
ನಾವೆಲ್ಲರೂ ತುಂಬಾನೇ ಅಪ್ಡೇಟ್ ಆಗಿದ್ದೇವೆ. ಆದರೆ ಹಳ್ಳಿಯಲ್ಲಿನ ಕೆಲ ಜನರು ತುಂಬಾನೇ ಮುಗ್ಧರು, ಯಾರು ಏನ್ ಹೇಳಿದ್ರೂ ಕಣ್ಣು ಮುಚ್ಚಿ ನಂಬಿ ಬಿಡ್ತಾರೆ. ಆದರೆ ಅಜ್ಜಿಯೊಬ್ಬರ ಮುಗ್ಧತೆಗೆ ಈ ವಿಡಿಯೋನೇ ಸಾಕ್ಷಿ. ಹೌದು, ಬಸ್ ಫ್ರೀ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ವೃದ್ಧೆಯೊಬ್ಬರು (Old woman) ರೈಲಿನಲ್ಲಿ ಆಧಾರ ಕಾರ್ಡ್ ತೋರಿಸಿ ಟಿಕೆಟ್ ಕಲೆಕ್ಟರ್ ಬಳಿ (Ticket Collector) ಬಳಿ ಟೆಕೆಟ್ ಕೇಳಿದ್ದಾರೆ. ಏನು ಅರಿಯದ ಸ್ವಚ್ಛ ಮನಸ್ಸಿನ ಈ ಅಜ್ಜಿಯ ವಿಡಿಯೋ ಸದ್ಯ ಎಲ್ಲರ ಗಮನ ಸೆಳೆಯುತ್ತಿದೆ.
ಸಿಕಂದರ್ (sikandar) ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾದ ಈ ವಿಡಿಯೋದಲ್ಲಿ ಅಜ್ಜಿಯೊಬ್ಬರು ರೈಲಿನಲ್ಲಿ ಪ್ರಯಾಣಿಸುವುದನ್ನು ಕಾಣಬಹುದು. ಏನು ಅರಿಯದ ಅಜ್ಜಿಯೂ ರೈಲಿನಲ್ಲಿ ಆಧಾರ್ ಕಾರ್ಡ್ ತೋರಿಸಿದ್ರೆ ಫ್ರೀಯಾಗಿ ಪ್ರಯಾಣಿಸಬಹುದು ಅಂದುಕೊಂಡಿದ್ದಾರೆ. ಹೀಗಾಗಿ ಟ್ರೈನ್ ನಲ್ಲಿ ಆಧಾರ್ ಕಾರ್ಡ್ ತೋರಿಸಿ ಅಜ್ಜಿಯೊಬ್ಬರು ಟಿಸಿ ಬಳಿ ಟಿಕೆಟ್ ಕೇಳಿದ್ದಾರೆ. ಮುಗ್ಧ ಅಜ್ಜಿಯನ್ನು ನೋಡಿದ ಟಿಸಿ ಏನು ಹೇಳದೇನೇ ಆಧಾರ್ ಕಾರ್ಡ್ ಕೈಯಲ್ಲಿಡಿದು ನಗುತ್ತಿರುವುದನ್ನು ಕಾಣಬಹುದು. ಆ ಬಳಿಕ ಅಜ್ಜಿಯ ಮುಗ್ಧತೆಗೆ ಕರಗಿ ಹೋಗಿದ್ದಾರೆ.
ರೈಲಿನಲ್ಲಿ ಉಚಿತ ಪ್ರಯಾಣಕ್ಕಾಗಿ ಆಧಾರ್ ಕಾರ್ಡ್ ತೋರಿಸಿದ ಅಜ್ಜಿ…
ಪಾಪ ಆ ಮುಗ್ದ ಮನಸ್ಸಿಗೇನು ಗೊತ್ತು ರೈಲ್ವೆ ಇಲಾಖೆಯನ್ನು ಆಳುವ ಮೋದಿ ಒಬ್ಬ ಬಡವರ ವಿರೋಧಿ ಎಂದು..ಈ ಅಜ್ಜಿಯ ಕನಸು ನನಸಾಗಲು ನಮ್ಮ ರಾಹುಲ್ ಗಾಂಧಿ ಅಥವಾ ಸಿದ್ದರಾಮಯ್ಯ ಪ್ರಧಾನಿಯಾಗಬೇಕು.@siddaramaiah pic.twitter.com/5SOrbD2aqr
— Sikandar – ಸಿಕಂದರ್. (@SikkuTweets) September 26, 2025
ಇದನ್ನೂ ಓದಿ:Video: ಮೆಟ್ರೋದಲ್ಲಿ ಕಂಡ ಅಪರೂಪದ ದೃಶ್ಯ; ಗಂಡನ ಮಡಿಲಿನಲ್ಲಿ ವಿಶ್ರಾಂತಿ ಪಡೆದ ವೃದ್ಧೆ
ಈ ವಿಡಿಯೋವನ್ನು ಅಧಿಕ ಜನರು ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರೊಬ್ಬರು ಯಾವ ತಾಯಿ ಹೆತ್ತ ಮಗನಪ್ಪ ನೀವು ಎಂದು ಕೇಳಿದ್ದಾರೆ. ಇನ್ನೊಬ್ಬರು ಇದು ಯಾಕೋ ಸ್ಕ್ರಿಪ್ಟ್ ತರಹ ಇದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ ನಮ್ಮ ಹಳ್ಳಿ ಜನ ಎಷ್ಟು ಮುಗ್ಧರು ನೋಡಿ, ಏನು ತಿಳಿಯಲ್ಲ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ