Optical Illusion: ಈ ಚಿತ್ರದಲ್ಲಿ ಮರೆಮಾಡಿರುವ ಮನೆಯ ಮುದ್ದಿನ ಶ್ವಾನವನ್ನು ಹುಡುಕಿ

ಆಪ್ಟಿಕಲ್‌ ಇಲ್ಯೂಷನ್‌ ಹಾಗೂ ಬ್ರೈನ್ ಟೀಸರ್ ಸೇರಿದಂತೆ ಇನ್ನಿತ್ತರ ಒಗಟಿನ ಚಿತ್ರಗಳತ್ತ ನೀವು ಕಣ್ಣು ಹಾಯಿಸುತ್ತಿರಬಹುದು. ಈ ಮೋಜಿನ ಆಟಗಳು ನಿಮ್ಮ ಮನಸ್ಸನ್ನು ರಿಫ್ರೆಶ್ ಆಗಿಸುವುದರ ಜತೆಗೆ ಮೆದುಳಿಗೆ ಕಸರತ್ತು ನೀಡುತ್ತದೆ. ಇದೀಗ ಇಂತಹದ್ದೇ ಆಪ್ಟಿಕಲ್‌ ಭ್ರಮೆಯ ಚಿತ್ರವೊಂದು ವೈರಲ್ ಆಗಿದ್ದು, ಇದರಲ್ಲಿ ಅಡಗಿರುವ ಶ್ವಾನವನ್ನು ನೀವು ಪತ್ತೆ ಹಚ್ಚಬೇಕು. ಒಗಟಿನ ಚಿತ್ರ ಬಿಡಿಸಲು ನಿಮ್ಮಿಂದ ಸಾಧ್ಯವೇ ಎಂದು ನೋಡಿ.

Optical Illusion: ಈ ಚಿತ್ರದಲ್ಲಿ ಮರೆಮಾಡಿರುವ ಮನೆಯ ಮುದ್ದಿನ ಶ್ವಾನವನ್ನು ಹುಡುಕಿ
ಆಪ್ಟಿಕಲ್‌ ಇಲ್ಯೂಷನ್‌ ಚಿತ್ರ
Image Credit source: Social Media

Updated on: Nov 09, 2025 | 10:53 AM

ಒಗಟಿನ ಚಿತ್ರಗಳನ್ನು ಬಿಡಿಸುವ ಕ್ರೇಜ್ ಹೆಚ್ಚಿನವರಿಗೆ ಇರುತ್ತದೆ. ಬಿಡುವುದು ಸಿಕ್ಕಾಗಲೆಲ್ಲಾ ಕೆಲವರು ಆಪ್ಟಿಕಲ್‌ ಇಲ್ಯೂಷನ್‌ನಂತಹ (Optical Illusion) ಒಗಟಿನ ಆಟಗಳನ್ನು ಆಡುತ್ತಾರೆ. ಇದು ಟೈಮ್ ಪಾಸ್ ವೊಂದಿಗೆ ನಿಮ್ಮ ಬುದ್ಧಿ ಹಾಗೂ ಕಣ್ಣು ದೃಷ್ಟಿ ಎಷ್ಟಿದೆ ಎಂದು ತಿಳಿದುಕೊಳ್ಳಲು ಸಹಕಾರಿಯಾಗಿದೆ. ನೀವು ಇಂತಹ ಸಾಕಷ್ಟು ಒಗಟಿನ ಚಿತ್ರ ಬಿಡಿಸುವಲ್ಲಿ ವಿಫಲರಾಗಿದ್ದೀರಬಹುದು. ಆದರೆ ಈ ಒಗಟು ಬಿಡಿಸಿ ನೀವು ನಿಮ್ಮನ್ನು ನೀವು ಪರೀಕ್ಷಿಸಿಕೊಳ್ಳಲು ಇದೊಳ್ಳೆಯ ಸಮಯ. ಈ ಚಿತ್ರದಲ್ಲಿ ಅಡಗಿ ಕುಳಿತಿರುವ ಮನೆಯ ಮುದ್ದಿನ ನಾಯಿಯನ್ನು (Dog) ಕಂಡುಹಿಡಿಯುವ ಸವಾಲು ನೀಡಲಾಗಿದೆ. ಆದರೆ ಈ ಒಗಟು ಬಿಡಿಸಿ ನೀವು ಜಾಣರು ಎನಿಸಿಕೊಳ್ಳಿ.

ಈ ಚಿತ್ರದಲ್ಲಿ ಏನಿದೆ?

ಈ ಆಪ್ಟಿಕಲ್ ಇಲ್ಯೂಷನ್ ಚಿತ್ರವು ನಿಮ್ಮ ವೀಕ್ಷಣಾ ಕೌಶಲ್ಯವನ್ನು ಪರೀಕ್ಷಿಸುವಂತಿದೆ. ಮನೆಯ ಒಳಾಂಗಣ ನೋಟವನ್ನು ಈ ಚಿತ್ರವು ತೋರಿಸುತ್ತದೆ. ಹಾಲ್ ನಲ್ಲಿ ಸೋಫಾ ಇದ್ದು, ಈ ಕೋಣೆಯ ಮೂಲೆ ಮೇಜು ಇದೆ. ಅಲಂಕಾರದಿಂದ ತುಂಬಿದ ಶೆಲ್ಫ್ ಹಾಗೂ ಪಕ್ಕದಲ್ಲಿ ದೀಪವೊಂದು ಬೆಳಗುತ್ತಿದೆ. ಈ ಚಿತ್ರದಲ್ಲಿರುವ ವ್ಯಕ್ತಿಯೂ ಚಿಂತೆಗೀಡಾಗಿದ್ದಾನೆ. ಅವನು ತನ್ನ ಕಾಣೆಯಾದ ಮನೆಯ ಮುದ್ದಿನ ಶ್ವಾನವನ್ನು ಹುಡುಕುತ್ತಿದ್ದಾನೆ. ನೀವು ಕೂಡ ಆ ನಾಯಿಯನ್ನು ಹುಡುಕುವ ಸವಾಲು ಇದಾಗಿದೆ. ಈ ಒಗಟನ್ನು ಬಿಡಿಸಲು ನಿಮ್ಮಿಂದ ಸಾಧ್ಯವೇ.  ಟ್ರಕ್ಕಿ ಒಗಟು ಬಿಡಿಸಲು ನಿಮ್ಮ ಸಮಯ ಈಗಲೇ ಆರಂಭವಾಗುತ್ತದೆ.

ಇದನ್ನೂ ಓದಿ:ನಿಮ್ಮ ಕಣ್ಣಿಗೊಂದು ಸವಾಲ್; ಈ ಚಿತ್ರದಲ್ಲಿರುವ ಮೀನನ್ನು ಹುಡುಕಿ ಜಾಣರೆನಿಸಿಕೊಳ್ಳಿ

ಶ್ವಾನವು ನಿಮ್ಮ ಕಣ್ಣಿಗೆ ಬಿದ್ದಿತೇ?

ಭ್ರಮೆ ಉಂಟು ಮಾಡುವ ಒಗಟಿನ ಚಿತ್ರ ಬಿಡಿಸುವಾಗ ತಾಳ್ಮೆ ಹಾಗೂ ಏಕಾಗ್ರತೆ ಬಹಳ ಮುಖ್ಯ. ಹಾಲ್ ನಲ್ಲಿ ಮೂಲೆ ಮೂಲೆಯನ್ನು ಸೂಕ್ಷ್ಮವಾಗಿ ಗಮನಿಸಿ. ಈ ಚಿತ್ರದಲ್ಲಿ ಅಡಗಿರುವ ನಾಯಿಯನ್ನು ಪತ್ತೆ ಹಚ್ಚಿದರೆ ನಿಮ್ಮಲ್ಲಿ ತೀಕ್ಷ್ಣವಾದ ವೀಕ್ಷಣಾ ಸಾಮರ್ಥ್ಯ ಅದ್ಭುತವಾಗಿದೆ ಎಂದರ್ಥ. ನೀವು ಸರಿಯಾದ ಉತ್ತರ ಈಗಾಗಲೇ ಹೇಳುವಲ್ಲಿ ಯಶಸ್ವಿಯಾಗಿದ್ದರೆ ನಿಮಗೆ ಅಭಿನಂದನೆಗಳು. ಒಂದು ವೇಳೆ ಶ್ವಾನವು ನಿಮ್ಮ ಕಣ್ಣಿಗೆ ಬಿದ್ದಿಲ್ಲವೆಂದಾದರೆ ಹೆಚ್ಚು ಚಿಂತಿಸಬೇಡಿ. ಹಾಲ್‌ನ ನೆಲದ ಮೇಲಿನ ಕಾರ್ಪೆಟ್‌ನತ್ತ ಗಮನ ಹರಿಸಿ. ಮನೆಯ ಮುದ್ದಿನ ಶ್ವಾನವು ಶಾಂತವಾಗಿ ಕುಳಿತಿರುವುದನ್ನು ಕಾಣಬಹುದು. ಈ ಕೆಗಿನ ಚಿತ್ರದಲ್ಲಿ ಶ್ವಾನ ಎಲ್ಲಿದೆ ಎಂದು ಗುರುತಿಸಲಾಗಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ