂದು ಕೇಳುತ್ತಿದ್ದಾರೆ. ಅದಕ್ಕವರು, ”ನಾನಿದನ್ನು ನಿಜವೆಂದೇ ಭಾವಿಸುತ್ತೇನೆ. ಯಾರೋ ಸಾಮಾನ್ಯ ಮನುಷ್ಯರೊಬ್ಬರು ಈ ಪುನರ್ಮಿಲನವನ್ನು ಚಿತ್ರಿಸಿದ್ದಾರೆ ಮತ್ತು ಉದ್ದಕ್ಕೂ ಇವರಿಬ್ಬರೂ ಕ್ಯಾಮೆರಾದೆಡೆ ತಿರುಗಿ ನೋಡಿಲ್ಲ ಎನ್ನುವುದನ್ನು ಗಮನಿಸಿ. ಬಹಳ ಸಹಜವಾಗಿ ಇದು ಮೂಡಿ ಬಂದಿದೆ” ಎಂದಿದ್ದಾರೆ ರಾಜ್​.

ಇದಕ್ಕೆ ಪ್ರತಿಯಾಗಿ ಒಬ್ಬರು, ”ಅಕಸ್ಮಾತ್​ ಇದು ನಟನೆಯಾಗಿದ್ದರೆ, ಅತ್ಯಂತ ಉತ್ತಮವಾದ ನಟನೆಯಾಗಿದೆ. ನಾವು ಇಂಥ ಪರಿಸ್ಥಿತಿಯಲ್ಲಿದ್ದರೆ ಹೇಗೆ ಪ್ರತಿಕ್ರಿಯಿಸುತ್ತಿದ್ದೆವು? ಇದು ಶುದ್ಧ ಪ್ರೀತಿ, ದೈಹಿಕ ಆಕರ್ಷಣೆ ಅಥವಾ ಕಾಮಕ್ಕಿಂತಲೂ ಮಿಗಿಲಾದ ಪ್ರೀತಿ. ಪರಸ್ಪರ ತ್ಯಾಗ, ಗೌರವ ಮತ್ತು ಹೊಂದಾಣಿಕೆ ಎಂದರೆ ಇದೇ. ಹೀಗಿದ್ದವರನ್ನು ಭೂಮಿಯ ಮೇಲಿನ ಯಾವ ಶಕ್ತಿಯೂ ಬೇರ್ಪಡಿಸಲು ಸಾಧ್ಯವೇ ಇಲ್ಲ” ಎಂದಿದ್ದಾರೆ.

ಇನ್ನೊಬ್ಬರು, ”ನನಗಿದು 1996ರಲ್ಲಿ ತೆರೆಕಂಡ ತಮಿಳು ಸಿನೆಮಾವನ್ನು ನೆನಪಿಸುತ್ತಿದೆ, ವಿಜಯ್ ಸೇತುಪತಿ ಮತ್ತು ತ್ರಿಶಾ ಕೃಷ್ಣನ್ ಇದೇ ರೀತಿ ಸಂಭಾಷಣೆಯ ನಡೆಸಿದ್ದಾರೆ.” ಎಂದಿದ್ದಾರೆ. ಮತ್ತೊಬ್ಬರು, ”ನನ್ನ ಪ್ರೊಫೆಸರ್​ಗಳಿಬ್ಬರು ಪ್ರೀತಿಸಿದರು, ಆದರೆ ಮದುವೆಯಾಗಲಿಲ್ಲ. ಜೀವನದುದ್ದಕ್ಕೂ ಒಂಟಿಯಾಗಿಯೇ ಉಳಿದರು. ಆದರೆ ಈ ವಿಡಿಯೋ ಮಾತ್ರ ಅದ್ಭುತ! ಇದು ನಿಜವೇ ಆಗಿದ್ದರೆ ಈ ಪುನರ್ಮಿಲನದ ಬಗ್ಗೆ ಬರೆಯಲು ಶಬ್ದಗಳೇ ಇಲ್ಲ.” ಎಂದಿದ್ದಾರೆ.

70-80ರ ದಶಕರ ಸಿನೆಮಾ ದೃಶ್ಯವನ್ನು ಇದು ನೆನಪಿಸುವಂತಿದೆ. ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

 

Published On - 3:20 pm, Fri, 7 July 23