ಸಾಮಾಜಿಕ ಜಾಲತಾಣದಲ್ಲಿ ಆಗಾಗ ಕಾಣಿಸಿಕೊಳ್ಳುವ ವಿಡಿಯೋ ನೆಟ್ಟಿಗರನ್ನು ಸೆಳೆಯುತ್ತದೆ. ಇದೀಗ ಮನಕಲಕುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದೆ. ವೃದ್ಧೆಯೊಬ್ಬರಿಗೆ ಊಟ ನೀಡಿದಾಗ ಅವರು ಅದಕ್ಕೆ ಹಣ(Money) ನೀಡಿದ ವಿಡಿಯೋ ವೈರಲ್ (Viral Video) ಆಗಿದೆ. ವಿಡಿಯೋ ನೋಡಿ ನೆಟ್ಟಿಗರನ್ನು ಬೇಸರಗೊಂಡಿದ್ದಾರೆ. ಇನ್ಸ್ಟಾಗ್ರಾಮ್ (Instagram)ನಲ್ಲಿ ಘಂಟಾ ಎನ್ನುವ ಖಾತೆ ವಿಡಿಯೋವನ್ನು ಹಂಚಿಕೊಂಡಿದ್ದು, 1 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ.
ವಿಡೀಯೋದಲ್ಲಿಮನೆಯಿಲ್ಲದೆ ರಸ್ತೆಬದಿ ಕುಳಿತಿದ್ದ ವೃದ್ಧೆಗೆ ವ್ಯಕ್ತಿಯೊಬ್ಬ ನೀರಿನ ಬಾಟಲಿಯನ್ನು ನೀಡುತ್ತಾರೆ. ಅದನ್ನು ಖುಷಿಯಿಂದ ವೃದ್ಧೆ ಸ್ವೀಕರಿಸುತ್ತಾಳೆ. ನಂತರ ಊಟದ ಪ್ಯಾಕ್ಅನ್ನು ನೀಡುತ್ತಾರೆ. ಅದನ್ನೂ ಕೂಡ ತೆಗೆದುಕೊಂಡು ಮುಖದಲ್ಲಿ ಸಂತೋಷವನ್ನು ವ್ಯಕ್ತಪಡಿಸುತ್ತಾರೆ. ನಂತರ ತನ್ನ ಪುಟ್ಟ ಬ್ಯಾಗ್ನಿಂದ ಹಣವನ್ನು ಎತ್ತಿ ನೀಡುತ್ತಾರೆ. ಆದರೆ ಆತ ತೆಗೆದುಕೊಳ್ಳುವುದಿಲ್ಲ. ಆಕೆಯ ಸ್ವಾಭಿಮಾನವನ್ನು ನೋಡಿ ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಅದೇ ರೀತಿ ಆಕೆ ಕಷ್ಟದಲ್ಲಿದ್ದರೂ ಹಣವನ್ನು ನೀಡಿ ಆಹಾರ ತೆಗೆದುಕೊಳ್ಳುತ್ತಿರುವುದನ್ನು ನೋಡಿ ವೀಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ.
ಮನಕಲಕುವ ವಿಡಿಯೋ ನೋಡಿ ಹಲವರು ನೋವನ್ನು ವ್ಯಕ್ತಪಡಿಸಿ ಕಾಮೆಂಟ್ ಮಾಡಿದ್ದಾರೆ. ಸದ್ಯ ವಿಡಿಯೋ ವೈರಲ್ ಆಗಿದ್ದು ಸ್ವಾಭಿಮಾನದ ಬದುಕಿಗೆ ಉದಾಹರಣೆಯಾಗಿದೆ.
ಇದನ್ನೂ ಓದಿ:
ನ್ಯಾನೋ ಕಾರನ್ನು ಹೆಲಿಕಾಪ್ಟರನ್ನಾಗಿಸಿದ ಮೆಕ್ಯಾನಿಕ್: ಮದುವೆ ಮನೆಗಳ ಬೇಡಿಕೆಯ ವಾಹನವಾದ ನ್ಯಾನೋ ಕಾರ್ ಹೆಲಿಕಾಪ್ಟರ್