ಏನ್​​ ತಲೆ ಗುರು ಇವಂದು​​: ಚೆನ್ನಾಗಿ ರೆಸ್ಟೋರೆಂಟ್​​​ಗಳಲ್ಲಿ  ತಿನ್ನುವುದು, ಬಿಲ್ ಬರುವಾಗ ಹಾರ್ಟ್ ಅಟ್ಯಾಕ್ ನಾಟಕವಾಡುವುದು!

ಈ ಪ್ರಪಂಚವೇ ಒಂದು  ರಂಗಭೂಮಿ. ಇಲ್ಲಿ ಜನರು ಒಂದಲ್ಲಾ ಒಂದು ರೀತಿಯ ಸಣ್ಣಪುಟ್ಟ ಸುಳ್ಳುಗಳನ್ನು ಹೇಳುತ್ತಾ, ನಾಟಕವಾಡುತ್ತಾ ಬದುಕುತ್ತಿರುತ್ತಾರೆ. ಅದೇ ರೀತಿ ಇಲ್ಲೊಬ್ಬ ಭೂಪ  ರೆಸ್ಟೋರೆಂಟ್ಗಳಲ್ಲಿ ಚೆನ್ನಾಗಿ ತಿಂದು ಭಾರಿ ಮೊತ್ತದ ಬಿಲ್ ಪಾವತಿ ಮಾಡಲು ನಾನ್ನಿಂದ ಸಾಧ್ಯವಿಲ್ಲ ಎಂದು  ಹಾರ್ಟ್ ಅಟ್ಯಾಕ್ ನಾಟಕವನ್ನಾಡಿ ಕೊನೆಗೆ ಇದೀಗ ಪೋಲಿಸರ ಅಥಿತಿಯಾಗಿದ್ದಾನೆ.

ಏನ್​​ ತಲೆ ಗುರು ಇವಂದು​​: ಚೆನ್ನಾಗಿ ರೆಸ್ಟೋರೆಂಟ್​​​ಗಳಲ್ಲಿ  ತಿನ್ನುವುದು, ಬಿಲ್ ಬರುವಾಗ ಹಾರ್ಟ್ ಅಟ್ಯಾಕ್ ನಾಟಕವಾಡುವುದು!
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Oct 20, 2023 | 5:01 PM

ಪ್ರಪಂಚದಾದ್ಯಂತ ಅನೇಕ ಜನರು ಒಂದಲ್ಲಾ ಒಂದು ರೀತಿಯಲ್ಲಿ ಮೋಸ ಮಾಡುತ್ತಾ, ಮುಗ್ಧ ಜನರಿಗೆ ಟೋಪಿ ಹಾಕುತ್ತಾ ಜೀವನ ನಡೆಸುತ್ತಿರುತ್ತಾರೆ. ಮೋಸ ಹೋಗುವವರು ಇರುವವರೆಗೂ  ಮೋಸ ಮಾಡುವವರು ಇದ್ದೇ ಇರುತ್ತಾರೆ. ಹೀಗೆ ಅದೆಷ್ಟೋ ಮೋಸದ ಕತೆಗಳನ್ನು ನಾವು ನೋಡಿರುತ್ತೇವೆ. ಅದೇ ರೀತಿ ಇಲ್ಲೊಂದು ಇಂತಹದ್ದೇ ವಿಚಿತ್ರ ಮೋಸದ ಕತೆಯೊಂದು ಬೆಳಕಿಗೆ ಬಂದಿದೆ.  50 ವರ್ಷ ವಯಸ್ಸಿನ ವ್ಯಕ್ತಿಯೊಬ್ಬ ದೊಡ್ಡ ದೊಡ್ಡ  ಹೋಟೆಲ್ ಹಾಗೂ ರೆಸ್ಟೋರೆಂಟ್​ಗಳಿಗೆ  ಹೋಗಿ ಚೆನ್ನಾಗಿ ತಿಂದು ನಂತರ ಬಿಲ್ ಪಾವತಿ ಮಾಡುವ ಸಮಯದಲ್ಲಿ ಹೃದಯಾಘಾತದ ನಾಟಕವನ್ನಾಡಿ ಬಿಲ್ ಪಾವತಿ ಮಾಡದೆ ಎಸ್ಕೇಪ್ ಆಗುತ್ತಿದ್ದ. ಈತ ಒಂದಲ್ಲಾ ಎರಡಲ್ಲಾ ಬರೋಬ್ಬರಿ 20 ರೆಸ್ಟೋರೆಂಟ್ಗಳಲ್ಲಿ ಈ ರೀತಿಯ ನಾಟಕವನ್ನಾಡಿ ಹೋಟೆಲ್ ಮಾಲೀಕರಿಗೆ ಪಂಗನಾಮ ಹಾಕಿದ್ದಾನೆ. ಕಳ್ಳರೂ ಎಷ್ಟೇ ಜಾನತಣದಿಂದ ತಪ್ಪು ಮಾಡಿದರು ಕೊನೆಗೆ ಒಂದಲ್ಲಾ ಒಂದು ದಿನ  ಸಿಕ್ಕಿ ಹಾಕಿಕೊಳ್ಳುತ್ತಾರೆ.  ಅದೇ ರೀತಿ ಈಗ ಈತನ ನಾಟಕಕ್ಕೂ ತೆರೆಬಿದ್ದಿದ್ದು,  ಬಿಟ್ಟಿ ಭರ್ಜರಿ ಭೋಜನದ ಆಸೆಗೆ ಬಿದ್ದು, ಇದೀಗ ಜೈಲು ಸೇರಿದ್ದಾನೆ.

ಸ್ಪೇನ್ ದೇಶದ ಬ್ಲಾಂಕಾ ಎಂಬ ಪ್ರದೇಶದ ಅಲಿಕಾಂಟೆ ನಗರದಲ್ಲಿ ಈ ಘಟನೆ ನಡೆದಿದ್ದು,  ಈ ಭೂಪ ಹಲವು ಸಮಯಗಳಿಂದ ಇಲ್ಲಿನ ಪ್ರಸಿದ್ಧ ಹೋಟೆಲ್ ಮತ್ತು ರೆಸ್ಟೋರೆಂಟ್ಗಳಿಗೆ ಹೋಗಿ ಚೆನ್ನಾಗಿ ತಿಂದು ನಂತರ ಬಿಲ್ ಪಾವತಿ ಮಾಡಬೇಕಾಗುತ್ತದೆ ಎಂಬ ಕಾರಣಕ್ಕೆ ಹೃದಯಾಘಾತದ ನಾಟಕವನ್ನಾಡುತ್ತಾನೆ. ಇದನ್ನು ನಿಜವೆಂದು ನಂಬುವ ರೆಸ್ಟೋರೆಂಟ್ ಸಿಬ್ಬಂದಿಗಳು ಮಾನವೀಯತೆಯ ದೃಷ್ಟಿಯಿಂದ  ಈತನ ಊಟದ ಬಿಲ್ ಅನ್ನು ಲೆಕ್ಕಿಸದೆ ಆತನನ್ನು ಆಸ್ಪತ್ರೆಗೆ ಸಾಗಿಸುತ್ತಾರೆ. ಒಂದಲ್ಲಾ ಎರಡಲ್ಲಾ ಬರೋಬ್ಬರಿ 20 ರೆಸ್ಟೋರೆಂಟ್​​ಗಳಲ್ಲಿ ಹಾರ್ಟ್ ಅಟ್ಯಾಕ್ ನಾಟಕವನ್ನಾಡಿ,  ಕೊನೆಯಲ್ಲಿ ಪೋಲಿಸರ ಅಥಿತಿಯಾಗಿದ್ದಾನೆ.

ಇದನ್ನೂ ಓದಿ: ಇದು ವಿಶ್ವದ ಅತೀ ಖಾರದ ಮೆಣಸು, ವಿಶ್ವ ದಾಖಲೆ ಸೇರಿದ ಪೆಪ್ಪರ್ ಎಕ್ಸ್

ಇತ್ತೀಚಿಗಷ್ಟೇ  ಅಲಿಕಾಂಟೆ ನಗರದಲ್ಲಿನ ಎಲ್ ಬ್ಯೂನ್ ಕಮರ್ ಎಂಬ ರೆಸ್ಟೋರೆಂಟ್ಗೆ ಹೋಗಿದ್ದ, ಈತ ಅಲ್ಲಿ ಸುಮಾರು 36 ಡಾಲರ್ ಬೆಲೆಯ ಸಮುದ್ರಾಹಾರ ಮತ್ತು ವಿಸ್ಕಿಯನ್ನು ಸೇವಿಸುತ್ತಾನೆ. ಹಾಗೂ ಇತ ಬಿಲ್ ಪಾವತಿಸುವ ವೇಳೆ, ಈ ಹಿಂದೆ ಮಾಡಿದಂತೆ  ಇಲ್ಲಿಯೂ ಹೃದಯಾಘಾತದ ನಾಟಕವನ್ನಾಡುತ್ತಾನೆ. ಆದರೆ ಈತನ ನಾಟಕಕ್ಕೆ ಮರುಳಾಗದ ಹೋಟೆಲ್ ಸಿಬ್ಬಂದಿ ಅಂಬ್ಯುಲೆನ್ಸ್ ಬದಲಿಗೆ ಪೋಲಿಸರಿಗೆ ಫೋನ್ ಮಾಡಿದ್ದಾನೆ. ಪೋಲಿಸರು ಸ್ಥಳಕ್ಕೆ ಧಾವಿಸಿದಾಗ ಈತನ ಮೋಸದ ಕತೆ ಬೆಳಕಿಗೆ  ಬಂದಿದೆ. ಇದೀಗ ಈತ ಪೋಲಿಸರ ಅಥಿತಿಯಾಗಿದ್ದಾನೆ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 5:01 pm, Fri, 20 October 23

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್