Optical Illusion: ಈ ಚಿತ್ರದಲ್ಲಿ ಅಡಗಿರುವ ಆಮೆಯನ್ನು 10 ಸೆಕೆಂಡುಗಳಲ್ಲಿ ಗುರುತಿಸಬಹುದೇ?

ಇತ್ತೀಚೆಗಿನ ದಿನಗಳಲ್ಲಿ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳನ್ನು ಬಿಡಿಸುವತ್ತ ಎಲ್ಲರೂ ಗಮನ ಹರಿಸ್ತಾ ಇದ್ದಾರೆ. ಈ ಒಗಟಿನ ಆಟಗಳು ನಿಮ್ಮ ದೃಷ್ಟಿ ಮತ್ತು ಮೆದುಳಿಗೆ ಕೆಲಸ ನೀಡುತ್ತವೆ ಅನ್ನೋದೇನೋ ನಿಜ. ಆದರೆ ಕೆಲವೊಮ್ಮೆ ಉತ್ತರ ಕಂಡುಕೊಳ್ಳಲು ಸಾಧ್ಯವಾಗದೇ ಇರಬಹುದು. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಚಿತ್ರದಲ್ಲಿ ಆಮೆಯೊಂದು ಅಡಗಿ ಕುಳಿತಿದ್ದು, ಉತ್ತಮ ದೃಷ್ಟಿ ಸಾಮರ್ಥ್ಯ ಹೊಂದಿರುವವರು ಆಮೆ ಎಲ್ಲಿದೆ ಎಂದು ಹುಡುಕಿ ಹೇಳ್ಬಹುದಾ.

Optical Illusion: ಈ ಚಿತ್ರದಲ್ಲಿ ಅಡಗಿರುವ ಆಮೆಯನ್ನು 10 ಸೆಕೆಂಡುಗಳಲ್ಲಿ ಗುರುತಿಸಬಹುದೇ?
ಆಪ್ಟಿಕಲ್‌ ಇಲ್ಯೂಷನ್‌
Image Credit source: Reddit

Updated on: Aug 29, 2025 | 4:53 PM

ಆಪ್ಟಿಕಲ್‌ ಇಲ್ಯೂಷನ್‌ (Optical Illusion) ಹಾಗೂ ಬ್ರೈನ್ ಟೀಸರ್‌ನಂತಹ ಒಗಟಿನ ಆಟಗಳು ಬಿಡಿಸುವುದೆಂದರೆ ಬಹುತೇಕರಿಗೆ ಇಷ್ಟ. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ಇಂತಹ ಒಗಟಿನ ಚಿತ್ರಗಳನ್ನು ಕಂಡರೆ ಮಿಸ್ ಮಾಡೋದೇ ಇಲ್ಲ. ಈ ಚಿತ್ರಗಳು ನೀವೇಷ್ಟು ಬುದ್ಧಿವಂತರು ಹಾಗೂ ಯೋಚನಾ ಸಾಮರ್ಥ್ಯ ಎಷ್ಟಿದೆ ಎಂದು ಪರೀಕ್ಷಿಸುತ್ತದೆ. ಇದೀಗ ಕಣ್ಣಿನ ತೀಕ್ಷ್ಣತೆಗೆ ಸವಾಲೊಡ್ಡುವ ಒಗಟಿನ ಚಿತ್ರವೊಂದು ವೈರಲ್ ಆಗಿದೆ. ನೀರಿನಲ್ಲಿ ಆಮೆಯೊಂದು ಅಡಗಿ ಕುಳಿತಿದೆ. ಮರೆ ಮಾಡಲಾಗಿರುವ ಈ ಆಮೆಯನ್ನು ಹತ್ತೇ ಹತ್ತು ಸೆಕೆಂಡುಗಳ ಒಳಗೆ ಪತ್ತೆ ಹಚ್ಚಬೇಕು. ಈ ಸವಾಲನ್ನು ಸ್ವೀಕರಿಸಿ ಒಗಟು ಬಿಡಿಸಲು ರೆಡಿ ಇದ್ದೀರಾ.

ರೆಡ್ಡಿಟ್‌ನಲ್ಲಿ ಹಂಚಿಕೊಂಡ ಚಿತ್ರದಲ್ಲಿ ಏನಿದೆ?

r/FindTheSniper ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ಹಸಿರು ಸಸ್ಯಗಳ ಜೊತೆಗೆ ಹರಡಿಕೊಂಡಿರುವ ಒಣಗಿದ ಕಂದು ಎಲೆಗಳ ತೇಪೆ, ನೀರನ್ನು ಕಾಣಬಹುದು. ಮೊದಲ ನೋಟಕ್ಕೆ ಸಹಜವಾಗಿ ಕಂಡರೂ ಈ ಚಿತ್ರದಲ್ಲಿ ಆಮೆಯೊಂದು ಅಡಗಿದೆ. ಎಷ್ಟು ಚೆನ್ನಾಗಿ ಮರೆಮಾಚಲಾಗಿದೆಯೆಂದರೆ ಅನುಭವಿ ಒಗಟನ್ನು ಬಿಡಿಸುವವರು ಈ ಆಟದಲ್ಲಿ ಸೋಲುತ್ತಾರೆ. ಈ ಒಗಟಿನ ಚಿತ್ರವನ್ನು ಬಿಡಿಸಲು ನಿಮಗಿರುವ ಕಾಲಾವಕಾಶ ಹತ್ತು ಸೆಕೆಂಡುಗಳು ಮಾತ್ರ ಎನ್ನುವುದು ತಲೆಯಲ್ಲಿರಲಿ. ಈ ಸವಾಲನ್ನು ಪೂರ್ಣಗೊಳಿಸುವಲ್ಲಿ ಯಶಸ್ವಿಯಾದ್ರೆ ನೀವು ವೀಕ್ಷಣಾ ಕೌಶಲ್ಯವು ಅತ್ಯುತ್ತಮವಾಗಿದೆ ಎಂದರ್ಥ.

ಇದನ್ನೂ ಓದಿ
ಈ ಚಿತ್ರದಲ್ಲಿ ಅಡಗಿರುವ ಅಳಿಲನ್ನು 20 ಸೆಕೆಂಡುಗಳಲ್ಲಿ ಪತ್ತೆಹಚ್ಚಿ
ಹಚ್ಚಹಸಿರಿನ ಪರಿಸರದ ನಡುವೆ ಕಪ್ಪೆ ಎಲ್ಲಿದೆ ಎಂದು ಹೇಳಬಲ್ಲಿರಾ?
ಈ ಚಿತ್ರದಲ್ಲಿ ಮಲಗಿರುವ ಬೆಕ್ಕನ್ನು ಕಂಡು ಹಿಡಿಯಬಲ್ಲಿರಾ?
ಈ ಚಿತ್ರದಲ್ಲಿ ಅಡಗಿರುವ ಐದು ಪುಸ್ತಕಗಳನ್ನು ಹುಡುಕುವಿರಾ?

ಬಳಕೆದಾರರ ಕಾಮೆಂಟ್‌ಗಳು ಹೀಗಿವೆ

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಉತ್ತರ ಹುಡುಕಲು ಪ್ರಯತ್ನಿಸಿದ್ದಾರೆ. ಒಬ್ಬ ಬಳಕೆದಾರ ವಾವ್ಹ್, ಈ ಆಟ ಚೆನ್ನಾಗಿದೆ ಎಂದರೆ ಮತ್ತೊಬ್ಬರು ಆಮೆಯೂ “ಬಲಕ್ಕೆ ಮತ್ತು ಮಧ್ಯದಿಂದ ಮೇಲಕ್ಕೆ” ಇದೆ ಎಂದು ಉತ್ತರವನ್ನು ಸೂಚಿಸಿದ್ದಾರೆ. ಇನ್ನೊಬ್ಬ ಬಳಕೆದಾರರು, ಆಮೆಯೂ ನನ್ನ ಕಣ್ಣಿಗೆ ಬಿದ್ದಿತು. ಮಧ್ಯಭಾಗದಲ್ಲಿ ಮುಖವನ್ನು ಮೇಲೆತ್ತಿದೆ, ಸರಿಯಾಗಿ ಗಮನಿಸಿದರೆ ನಿಮಗೆ ತಿಳಿಯುತ್ತದೆ ಎಂದಿದ್ದಾರೆ.

ಇದನ್ನೂ ಓದಿ:Optical Illusion: ಹದ್ದಿನ ಕಣ್ಣು ನಿಮ್ಮದಾಗಿದ್ರೆ ಈ ಚಿತ್ರದಲ್ಲಿ ಅಡಗಿರುವ ಅಳಿಲನ್ನು 20 ಸೆಕೆಂಡುಗಳಲ್ಲಿ ಪತ್ತೆಹಚ್ಚಿ

ಉತ್ತರ ಇಲ್ಲಿದೆ:

ಎಷ್ಟೇ ಪ್ರಯತ್ನಿಸಿದರೂ, ಈ ಚಿತ್ರದತ್ತ ಕಣ್ಣುಹಾಯಿಸಿದರೂ ಆಮೆಯನ್ನು ಪತ್ತೆ ಹಚ್ಚಲು ನಿಮಗೆ ಸಾಧ್ಯವಾಗಿಲ್ಲವೇ, ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ಆಮೆ ಚಿತ್ರದ ಮಧ್ಯಭಾಗದಿಂದ ಸ್ವಲ್ಪ ಮೇಲಕ್ಕೆ, ಬಲಭಾಗದಲ್ಲಿ ಕುಳಿತಿದೆ. ಅದರ ಚಿಪ್ಪು ಕಂದು ಮತ್ತು ಹಸಿರು ಹುಲ್ಲಿನೊಂದಿಗೆ ಸರಾಗವಾಗಿ ಬೆರೆತಿದೆ. ಆಮೆಯು ಮುಂದಕ್ಕೆ ಇಣುಕುವಂತಿದ್ದು ಸರಿಯಾಗಿ ಗಮನಿಸಿದರೆ ನಿಮ್ಮ ಕಣ್ಣಿಗೆ ಆಮೆ ಕಾಣಿಸುತ್ತದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ