Optical Illusion: ತೋಳಗಳ ನಡುವೆ ಅಡಗಿರುವ ಜೇಡವನ್ನು 8 ಸೆಕೆಂಡುಗಳಲ್ಲಿ ಹುಡುಕಬಲ್ಲಿರಾ?

ಆಪ್ಟಿಕಲ್‌ ಇಲ್ಯೂಷನ್‌, ಬ್ರೈನ್‌ ಟೀಸರ್‌ ಇತ್ಯಾದಿ ಒಗಟಿನ ಆಟಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಲೇ ಇರುತ್ತವೆ. ದೃಷ್ಟಿ ಮತ್ತು ಮೆದುಳಿಗೆ ಕೆಲಸ ನೀಡುವಂತಹ ಈ ಒಗಟನ್ನು ಬಿಡಿಸುವುದು ಕಷ್ಟವಾದರೂ ಇಂತಹ ಸವಾಲನ್ನು ಬಿಡಿಸುವುದರಲ್ಲಿರುವ ಖುಷಿಯೇ ಬೇರೆ. ಇದೀಗ ಇಲ್ಲೊಂದು ಬಹಳ ಕಷ್ಟಕರವಾದ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವೊಂದು ವೈರಲ್‌ ಆಗಿದ್ದು, ತೋಳಗಳ ನಡುವೆ ಅಡಗಿರುವ ಜೇಡವನ್ನು ಕಂಡುಹಿಡಿಯಬೇಕು. ಈ ಟ್ರಿಕ್ಕಿ ಒಗಟಿನ ಆಟಗಳತ್ತ ಒಮ್ಮೆ ನೀವು ಕಣ್ಣು ಹಾಯಿಸಿ.

Optical Illusion: ತೋಳಗಳ ನಡುವೆ ಅಡಗಿರುವ ಜೇಡವನ್ನು 8 ಸೆಕೆಂಡುಗಳಲ್ಲಿ ಹುಡುಕಬಲ್ಲಿರಾ?
ಆಪ್ಟಿಕಲ್‌ ಇಲ್ಯೂಷನ್‌

Updated on: Sep 10, 2025 | 10:29 AM

ಆಪ್ಟಿಕಲ್‌ ಇಲ್ಯೂಷನ್‌ನಂತಹ (Optical Illusion) ಒಗಟಿನ ಆಟಗಳು ನಮ್ಮ ದೃಷ್ಟಿ ಮತ್ತು ಬುದ್ಧಿಗೆ ಸವಾಲು ಎಸೆಯುತ್ತವೆ. ಬುದ್ಧಿವಂತಿಕೆ ಮತ್ತು ಕಣ್ಣಿನ ತೀಕ್ಷ್ಣತೆಗೆ ಸವಾಲೊಡ್ಡುವ ಇಂತಹ ಒಗಟಿನ ಆಟಗಳನ್ನು ಆಡಲು ಬಿಡಿಸುವುದೆಂದರೆ ಹೆಚ್ಚಿನವರಿಗೆ ಇಷ್ಟ. ಹೀಗಾಗಿ ಬಿಡುವು ಸಿಕ್ಕಾಗಲ್ಲೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವ ಈ ಚಿತ್ರಗಳತ್ತ ಕಣ್ಣು ಹಾಯಿಸುತ್ತಾರೆ. ಇದು ತಲೆ ಕೆಡಿಸಿಕೊಳ್ಳುವಂತೆ ಮಾಡುವುದು ಮಾತ್ರವಲ್ಲದೆ ಮೆದುಳಿಗೆ ವ್ಯಾಯಾಮವನ್ನು ಸಹ ನೀಡುತ್ತದೆ. ಇದೀಗ ನಿಮಗೆ ಸವಾಲೊಡ್ದುವ ಚಿತ್ರವೊಂದು ವೈರಲ್ ಆಗಿದೆ. ಈ ಆಪ್ಟಿಕಲ್ ಭ್ರಮೆ ಚಿತ್ರದಲ್ಲಿ, ತೋಳಗಳ ನಡುವೆ ಎಂಟು ಕಾಲಿನ ಕೀಟವೊಂದು ಅಡಗಿದೆ. ಎಂಟು ಸೆಕೆಂಡುಗಳಲ್ಲಿ ಉತ್ತರ ನೀಡಿದ್ರೆ ನಿಮ್ಮ ವೀಕ್ಷಣಾ ಮಟ್ಟವನ್ನು ಚೆನ್ನಾಗಿದೆ ಎಂದರ್ಥವಾಗುತ್ತದೆ.

ಸವಾಲನ್ನು ಸ್ವೀಕರಿಸಲು ಸಿದ್ಧರಿದ್ದೀರಾ?

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ತಲೆ ಕೆರೆದುಕೊಳ್ಳುವಂತೆ ಮಾಡಿ ಮೆದುಳಿಗೆ ಕೆಲಸವನ್ನು ನೀಡುತ್ತವೆ. ಚಿತ್ರದಲ್ಲಿ ಏನೋ ಇದ್ದರೂ ಇಲ್ಲದಂತೆ ತೋರಿ ನಮ್ಮನ್ನು ದಿಗ್ಭ್ರಮೆಗೊಳಿಸುತ್ತವೆ. ಆದರೆ ಇಲ್ಲಿ ನೀವು ಕೇವಲ ಎಂಟು ಸೆಕೆಂಡುಗಳ ಒಳಗೆ ತೋಳಗಳ ನಡುವೆ ಅಡಗಿರುವ ಜೇಡವನ್ನು ಕಂಡುಹಿಡಿಯುವ ಸವಾಲು ನೀಡಲಾಗಿದೆ. ನೀವು ಈ ಸವಾಲು ಸ್ವೀಕರಿಸಲು ಸಿದ್ಧವಿದ್ರೆ ನಿಮ್ಮ ಸಮಯ ಇದೀಗ ಆರಂಭವಾಗುತ್ತದೆ.

ಇದನ್ನೂ ಓದಿ
ನೂರಾರು ಮುಖಗಳ ನಡುವೆ ಅಡಗಿರುವ ಬೆಕ್ಕನ್ನು ಗುರುತಿಸಬಲ್ಲಿರಾ?
ಈ ಚಿತ್ರದಲ್ಲಿರುವ ಹುಲಿಗಳೆಷ್ಟು ಎಂದು ಹೇಳಬಲ್ಲಿರಾ?
ಈ ಚಿತ್ರದಲ್ಲಿ ಅಡಗಿರುವ ಆನೆಯನ್ನು ನಿಮ್ಮಿಂದ ಹುಡುಕಲು ಸಾಧ್ಯನಾ?
ಈ ಚಿತ್ರದಲ್ಲಿ ಅಡಗಿರುವ ಹಲ್ಲಿಯನ್ನು 10 ಸೆಕೆಂಡುಗಳಲ್ಲಿ ಕಂಡುಹಿಡಿಯಬಲ್ಲಿರಾ

ಇದನ್ನೂ ಓದಿ:Optical Illusion: ನಿಮ್ಮದು ಹದ್ದಿನ ಕಣ್ಣಾದ್ರೆ ನೂರಾರು ಮುಖಗಳ ನಡುವೆ ಅಡಗಿರುವ ಬೆಕ್ಕನ್ನು ಗುರುತಿಸಬಲ್ಲಿರಾ?

ಉತ್ತರ ಇಲ್ಲಿದೆ:

ಈ ಚಿತ್ರವನ್ನು ಎಷ್ಟೆ ಸೂಕ್ಷ್ಮವಾಗಿ ಗಮನಿಸಿದ್ರು ತೋಳಗಳ ನಡುವೆ ಅಡಗಿರುವ ಜೇಡವು ನಿಮ್ಮ ಕಣ್ಣಿಗೆ ಬಿದ್ದಿಲ್ಲವಾದರೆ ನಾವು ನಿಮಗೆ ಸುಳಿವು ನೀಡುತ್ತೇವೆ. ಈ ಚಿತ್ರದ ಕೆಳಭಾಗವನ್ನು ಸೂಕ್ಷ್ಮವಾಗಿ ಗಮನಿಸಿ, ಇಲ್ಲಿ ಜೇಡವೊಂದು ಅಡಗಿದೆ. ನಿಮ್ಮಲ್ಲಿ ಹಲವರು ಜೇಡ ಎಲ್ಲಿದೆ ಎಂದು ಕಂಡುಕೊಂಡಿದ್ದೀರಿ ಎಂದು ನಾವು ಭಾವಿಸುತ್ತೇವೆ. ಉತ್ತರ ಕಂಡು ಕೊಳ್ಳಲು ಸಾಧ್ಯವಾಗದೇ ಇದ್ದರೆ ಹೆಚ್ಚು ಚಿಂತಿಸುವ ಅಗತ್ಯವಿಲ್ಲ. ಮೇಲಿನ ಚಿತ್ರದಲ್ಲಿ ಜೇಡ ಇರುವ ಸ್ಥಳವನ್ನು ಕೆಂಪು ಬಣ್ಣದಲ್ಲಿ ಗುರುತಿಸಿದ್ದೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ