
ಇಂಟರ್‌ನೆಟ್‌ನಲ್ಲಿ ಸಾಕಷ್ಟು ಆಪ್ಟಿಕಲ್ ಇಲ್ಯೂಷನ್ (Optical Illusion) ಫೋಟೋಗಳು ಹರಿದಾಡುತ್ತಿರುತ್ತವೆ. ಇಂತಹ ಫೋಟೋಗಳಲ್ಲಿ ಅಡಗಿರುವ ಒಗಟುಗಳನ್ನು ಬಿಡಿಸುವುದು ಸವಾಲಿನ ಕೆಲಸವೇ ಸರಿ. ಈ ಒಗಟಿನ ಚಿತ್ರಗಳು ನೋಡಲು ಸುಲಭವಾಗಿ ಕಂಡರೂ ಒಗಟು ಬಿಡಿಸುವುದು ಅಷ್ಟು ಸುಲಭವಲ್ಲ. ನೀವು ಬುದ್ಧಿ ಖರ್ಚು ಮಾಡಬೇಕಾಗುತ್ತದೆ. ನೀವೇನಾದ್ರೂ ವೀಕ್ಷಣಾ ಕೌಶಲ್ಯವನ್ನು ಪರೀಕ್ಷೆಗೆ ಒಳಪಡಿಸಲು ಬಯಸಿದ್ರೆ ಈ ಒಗಟನ್ನು ಪ್ರಯತ್ನಿಸಿ. ಈ ಚಿತ್ರದಲ್ಲಿ ನಿಮ್ಮ ಕಣ್ಣಿಗೆ ಕಾಣದಂತೆ ಮೀನನ್ನು (fish) ಮರೆ ಮಾಡಲಾಗಿದೆ. ಈ ಮೀನನ್ನು ಹುಡುಕಲು ನಿಮಗೆ ಕೇವಲ ಒಂಬತ್ತು ಸೆಕೆಂಡುಗಳಿವೆ. ಒಗಟು ಬಿಡಿಸಲು ನಿಮ್ಮಿಂದ ಸಾಧ್ಯವೇ ಎಂದು ಪ್ರಯತ್ನಿಸಿ ನೋಡಿ.
ಆಪ್ಟಿಕಲ್ ಇಲ್ಯೂಷನ್ ಚಿತ್ರವನ್ನು ಗಮನಿಸಿದಾಗ ಮೊದಲ ನೋಟದಲ್ಲಿ, ಚಿತ್ರವು ಸಾಕಷ್ಟು ಮುಗ್ಧವಾಗಿ ಕಾಣುತ್ತದೆ. ಒಂದು ಬೆಕ್ಕು ಶಾಂತವಾಗಿ ಕುಳಿತಿದೆ. ಕೋಣೆಯ ಸುತ್ತಲೂ ಗೊಂದಲಮಯ ಚಿತ್ರಣವನ್ನು ಹೊಂದಿದ್ದಂತೆ ಕಾಣುತ್ತದೆ. ಈ ಬೆಕ್ಕಿನ ಹಿಂಭಾಗದಲ್ಲಿ ನಾಯಿಯೊಂದು ಕುತೂಹಲದಿಂದ ಪೆಟ್ಟಿಗೆಯಿಂದ ಇಣುಕುತ್ತಿದೆ. ಬೆಕ್ಕಿನ ಮುಖಭಾವವು ನಿಮ್ಮನ್ನು ಗೊಂದಲಕ್ಕೀಡು ಮಾಡುತ್ತದೆ. ಆದರೆ ಇಲ್ಲಿ ಸವಾಲೊಂದು ಇದೆ. ನಿಮ್ಮ ಗುರಿ ಬೆಕ್ಕು ಅಥವಾ ನಾಯಿಯ ಮೇಲೆ ಕೇಂದ್ರೀಕರಿಸುವುದು ಅಲ್ಲ. ಈ ಚಿತ್ರದಲ್ಲಿ ಮೀನನ್ನು ಜಾಣತನದಿಂದ ಮರೆಮಾಡಲಾಗಿದೆ. ಮೀನನ್ನು ನಿರ್ದಿಷ್ಟ ಸಮಯದೊಳಗೆ ಹುಡುಕಬೇಕು. ನಿಮಗಿರುವ ಸಮಯಾವಕಾಶ ಒಂಬತ್ತು ಸೆಕೆಂಡುಗಳು ಮಾತ್ರ.
ಇದನ್ನೂ ಓದಿ: ಈ ಚಿತ್ರದಲ್ಲಿ ಕಲ್ಲುಗಳ ನಡುವೆ ಅಡಗಿದೆ ಕಪ್ಪೆ, ನೀವು ಈ ಉಭಯವಾಸಿ ಜೀವಿಯನ್ನು ಹುಡುಕಬಲ್ಲಿರಾ
ಎಷ್ಟೆ ತಲೆಕೆಡಿಸಿಕೊಂಡರೂ, ಕಣ್ಣು ಅಗಲಿಸಿ ನೋಡಿದರೂ ಈ ಚಿತ್ರದಲ್ಲಿ ಮರೆಮಾಡಲಾಗಿರುವ ಬೆಕ್ಕನ್ನು ಗುರುತಿಸಲು ಸಾಧ್ಯವಾಗಿಲ್ಲವೇ. ಇದು ನಿಮಗೆ ಮಾತ್ರವಲ್ಲ, ಅತ್ಯುತ್ತಮ ವೀಕ್ಷಣಾ ಕೌಶಲ್ಯ ಹೊಂದಿದ್ದವರಿಗೂ ಇಂತಹ ಒಗಟಿನ ಚಿತ್ರಗಳನ್ನು ಬಿಡಿಸವುದು ಕಷ್ಟವಾಗುತ್ತದೆ. ಮೀನು ಎಲ್ಲಿದೆ ಎನ್ನುವ ಸುಳಿವನ್ನು ನಾವೇ ನಿಮಗೆ ನೀಡುತ್ತೇವೆ. ಈ ಚಿತ್ರದಲ್ಲಿರುವ ಮೀನು ನಿಜವಲ್ಲ,. ಹೂದಾನಿಯ ಮೇಲೆ ಮೀನನ್ನು ಚಿತ್ರಿಸಲಾಗಿದೆ. ಈ ಮೀನಿನ ವಿನ್ಯಾಸವು ಅಲಂಕಾರದೊಂದಿಗೆ ಎಷ್ಟು ಸರಾಗವಾಗಿ ಬೆರೆತುಹೋಗಿದೆ ಎಂದರೆ ನಿಮ್ಮ ಕಣ್ಣನ್ನು ಒಂದು ಕ್ಷಣ ಮೋಸಗೊಳಿಸುತ್ತದೆ. ಒಂಬತ್ತು ಸೆಕೆಂಡುಗಳಿಗಿಂತ ಕಡಿಮೆ ಅವಧಿಯಲ್ಲಿ ನೀವು ಮೀನನ್ನು ಹುಡುಕುವಲ್ಲಿ ಯಶಸ್ವಿಯಾದರೆ, ಅಭಿನಂದನೆಗಳು. ಮೀನು ಎಲ್ಲಿದೆ ಎಂದು ಈ ಕೆಳಗಿನ ಚಿತ್ರದಲ್ಲಿ ಕೆಂಪು ಬಣ್ಣದಲ್ಲಿ ಗುರುತಿಸಿದ್ದೇವೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ