
ಇತ್ತೀಚೆಗಿನ ದಿನಗಳಲ್ಲಿ ದೃಷ್ಟಿ ಸಾಮರ್ಥ್ಯ ಮತ್ತು ಮೆದುಳನ್ನು ಚುರುಕುಗೊಳಿಸುವ ಆಪ್ಟಿಕಲ್ ಇಲ್ಯೂಷನ್ (optical illusion) ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ. ಇಂತಹ ಅನೇಕ ಚಿತ್ರಗಳು ಕಣ್ಣಿನ ಸೂಕ್ಷ್ಮತೆ ಹಾಗೂ ಯೋಚನಾ ಸಾಮರ್ಥ್ಯವನ್ನು ಪರೀಕ್ಷಿಸುತ್ತವೆ. ಹೀಗಾಗಿ ಹೆಚ್ಚಿನವರು ಈ ಒಗಟಿನ ಚಿತ್ರ ಬಿಡಿಸುವ ಮೂಲಕ ತಮ್ಮ ದೃಷ್ಟಿ ಸಾಮರ್ಥ್ಯವನ್ನು ಪರೀಕ್ಷಿಸಿಕೊಳ್ಳಲು ಮುಂದಾಗುತ್ತಾರೆ. ಇದೀಗ ವೈರಲ್ ಆಗಿರುವ ಚಿತ್ರದಲ್ಲಿ ಶ್ವಾನವೊಂದು ಅಡಗಿದೆ. ಹೀಗಾಗಿ ನೀವು ಶ್ವಾನ ಎಲ್ಲಿದೆ ಎಂದು ಹುಡುಕಿ ನೋಡೋಣ. ಈ ಒಗಟಿನ ಚಿತ್ರ ಬಿಡಿಸಲು ಏಳು ಸೆಕೆಂಡುಗಳು ಮಾತ್ರ, ನೀವು ಈ ಸವಾಲನ್ನು ಬಿಡಿಸಲು ಸಿದ್ಧವಿದ್ದೀರಾ.
ಈ ಚಿತ್ರದಲ್ಲಿ ಏನಿದೆ?
ಫೈಂಡ್ ದಿ ಸ್ನೈಪರ್’ ಸಬ್‌ರೆಡಿಟ್‌ನಲ್ಲಿ ಡಿಎಸ್‌ಕ್ರೀಮ್ ಎಂಬ ಬಳಕೆದಾರರು ರೆಡ್ಡಿಟ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ರೂಮ್ ನಂತಿರುವ ಈ ಚಿತ್ರದಲ್ಲಿ ಅಡಗಿರುವ “ನಾಯಿಯನ್ನು ಹುಡುಕಿ” ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ತೀಕ್ಷ್ಣ ದೃಷ್ಟಿ ಹೊಂದಿರುವ ಜನರು ಮಾತ್ರ ಏಳು ಸೆಕೆಂಡುಗಳಲ್ಲಿ ಈ ಒಗಟನ್ನು ಬಿಡಿಸಬಹುದು.
ಬಳಕೆದಾರರ ಕಾಮೆಂಟ್‌ಗಳು ಹೀಗಿವೆ
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಉತ್ತರ ಹೇಳಲು ಪ್ರಯತ್ನ ಪಟ್ಟಿದ್ದಾರೆ. ಒಬ್ಬ ಬಳಕೆದಾರರು ನಾಯಿಯೂ ಕಪ್ಪು ಬಣ್ಣದ ಮ್ಯಾಟ್ ಮೇಲೆ ಇದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ನಾಯಿ ಕಪ್ಪು ಬಣ್ಣದ್ದಾಗಿದ್ದು, ಮ್ಯಾಟ್ ಮೇಲೆ ಇದೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ಈ ಚಿತ್ರದಲ್ಲಿ ಉತ್ತರ ಹುಡುಕುವುದು ಸುಲಭವಾಯಿತು, ನನ್ನ ಕಣ್ಣಿಗೆ ಶ್ವಾನ ಕಂಡಿತು ಎಂದು ಕಾಮೆಂಟ್‌ನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: Optical Illusion: ಈ ಚಿತ್ರದಲ್ಲಿ ಅಡಗಿರುವ ಕಪ್ಪೆಯನ್ನು 12 ಸೆಕೆಂಡುಗಳಲ್ಲಿ ಹುಡುಕಬಲ್ಲಿರಾ?
ಉತ್ತರ ಇಲ್ಲಿದೆ
ಈ ಆಪ್ಟಿಕಲ್ ಇಲ್ಯೂಷನ್ ಚಿತ್ರದತ್ತ ಎಷ್ಟೇ ಗಮನ ಹರಿಸಿದರೂ ಕೂಡ ಶ್ವಾನ ಎಲ್ಲಿದೆ ಎಂದು ಹೇಳಲು ಸಾಧ್ಯವಾಗುತ್ತಿಲ್ಲವೇ, ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ. ಈ ಚಿತ್ರದಲ್ಲಿ ಬಾಗಿಲ ಮುಂಭಾಗದಲ್ಲಿ ಕಪ್ಪು ಬಣ್ಣದ ಡೋರ್ ಮ್ಯಾಟ್ ಹಾಕಿರುವುದನ್ನು ನೋಡಬಹುದು. ಆದರೆ ಈ ಡೋರ್ ಮ್ಯಾಟ್‌ನನ್ನು ಸರಿಯಾಗಿ ಗಮನಿಸಿ, ಈ ಡೋರ್ ಮ್ಯಾಟ್ ಮೇಲೆ ಕಪ್ಪು ಬಣ್ಣದ ಶ್ವಾನವಿದೆ. ಏಕಾಗ್ರತೆಯಿಂದ ನೋಡಿದರೆ ಈ ಶ್ವಾನವು ನಿಮ್ಮ ಕಣ್ಣಿಗೆ ಕಾಣುತ್ತದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:19 pm, Mon, 11 August 25