
ಆಪ್ಟಿಕಲ್ ಇಲ್ಯೂಷನ್ (optical illusion) ಹಾಗೂ ಬ್ರೈನ್ ಟೀಸರ್ (brain teaser) ನಂತಹ ಒಗಟಿನ ಚಿತ್ರಗಳು ದೃಷ್ಟಿ ಸಾಮರ್ಥ್ಯ ಹಾಗೂ ಯೋಚನಾ ಸಾಮರ್ಥ್ಯ ಎಷ್ಟಿದೆ ಎಂದು ಪರೀಕ್ಷಿಸಿಕೊಳ್ಳಲು ಸಹಾಯಕವಾಗಿದೆ. ಈ ಒಗಟನ್ನು ಬಿಡಿಸುವ ಮಜಾನೇ ಬೇರೆ, ಆದರೆ ಎಷ್ಟೋ ಜನರಿಗೆ ಇಂತಿಷ್ಟು ಕಾಲದ ಮಿತಿಯಲ್ಲಿ ಇಂತಹ ಟ್ರಿಕ್ಕಿ ಒಗಟನ್ನು ಬಿಡಿಸಲು ಸಾಧ್ಯವಾಗುವುದಿಲ್ಲ. ಆದರೆ ಇದೀಗ ಇಂತಹದ್ದೇ ಕಠಿಣ ಸವಾಲಿನ ಚಿತ್ರವೊಂದು ವೈರಲ್ ಆಗಿದ್ದು, ಈ ಚಿತ್ರವು ನೋಡುವುದಕ್ಕೆ ಸರಳವಾಗಿದೆ. ಹಚ್ಚ ಹಸಿರಾದ ಗಿಡಗಳು ಹುಲ್ಲಿನ ನಡುವೆ ಕಪ್ಪೆಯೊಂದು ಅಡಗಿದೆ. ಹೀಗಾಗಿ ನೀವು ಹನ್ನೆರಡು ಸೆಕೆಂಡುಗಳೊಳಗೆ ಈ ಒಗಟನ್ನು ಬಿಡಿಸಿ ಕಪ್ಪೆ ಎಲ್ಲಿದೆ ಎಂದು ಹೇಳಬೇಕು.
ಈ ಚಿತ್ರದಲ್ಲಿ ಏನಿದೆ?
ರೋಡ್‌ಕಿಲ್‌ಗೋಬ್ಲಿನ್_2 ಅವರು ‘ ಫೈಂಡ್ ದಿ ಸ್ನೈಪರ್ ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಈ ಒಗಟಿನ ಆಟಗಳು ಮನೋರಂಜನೆಯೊಂದಿಗೆ ಯೋಚನಾ ಶಕ್ತಿ ಮತ್ತು ಏಕಾಗ್ರತೆಯನ್ನು ವೃದ್ಧಿಸಲು ಸಹಾಯ ಮಾಡುತ್ತದೆ. ಇಂತಹ ಒಗಟಿನ ಆಟಗಳಿಗೆ ಉತ್ತರ ಕಂಡುಹಿಡಿಯುವ ಕ್ರೇಜ್ ನಿಮಗಿದ್ರೆ ಇದೀಗ ಈ ಆಪ್ಟಿಕಲ್ ಇಲ್ಯೂಷನ್ ಚಿತ್ರವು ನಿಮಗಾಗಿ. ಹಚ್ಚ ಹಸಿರಾದ ಪರಿಸರವನ್ನು ನೀವು ಕಾಣಬಹುದು. ಹಚ್ಚಹಸಿರಿನಿಂದ ಕೂಡಿದ ಗಿಡಗಳು ಹಾಗೂ ಹುಲ್ಲಿನ ನಡುವೆ ಕಪ್ಪೆಯೊಂದು ಅಡಗಿದೆ. ಈ ಚಿತ್ರವನ್ನು ಬಹಳ ಎಚ್ಚರಿಕೆಯಿಂದ ಗಮನಿಸಿ ಈ ಈ ಹಸಿರಾದ ಹುಲ್ಲಿನ ನಡುವೆ ಮರೆ ಮಾಡಲಾದ ಕಪ್ಪೆಯನ್ನು ಕಂಡುಹಿಡಿಯಬೇಕು.
ಉತ್ತರ ಇಲ್ಲಿದೆ
ಅಬ್ಬಬ್ಬಾ ಎಷ್ಟೇ ಹುಡುಕಿದರೂ ಚಿತ್ರದಲ್ಲಿ ಅಡಗಿರುವ ಕಪ್ಪೆಯನ್ನು ಹುಡುಕಲು ಸಾಧ್ಯವಾಗುತ್ತಿಲ್ಲವೇ, ಇದಕ್ಕಾಗಿ ನೀವು ಹೆಚ್ಚು ತಲೆ ಕೆಡಿಸಿಕೊಂಡಿದ್ದೀರಾ? ಚಿಂತಿಸಬೇಡಿ. ನಾವು ನಿಮಗೆ ಆ ಹಚ್ಚಹಸಿರಾದ ಗಿಡಗಳು ಹಾಗೂ ಹುಲ್ಲಿನ ನಡುವೆ ಕಪ್ಪೆಯೊಂದು ಎಲ್ಲಿ ಅಡಗಿದೆ ಎಂದು ಹೇಳುತ್ತೇವೆ. ಚಿತ್ರದ ಕೆಳಭಾಗದಲ್ಲಿ ಕಣ್ಣು ಹಾಯಿಸಿ. ಕೆಳಭಾಗದ ಮಧ್ಯಭಾಗದಲ್ಲಿ ಕಪ್ಪೆಯೂ ಇದೆ, ಸರಿಯಾಗಿ ಗಮನಿಸಿದರೆ ಕಪ್ಪೆ ನಿಮ್ಮ ಕಣ್ಣಿಗೆ ಖಂಡಿತ ಕಾಣಿಸುತ್ತದೆ.
ಇದನ್ನೂ ಓದಿ: Optical illusion: ನೀವು ಜಾಣರಾಗಿದ್ರೆ ಈ ಚಿತ್ರದಲ್ಲಿ ಅಡಗಿರುವ ಮುಖವನ್ನು ಕಂಡು ಹಿಡಿಯಿರಿ ನೋಡೋಣ
ಬಳಕೆದಾರರ ಕಾಮೆಂಟ್‌ಗಳು ಹೀಗಿವೆ
ಈ ಒಗಟಿನ ಚಿತ್ರವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡ ಬಳಿಕ ಬಳಕೆದಾರರು ಕಾಮೆಂಟ್ ಮಾಡಿ ತಮ್ಮ ಉತ್ತರವನ್ನು ಹೇಳಿದ್ದಾರೆ. ಒಬ್ಬ ಬಳಕೆದಾರ, ತಕ್ಷಣವೇ ಸಿಕ್ಕಿತು ಎಂದು ಹೇಳಿದರೆ ಮತ್ತೊಬ್ಬರು ಈ ಒಗಟನ್ನು ಬಿಡಿಸುವುದು ತುಂಬಾನೇ ಸುಲಭವಾಗಿತ್ತು ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ