Viral News: 96 ವರ್ಷ ಹಳೆಯ ಈ ವಿಸ್ಕಿಯ ಬೆಲೆ 12 ಕೋಟಿ ರೂ. 

| Updated By: ಅಕ್ಷಯ್​ ಪಲ್ಲಮಜಲು​​

Updated on: Oct 21, 2023 | 12:56 PM

World's "Most Valuable" Whiskies: ಸಾಮಾನ್ಯವಾಗಿ ಹೆಚ್ಚಿನ ಜನರು ಕುಡಿಯಲು ಮದ್ಯವನ್ನು ಖರೀದಿಸಿದರೆ, ಜಗತ್ತಿನ  ಕೆಲವೊಂದು  ಶ್ರೀಮಂತರು  ಅತೀ ದುಬಾರಿ ಬೆಲೆಯ ವಿಸ್ಕಿ ಬಾಟಲ್ಗಳನ್ನು ತಮ್ಮ ಹವ್ಯಾಸಗಳಿಗಾಗಿ ಸಂಗ್ರಹಿಸಿಡಲು ಖರೀದಿಸುತ್ತಾರೆ. ಇದೀಗ ಅಂತಹದ್ದೇ ಅತೀ  ದುಬಾರಿ ಬೆಲೆಯ ಸ್ಕಾಚ್ ವಿಸ್ಕಿಯೊಂದನ್ನು  ಹರಾಜಿಗಿಡಲಾಗಿದೆ. ಇದರ ಬೆಲೆ ಸುಮಾರು 12 ಕೋಟಿ ರೂಪಾಯಿಗಳು. 

Viral News: 96 ವರ್ಷ ಹಳೆಯ ಈ ವಿಸ್ಕಿಯ ಬೆಲೆ 12 ಕೋಟಿ ರೂ. 
ವೈರಲ್​​ ಫೋಟೋ
Follow us on

ಸಾಮಾನ್ಯವಾಗಿ ಹೆಚ್ಚಿನ ಜನರು ಕುಡಿಯಲು ಮದ್ಯವನ್ನು ಖರೀದಿಸುತ್ತಾರೆ. ಆದರೆ ಕೆಲವು ಶ್ರೀಮಂತರು ತಮ್ಮ ಹವ್ಯಾಸಗಳಿಗಾಗಿ ದುಬಾರಿ ಬೆಲೆಯ ಮದ್ಯದ ಬಾಟಲಿಗಳನ್ನು ಖರೀದಿಸುತ್ತಾರೆ. ಇಂತಹ ಕೆಲವೇ ಕೆಲವು ದುಬಾರಿ ಬೆಲೆಯ ವಿಸ್ಕಿ ಬಾಟಲ್​​ಗಳಿವೆ. ಪ್ರಪಂಚದಾದ್ಯಂತ ಬಿಲಿಯನೇರ್​​ಗಳು ಅವುಗಳನ್ನು ಖರೀದಿಸಲು ಪೈಪೋಟಿ ನಡೆಸುತ್ತಾರೆ. ಈಗ ಇಂತಹದ್ದೇ 96 ವರ್ಷ ಹಳೆಯ ಮಕಲನ್ ಅದಾಮಿ 1926 ಸಿಂಗಲ್ ಮಾಲ್ಟ್ ವಿಸ್ಕಿ ಬಾಟಲಿಯೊಂದನ್ನು ಇದೇ ನವೆಂಬರ್  18ರಂದು ಲಂಡನ್​​ನಲ್ಲಿ ಸೋಥೆವಿಯ ಸ್ಪಿರಿಟ್ಸ್  ಸಂಸ್ಥೆ  ಹರಾಜಿಗಿಡಲಾಗಿದೆ. ಈ ವಿಂಟೇಜ್ ಸ್ಕಾಚ್ ವಿಸ್ಕಿಯ  ಬೆಲೆ 1.2 ಮಿಲಿಯನ್ ಪೌಂಡ್ ಅಂದರೆ ಬರೋಬ್ಬರಿ12 ಕೋಟಿ ರೂಪಾಯಿಗಳಷ್ಟು.

ಮಕಲನ್ ಅದಾಮಿ 1926 ನ್ನು ಪ್ರಪಂಚದ ಅತ್ಯಂತ ಬೆಳೆಬಾಳುವ ಸ್ಕಾಚ್ ವಿಸ್ಕಿಗಳಲ್ಲಿ ಒಂದೆಂದು ವ್ಯಾಪಕವಾಗಿ ಪರಿಗಣಿಸಲಾಗಿದೆ.  ಈ ಮೊದಲು ಇದೇ ಬ್ರಾಂಡ್ನ ವಿಸ್ಕಿಯನ್ನು ಸುಮಾರು 15 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಲಾಗಿತ್ತು. ಇದು ಈವರೆಗೆ ಮಾರಾಟವಾದ ಅತ್ಯಂತ ದುಬಾರಿ ಬೆಲೆಯ ಸ್ಕಾಚ್ ವಿಸ್ಕಿ ಎಂಬ ದಾಖಲೆಯನ್ನು ಮಾಡಿದೆ.

ಇದನ್ನೂ ಓದಿ: ಈ ಪುಟ್ಟ ಕಂದಮ್ಮನ ಡ್ಯಾನ್ಸ್ ನೋಡಿದ್ರೆ, ನೀವು ಬಾದಲ್ ಬರ್ಸಾ ಬಿಜುಲಿಗೆ ಸ್ಟೆಪ್​​​ ಹಾಕುವುದು ಖಂಡಿತ 

ಮಕಲನ್ ಅದಾಮಿ 1926 ವಿಶ್ವದ ಅಪರೂಪದ ವಿಸ್ಕಿಗಳಲ್ಲಿ ಒಂದಾಗಿದೆ:

ಈ ವಿಂಟೇಜ್ ಸ್ಕಾಚ್ ವಿಸ್ಕಿಯನ್ನು ಪ್ರಪಂಚದ ಅಪರೂಪದ ಹಾಗೂ ಬೆಲೆಬಾಳುವ ವಿಸ್ಕಿಗಳಲ್ಲಿ ಒಂದು.   ಈವರೆಗೆ ಕೇವಲ 40 ಬಾಟಲಿ ಮಕಲನ ಬ್ರಾಂಡ್ ವಿಸ್ಕಿಗಳನ್ನು ಮಾತ್ರ ಉತ್ಪಾದಿಸಲಾಗಿದ್ದು, ಆರು ದಶಕಗಳ ಶೆರ್ರಿ ಕಂಟೇನರ್ನಲ್ಲಿ  ಪಕ್ವಗೊಳಿಸಿ ನಂತರ ಈ ವಿಸ್ಕಿಯನ್ನು 1986 ಬಾಟಲಿಗಳಿಗೆ ತುಂಬಿಸಲಾಯಿತು. ಈ 40 ಬಾಟಲಿಗಳಲ್ಲಿ ಇದುವರೆಗೆ ಕೇವಲ ಒಂದು ಬಾಟಲಿ ವಿಸ್ಕಿಯನ್ನು ಮಾತ್ರ ತೆರೆದು ಸೇವಿಸಲಾಗಿದೆ. ಇದೇ ಕಾರಣಕ್ಕಾಗಿ ಮಕಲನ ಅದಾಮಿ ಇಷ್ಟೊಂದು ಬೆಲೆಬಾಳುವ ವಿಸ್ಕಿಯಾಗಿದೆ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ