Optical Illusion : ದಿನೇ ದಿನೇ ನೆಟ್ಟಿಗರು ಇಂಥ ಕಠಿಣವಾದ ಆಪ್ಟಿಕಲ್ ಇಲ್ಲ್ಯೂಷನ್ ಸಂಬಂಧಿಸಿದ ಚಟುವಟಿಕೆಗಳನ್ನು ನೋಡಿ ಬೇಸರಪಡುತ್ತಿದ್ಧಾರೆ. ಆದರೆ ನೀವು ಬಹಳ ಚುರುಕು. ಎಷ್ಟೇ ಕ್ಲಿಷ್ಟಕರವಾಗಿದ್ದರೂ ತುಸು ಹೆಚ್ಚಿಗೆ ಸಮಯ ತೆಗೆದುಕೊಂಡರೂ ಹುಡುಕಿಯೇ ಸಿದ್ಧ ನೀವು. ಕೊಟ್ಟಿರುವ ಸಮಯ ಕೇವಲ 11 ಸೆಕೆಂಡುಗಳು. ಯಾವುದಕ್ಕೂ ಈ ಸಮಯದೊಳಗೇ ಹುಡುಕಲು ಒಮ್ಮೆ ಪ್ರಯತ್ನಿಸಿ ನೋಡೋಣ.
ಆಗಲಿಲ್ಲವಾ? ಸ್ವಲ್ಪ ಕಷ್ಟವೇ ಇದು. ಈ ಮಕ್ಕಳು, ಕ್ಲಾಸ್ರೂಮು, ಅಲ್ಲಿ ಹರಡಿರುವ ಸಾಮಾನುಗಳು ಎಲ್ಲದರ ಮಧ್ಯೆ ಆ ಪುಟ್ಟ ಕನ್ನಡಕ ಹುಡುಕುವುದು ಪ್ರಯಾಸದಾಯಕವೇ. ಮಕ್ಕಳು ಎಂದಮೇಲೆ ಕೇಳಬೇಕೆ? ಅಶಿಸ್ತೇ ನಮ್ಮ ಗುರಿ ಎಂಬ ಉಮೇದಿನಲ್ಲಿ ಆಟವಾಡಿಕೊಂಡಿರುತ್ತವೆ. ಅದು ಕ್ಲಾಸ್ರೂಮಾದರೇನು, ಮನೆಯಾದರೇನು? ಈಗ ಈ ಮೇಷ್ಟ್ರಿಗೆ ಕನ್ನಡಕವನ್ನು ಈ ಮಕ್ಕಳು ಎಲ್ಲಿ ಕಳೆದುಹಾಕಿದ್ದಾರೆ ಎಂಬ ಚಿಂತೆಯುಂಟಾಗಿದೆ.
ಆದರೆ ಕನ್ನಡಕ ಎಲ್ಲಿಯೂ ಹೋಗಿಲ್ಲ. ಇದ್ದಲ್ಲೇ ಇದೆ. ಕ್ಲಾಸಿನೊಳಗೇ ಇದೆ. ಸುಳಿವು ಬೇಕಾ? ಮಕ್ಕಳು ಕುಳುತುಕೊಂಡ ಬೆಂಚ್ ಬಳಿ ಕಣ್ಣಾಡಿಸಿ. ಇನ್ನೂ ಗೊತ್ತಾಗಲಿಲ್ವಾ? ನೀಲಿಬಣ್ಣದ ಶರ್ಟ್ ಧರಿಸಿದ ಮಗುವಿನ ಬೆಂಚಿನ ಬಳಿ ನೋಡಿ. ಸ್ವಲ್ಪ ಗೊಂದಲವಾಗ್ತಿದೆಯಾ? ಬೆಂಚಿನ ಕಾಲುಗಳು ಮಧ್ಯೆ ಕನ್ನಡಕ ಎಲ್ಲಿದೆಯೆಂದು? ಹಾಗಿದ್ದರೆ ಈ ಚಿತ್ರ ನೋಡಿಬಿಡಿ.
ನಿಜ ಸ್ವಲ್ಪ ಗೊಂದಲವಾಗುವ ರೀತಿಯಲ್ಲಿಯೇ ಇದೆ ಇದು. ಬೆಂಚಿನ ಕಾಲುಗಳು ಮತ್ತು ಕನ್ನಡಕದ ವಿನ್ಯಾಸ ಒಂದೇ ಥರ ಇದೆ. ಹಾಗಾಗಿ ಯಾರಿಗೂ ಇದು ಕ್ಲಿಷ್ಟಕರವೇ. ಇರಲಿ ಮುಂದಿನ ಸಲ ಇದಕ್ಕಿಂತ ಸರಳವಾದ ಚಿತ್ರದೊಂದಿಗೆ ಬರಲು ಪ್ರಯತ್ನಿಸಲಾಗುವುದು.
ಹೇಳಿ, ಈ ಚಟುವಟಿಕೆಗಳು ನಿಮಗೆ ಪ್ರಯೋಜನಕಾರಿ ಎನ್ನಿಸಿವೆ?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ