Viral: ಬೆಂಗಳೂರಿನಲ್ಲಿ 50 ಕೋಟಿ ರೂ. ಬೆಲೆಯ ಐಷಾರಾಮಿ ಅಪಾರ್ಟ್‌ಮೆಂಟ್ ಖರೀದಿಸಿದ ನಾರಾಯಣ ಮೂರ್ತಿ
ಯುವಕರು ವಾರದಲ್ಲಿ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ಹೇಳಿಕೆ ಕೊಟ್ಟು ಸುದ್ದಿಯಾಗಿದ್ದ ಇನ್ಫೋಸಿಸ್ ಸಹ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಅವರು ಬೆಂಗಳೂರಿನಲ್ಲಿ ದುಬಾರಿ ಮನೆಯೊಂದನ್ನು ಖರೀದಿ ಮಾಡುವ ಮೂಲಕ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಹೌದು ಇವರು ಕಿಂಗ್‌ಫಿಶರ್ ಟವರ್ಸ್‌ನಲ್ಲಿ 50 ಕೋಟಿ ಬೆಲೆಯ ಐಷಾರಾಮಿ ಫ್ಲಾಟ್ ಒಂದನ್ನು ಖರೀದಿ ಮಾಡಿದ್ದು, ಈ ಸುದ್ದಿ ಇದೀಗ ಸಖತ್ ವೈರಲ್ ಆಗುತ್ತಿದೆ.
ಭಾರತದ ಪ್ರಸಿದ್ಧ ಬಿಲಿಯನೇರ್‌ಗಳಲ್ಲಿ ಒಬ್ಬರಾದ ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್.ಆರ್ ನಾರಾಯಣ ಮೂರ್ತಿ ತಮ್ಮ ವ್ಯಾಪಾರ ವ್ಯವಹಾರ, ಸಿದ್ಧಾಂತ ಹಾಗೂ ಲೋಕೋಪಕಾರಗಳಿಂದ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಕೆಲ ತಿಂಗಳುಗಳ ಹಿಂದೆಯಷ್ಟೇ ತಮ್ಮ ನಾಲ್ಕು ತಿಂಗಳ ಮೊಮ್ಮಗನಿಗೆ 240 ಕೋಟಿ ಷೇರು ಉಡುಗೊರೆಯಾಗಿ ನೀಡುವ ಮೂಲಕ ಸುದ್ದಿಯಾಗಿದ್ದ ಇವರು ಇದೀಗ ಬೆಂಗಳೂರಿನಲ್ಲಿ ದುಬಾರಿ ಮನೆಯೊಂದನ್ನು ಖರೀದಿ ಮಾಡುವ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಹೌದು ಇವರು ಅತ್ಯಂತ ದುಬಾರಿ ವಸತಿ ಯೋಜನೆ ಎನಿಸಿಕೊಂಡಿರುವ ಕಿಂಗ್‌ಫಿಶರ್ ಟವರ್ಸ್‌ನಲ್ಲಿ 50 ಕೋಟಿ ಬೆಲೆಯ ಐಷಾರಾಮಿ ಫ್ಲಾಟ್ ಒಂದನ್ನು ಖರೀದಿ ಮಾಡಿದ್ದಾರೆ.
ಬೆಂಗಳೂರಿನ ಹೃದಯ ಭಾಗ ಯುಬಿ ಸಿಟಿಯಲ್ಲಿರುವ ಕಿಂಗ್‌ಫಿಶರ್ ಟವರ್ಸ್‌ನಲ್ಲಿ ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ದುಬಾರಿ ಬೆಲೆಯ ತನ್ನ ಎರಡನೇ ಅಪಾರ್ಟ್‌ಮೆಂಟ್ ಖರೀದಿಸಿದ್ದಾರೆ. 4.5 ಎಕರೆ ವಿಶಾಲವಾದ ಜಾಗದಲ್ಲಿ ನಿರ್ಮಿಸಲಾದ 34 ಅಂತಸ್ತಿತ ಐಶಾರಾಮಿ ಕಟ್ಟಡವಾದ ಕಿಂಗ್‌ಫಿಶರ್ ಟವರ್ಸ್‌ನಲ್ಲಿ ನಾರಾಯಣ ಮೂರ್ತಿ ಬರೋಬ್ಬರಿ 50 ಕೋಟಿ ರೂ. ಬೆಲೆಯ ಅಪಾರ್ಟ್‌ಮೆಂಟ್ ಒಂದನ್ನು ಖರೀದಿ ಮಾಡಿದ್ದಾರೆ.
2020 ರಲ್ಲಿ ಇವರ ಪತ್ನಿ ಸುಧಾ ಮೂರ್ತಿ ಅವರು ಇದೇ ಕಾಂಪ್ಲೆಕ್ಸ್‌ನ 23 ನೇ ಮಹಡಿಯಲ್ಲಿರುವ ಫ್ಲ್ಯಾಟ್ ಒಂದನ್ನು ಬರೋಬ್ಬರಿ 29 ಕೋಟಿ ರೂ. ಗಳಿಗೆ ಖರೀದಿಸಿದ್ದರು. ಇದೀಗ ನಾರಾಯಣ ಮೂರ್ತಿಯವರು ಇದೇ ಕಿಂಗ್‌ಫಿಶರ್ ಟವರ್ಸ್‌ನಲ್ಲಿ 50 ಕೋಟಿ ಬೆಲೆಯ ಐಷಾರಾಮಿ ಫ್ಲಾಟ್ ಒಂದನ್ನು ಖರೀದಿ ಮಾಡಿದ್ದಾರೆ.
ಕಿಂಗ್‌ಫಿಶರ್ ಟವರ್‌ನ 16 ನೇ ಮಹಡಿಯಲ್ಲಿರುವ ಹಾಗೂ 8,400 ಚದರ ಅಡಿಗಳಷ್ಟು ವ್ಯಾಪಿಸಿರುವ ಈ ದುಬಾರಿ ಫ್ಲಾಟ್ 4 ಮಲಗುವ ಕೋಣೆಗಳು, 5 ಕಾರ್ ಪಾರ್ಕಿಂಗ್ ವ್ಯವಸ್ಥೆಗಳನ್ನು ಒಳಗೊಂಡಿದೆ. ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ “50 ಕೋಟಿ ಬೆಲೆಯ ಈ ದುಬಾರಿ ಅಪಾರ್ಟ್‌ಮೆಂಟ್‌ನ ಪ್ರತಿ ಚದರ ಅಡಿ ವೆಚ್ಚವು 59,500 ರೂ. ಗಳಿಷ್ಟಿದೆ. ಇದು ನಗರದ ಅತ್ಯಂತ ದುಬಾರಿ ಅಪಾರ್ಟ್‌ಮೆಂಟ್‌ಗಳಲ್ಲಿ ಒಂದಾಗಿದೆ.”
ಇದನ್ನೂ ಓದಿ: 90 ವರ್ಷಗಳ ಲಿವ್ಇನ್ ರಿಲೇಷನ್ಶಿಪ್ ಬಳಿಕ 102 ವರ್ಷದ ಅಜ್ಜಿಯನ್ನು ಮದುವೆಯಾದ 100ರ ಅಜ್ಜ
ಹಲವು ಕೋಟ್ಯಾಧಿಪತಿಗಳು ಇಲ್ಲಿ ವಾಸವಿದ್ದಾರೆ:
ಕಿಂಗ್‌ಫಿಶರ್ ಟವರ್ಸ್‌ನಲ್ಲಿರುವ ಐಷಾರಾಮಿ ಅಪಾರ್ಟ್‌ಮೆಂಟ್‌ನಲ್ಲಿ ಹಲವು ಕೋಟ್ಯಾಧಿಪತಿಗಳು ವಾಸವಿದ್ದಾರೆ. ಬಯೋಕಾನ್‌ನ ಕಾರ್ಯ ನಿರ್ವಾಹಕ ಅಧ್ಯಕ್ಷರಾದ ಕಿರಣ ಮಜುಂದಾರ್ ಶಾ, ಕಾಂಗ್ರೆಸ್ ನಾಯಕ ಕೆಜೆ ಜಾರ್ಜ್ ಪುತ್ರ ರಾಣಾ ಜಾರ್ಜ್, ಅಮೇರಿಕಾ ಮೂಲದ ಉದ್ಯಮಿ ಕೃಷ್ಣ ಚಿವುಕುಲ ಅವರಂತಹ ಹಲವು ಪ್ರಮುಖರು ಇದೇ ಕಿಂಗ್‌ಫಿಶರ್ ಟವರ್ಸ್ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸವಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ