Optical Illusion: ಮರದಲ್ಲಿ ಅಡಗಿ ಕುಳಿತಿದೆ ಮುದ್ದಾದ ಬೆಕ್ಕು, 7 ಸೆಕೆಂಡುಗಳಲ್ಲಿ ಗುರುತಿಸಿ

ಸಾಮಾಜಿಕ ಜಾಲತಾಣದಲ್ಲಿ ಕಣ್ಣು ಮತ್ತು ಮೆದುಳಿಗೆ ಸವಾಲೊಡ್ಡುವ ಕುತೂಹಲಕಾರಿ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಅವುಗಳಲ್ಲಿ ಕೆಲವು ನಮ್ಮ ಕಣ್ಣಿನ ಸೂಕ್ಷ್ಮತೆ ಮತ್ತು ಯೋಚನಾ ಸಾಮರ್ಥ್ಯವನ್ನು ಪರೀಕ್ಷಿಸುವಂತಿದ್ದರೆ ಕೆಲವೊಂದು ನಮ್ಮ ವ್ಯಕ್ತಿತ್ವವನ್ನು ಬಹಿರಂಗ ಪಡಿಸುತ್ತದೆ. ಇದೀಗ ಅಂತಹದ್ದೇ ಚಿತ್ರವೊಂದು ವೈರಲ್‌ ಆಗಿದ್ದು, ಈ ಚಿತ್ರದಲ್ಲಿ ಅಡಗಿರುವ ಬೆಕ್ಕನ್ನು ನೀವು ಗುರುತಿಸಬೇಕು. ಈ ನಿರ್ದಿಷ್ಟ ಸಮಯದೊಳಗೆ ಈ ಒಗಟು ಬಿಡಿಸಲು ಸಾಧ್ಯವೇ ಎಂದು ನೋಡಿ.

Optical Illusion: ಮರದಲ್ಲಿ ಅಡಗಿ ಕುಳಿತಿದೆ ಮುದ್ದಾದ ಬೆಕ್ಕು, 7 ಸೆಕೆಂಡುಗಳಲ್ಲಿ ಗುರುತಿಸಿ
ಆಪ್ಟಿಕಲ್‌ ಇಲ್ಯೂಷನ್‌ ಚಿತ್ರ
Image Credit source: Social Media

Updated on: Oct 19, 2025 | 10:39 AM

ಟ್ರಿಕ್ಕಿಯಾಗಿರುವ ಒಗಟುಗಳನ್ನು ಬಿಡಿಸುವುದರ ಮಜಾನೇ ಬೇರೆ. ಹೆಚ್ಚಿನವರು ಇಂತಹ ಆಪ್ಟಿಕಲ್‌ ಇಲ್ಯೂಷನ್‌ ನಂತಹ (Optical Illusion) ಒಗಟಿನ ಚಿತ್ರಗಳತ್ತ ಹೆಚ್ಚು ಆಸಕ್ತಿ ತೋರಿಸುತ್ತಾರೆ. ಚಿತ್ರ ನೋಡಿದ ಕೂಡಲೇ ಉತ್ತರ ಕಂಡುಕೊಳ್ಳಲು ಕಷ್ಟವಾಗುತ್ತದೆ. ಬುದ್ಧಿವಂತರಿಗೆ ಒಗಟಿನ ಚಿತ್ರ ಬಿಡಿಸುವುದು ಸುಲಭದಾಯಕ. ಇದೀಗ ಅಂತಹದ್ದೇ ಟ್ರಿಕ್ಕಿಯಾಗಿರುವ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರ ವೈರಲ್ ಆಗಿದ್ದು, ಈ ಚಿತ್ರದಲ್ಲಿರುವ ಬೆಕ್ಕು (Cat) ಅಡಗಿ ಕುಳಿತಿದೆ. ಹೀಗಾಗಿ ನೀವು ಏಳು ಸೆಕೆಂಡುಗಳ ಒಳಗೆ ಈ ಬೆಕ್ಕನ್ನು ಕಂಡುಹಿಡಿಯಬೇಕು. ಈ ಒಗಟು ಬಿಡಿಸಲು ಸಾಧ್ಯವಾದರೆ ನೀವು ಅತೀ ಬುದ್ಧಿವಂತರು ಹಾಗೂ ಚುರುಕು ಸ್ವಭಾವವುಳ್ಳವರು ಎನ್ನುವುದು ಖಚಿತವಾಗುತ್ತದೆ.

ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ಏನಿದೆ ನೋಡಿ

ಇದೊಂದು ನಿಮ್ಮನ್ನು ಭ್ರಮೆಗೆ ಒಳಪಡಿಸುವ ಒಗಟಿನ ಚಿತ್ರವಾಗಿದೆ. ವೈರಲ್ ಆಗಿರುವ ಈ ಚಿತ್ರದಲ್ಲಿ ಮರವೊಂದು ನಿಮ್ಮ ಕಣ್ಣಿಗೆ ಗೋಚರಿಸುತ್ತದೆ. ಆದರೆ ಈ ಮರದ ಮೇಲೆ ಬೆಕ್ಕು ಅಡಗಿ ಕುಳಿತಿದೆ. ಈ ಫೋಟೋದಲ್ಲಿರುವ ಸವಾಲು ಬೆಕ್ಕು ಎಲ್ಲಿದೆ ಎಂಬುದನ್ನು ಕಂಡುಹಿಡಿಯುವುದು. ನೀವು 7 ಸೆಕೆಂಡುಗಳಲ್ಲಿ ಬೆಕ್ಕನ್ನು ಹುಡುಕಲು ಸಾಧ್ಯವಾದರೆ, ನಿಮ್ಮ ವೀಕ್ಷಣಾ ಕೌಶಲ್ಯಕ್ಕೆ ಉತ್ತಮವಾಗಿದೆ ಎಂದರ್ಥ.

ಈ ಸವಾಲನ್ನು ನೀವು ಸ್ವೀಕರಿಸಿದ್ದೀರಾ?

ಈ ಚಿತ್ರದಲ್ಲಿನ ಮರವನ್ನು ಎಷ್ಟು ಗಮನಿಸಿದರೂ ಅಷ್ಟು ಸುಲಭವಾಗಿ ನಿಮ್ಮ ಕಣ್ಣಿಗೆ ಬೆಕ್ಕು ಕಾಣುವುದಿಲ್ಲ. ಇಂತಹ ಕೆಲವು ಒಗಟನ್ನು ಬಿಡಿಸುವಾಗ ತಾಳ್ಮೆ ಹಾಗೂ ಏಕಾಗ್ರತೆ ಬಹಳ ಮುಖ್ಯ.ಈ ಆಪ್ಟಿಕಲ್ ಇಲ್ಯೂಷನ್ ಚಿತ್ರವನ್ನು ನೋಡಿದಾಗ ಸಾಮಾನ್ಯವಾಗಿ ನೀವು ಗೊಂದಲಕ್ಕೆ ಒಳಗಾಗುವುದು ಸಹಜ. ನೀವು ಈಗ ಈ ಮರದಲ್ಲಿ ಅಡಗಿರುವ ಬೆಕ್ಕನ್ನು ಹುಡುಕುವ ಸವಾಲನ್ನು ಸ್ವೀಕರಿಸಲು ಸಿದ್ಧವಿದ್ದೀರಾ. ಹಾಗಾದ್ರೆ ನಿಮ್ಮ ಸಮಯ ಈಗಲೇ ಆರಂಭವಾಗುತ್ತದೆ.

ಇದನ್ನೂ ಓದಿ
ಮಹಿಳೆಯ ಮುಖದ ನಡುವೆ ಅಡಗಿರುವ ಪುರುಷನನ್ನು ಗುರುತಿಸಿ
ಈ ಸುಂದರವಾದ ಕಾಡಿನಲ್ಲಿ ಅಡಗಿರುವ ಅಳಿಲನ್ನು ಹುಡುಕಿ
ಈ ಚಿತ್ರದಲ್ಲಿ ಅಡಗಿರುವ ಪಾಂಡಗಳನ್ನು ಗುರುತಿಸಿ
ಈ ಚಿತ್ರದಲ್ಲಿ ಅಡಗಿರುವ ಬೆಕ್ಕನ್ನು ಕಂಡು ಹಿಡಿಯಿರಿ

ಇದನ್ನೂ ಓದಿ:Optical Illusion: ಮಹಿಳೆಯ ಮುಖದ ನಡುವೆ ಅಡಗಿರುವ ಪುರುಷನನ್ನು ಗುರುತಿಸಿ

ಬೆಕ್ಕನ್ನು ಕಂಡು ಹಿಡಿಯಲು ನಿಮಗೆ ಸಾಧ್ಯವಾಯಿತೇ?

ಎಷ್ಟೇ ಪ್ರಯತ್ನಪಟ್ಟರೂ ಮರದಲ್ಲಿ ಅಡಗಿರುವ ಬೆಕ್ಕನ್ನು ಗುರುತಿಸಲು ಸಾಧ್ಯವಾಗಿಲ್ಲವೇ. ಇದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ. ನಿಮಗೆ ಸುಳಿವನ್ನು ನಾವು ನೀಡುತ್ತೇವೆ. ಈ ಮರದಲ್ಲಿ ಅಡಗಿ ಕುಳಿತಿರುವುದು ಕಪ್ಪು ಬಣ್ಣದ ಬೆಕ್ಕು. ಈ ಪ್ರಾಣಿಯನ್ನು ಹುಡುಕಲು ತಾಳ್ಮೆ ಅಗತ್ಯ. ಒಮ್ಮೆ ಏಕಾಗ್ರತೆಯಿಂದ ಈ ಚಿತ್ರದತ್ತ ಕಣ್ಣು ಹಾಯಿಸಿ. ಬೆಕ್ಕು ಕಂಡು ಹಿಡಿಯಲು ಸಾಧ್ಯವಾಗಿದ್ದರೆ ನಿಮಗೆ ಅಭಿನಂದನೆಗಳು. ಕೆಲವರಿಗೆ ಬೆಕ್ಕನ್ನು ಗುರುತಿಸಿರುವುದು ಕಷ್ಟವಾಗಿರಬಹುದು. ಹೀಗಾಗಿ ಈ ಮೇಲಿನ ಚಿತ್ರದಲ್ಲಿ ಗಮನಿಸಿ. ಈ ಮರದಲ್ಲಿ ಬೆಕ್ಕು ಎಲ್ಲಿದೆ ಎಂದು ಕೆಂಪು ಬಣ್ಣದಿಂದ ಗುರುತಿಸಿದ್ದೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ