90 ವರ್ಷಗಳ ಲಿವ್​ಇನ್​ ರಿಲೇಷನ್​ಶಿಪ್​ ​ ಬಳಿಕ 102 ವರ್ಷದ ಅಜ್ಜಿಯನ್ನು ಮದುವೆಯಾದ 100ರ ಅಜ್ಜ

|

Updated on: Dec 07, 2024 | 10:47 AM

ಬರ್ನಿ ಲಿಟ್‌ಮ್ಯಾನ್ (100) ಮತ್ತು ಮಾರ್ಜೋರಿ ಫಿಟರ್‌ಮ್ಯಾನ್ (102) ಅವರು 90 ವರ್ಷಗಳ ಕಾಲ ಲಿವ್-ಇನ್ ಸಂಬಂಧದಲ್ಲಿದ್ದ ನಂತರ ವಿವಾಹವಾಗಿ ಗಿನ್ನೆಸ್ ವಿಶ್ವ ದಾಖಲೆಯನ್ನು ಸೃಷ್ಟಿಸಿದ್ದಾರೆ. ಒಂದೇ ವಿಶ್ವವಿದ್ಯಾನಿಲಯದಲ್ಲಿ ಓದಿದ ಇವರು 2024ರ ಮೇ 3 ರಂದು ವಿವಾಹವಾಗಿದ್ದಾರೆ. ಇವರ ಮದುವೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

90 ವರ್ಷಗಳ ಲಿವ್​ಇನ್​ ರಿಲೇಷನ್​ಶಿಪ್​ ​ ಬಳಿಕ 102 ವರ್ಷದ ಅಜ್ಜಿಯನ್ನು ಮದುವೆಯಾದ 100ರ ಅಜ್ಜ
Oldest Couple's Wedding
Follow us on

ಒಂದೇ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮುಗಿಸಿ ಪರಸ್ಪರ ಪ್ರೀತಿಸಿ 90 ವರ್ಷಗಳ ಕಾಲ ಲಿವ್​ಇನ್​ ರಿಲೇಷನ್​ಶಿಪ್​ ​ನಲ್ಲಿದ್ದ ಜೋಡಿಯೊಂದು ಇದೀಗ ವಿವಾಹವಾಗುವ ಮೂಲಕ ಗಿನ್ನೆಸ್ ವಿಶ್ವ​​ ದಾಖಲೆಯನ್ನು ಸೃಷ್ಟಿಸಿದ್ದಾರೆ. 100 ವರ್ಷದ ಅಜ್ಜನೊಂದಿಗೆ 102 ವಯಸ್ಸಿನ ಅಜ್ಜಿ ಸಪ್ತಪದಿ ತುಳಿದಿದ್ದು, ಈ ಮೂಲಕ ವಿಶ್ವದ ಅತ್ಯಂತ ಹಳೆಯ ನವವಿವಾಹಿತರು ಜೋಡಿ ಎಂಬ ಬಿರುದನ್ನು ಪಡೆದುಕೊಂಡಿದ್ದಾರೆ. ಸದ್ಯ ಇವರ ಮದುವೆ ಸೋಶಿಯಲ್​ ಮೀಡಿಯಾಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಬರ್ನಿ ಲಿಟ್‌ಮ್ಯಾನ್ ಮತ್ತು ಮಾರ್ಜೋರಿ ಫಿಟರ್‌ಮ್ಯಾನ್ ಮೇ 3 ರಂದು ಪೆನ್ಸಿಲ್ವೇನಿಯಾದ ಫಿಲಡೆಲ್ಫಿಯಾದಲ್ಲಿನ ತಮ್ಮ ನಿವಾಸದಲ್ಲಿ ವಿವಾಹವಾಗಿದ್ದಾರೆ. ಬರ್ನಿ, ಮಾಜಿ ಇಂಜಿನಿಯರ್ ಮತ್ತು ಮಾರ್ಜೋರಿ, ನಿವೃತ್ತ ಶಿಕ್ಷಕಿ. ಸದ್ಯ ಇವರ ಮದುವೆಗೆ ಸಂಬಂಧಿಸಿದ ವಿಡಿಯೋ ಸೋಶಿಯಲ್​​ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ಅಲ್ಲಾ..ಹೇಳಬೇಡ,’ಜೈ ಶ್ರೀ ರಾಮ್’ ಹೇಳಬೇಕು ಎಂದು 3 ಮಕ್ಕಳಿಗೆ ಚಪ್ಪಲಿಯಲ್ಲಿ ಹೊಡೆದ ಯುವಕ

ಗಿನ್ನೆಸ್​​ ವಿಶ್ವ ದಾಖಲೆಯ ಅಧಿಕೃತ ಇನ್ಸ್ಟಾಗ್ರಾಮ್​ ಖಾತೆ(www.instagram.com/guinnessworldrecords) ಯಲ್ಲಿ ಇವರ ಮದುವೆಯ ಕುರಿತ ವಿಡಿಯೋ ಹಂಚಿಕೊಳ್ಳಲಾಗಿದ್ದು, ವ್ಯಾಪಕವಾಗಿ ಹರಿದಾಡುತ್ತಿದೆ. ವಿಡಿಯೋ ಹಂಚಿಕೊಂಡ ಕೇವಲ ಒಂದೇ ದಿನದಲ್ಲಿ 1.1 ಮಿಲಿಯನ್​ ಅಂದರೆ 10 ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ಜೊತೆಗೆ 36,820 ನೆಟ್ಟಿಗರು ಲೈಕ್​ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ