
ಆಪ್ಟಿಕಲ್ ಇಲ್ಯೂಷನ್‌ನಂತಹ (optical illusion) ಒಗಟಿನ ಚಿತ್ರಗಳನ್ನು ಬಿಡಿಸುತ್ತ ಕುಳಿತರೆ ಸಮಯ ಕಳೆದದ್ದೇ ತಿಳಿಯಲ್ಲ. ಹೀಗಾಗಿ ಬಿಡುವು ಸಿಕ್ಕಾಗಲೆಲ್ಲಾ ಹೆಚ್ಚಿನವರು ಇಂತಹ ಒಗಟಿನ ಆಟಗಳನ್ನು ಬಿಡಿಸುವತ್ತ ಗಮನ ಹರಿಸುತ್ತಾರೆ. ನೋಡುವುದಕ್ಕೆ ಸುಲಭದಾಯಕವಾಗಿ ಕಂಡರೂ ಈ ಒಗಟಿನ ಆಟಗಳು ಟ್ರಿಕ್ಕಿಯಾಗಿರುತ್ತದೆ. ಆದರೆ ಈ ಕಾಡಿನಲ್ಲಿ ಛತ್ರಿ ಎಲ್ಲಿದೆ ಎಂಬುವುದನ್ನು ಪತ್ತೆ ಹಚ್ಚುವುದೇ ನಿಮ್ಮ ಮುಂದಿರುವ ಸವಾಲು. ಆದರೆ ನೀವು ಕೇವಲ ಏಳು ಸೆಕೆಂಡುಗಳೊಳಗೆ ಈ ಒಗಟು ಬಿಡಿಸಬೇಕು.
ಈ ಇಲ್ಯೂಷನ್ ಚಿತ್ರವು ಕಠಿಣ ಸವಾಲಿನದ್ದಾಗಿದೆ. ಹಚ್ಚ ಹಸಿರಿನಿಂದ ಮರ ಗಿಡಗಳಿಂದ ಆವೃತವಾದ ಕಾಡನ್ನು ನೀವಿಲ್ಲಿ ಕಾಣಬಹುದು. ಮೂರು ಮಕ್ಕಳು ಕಾಡಿನಲ್ಲಿ ಆಟವಾಡುತ್ತಿದ್ದಾರೆ. ಇಲ್ಲಿ ವಿವಿಧ ಪ್ರಾಣಿ ಪಕ್ಷಿಗಳಿರುವುದನ್ನು ಕಾಣಬಹುದು. ಆದರೆ ಈ ಕಾಡಿನಲ್ಲಿ ಒಂದು ಛತ್ರಿಯೂ ಇದೆ. ಅದನ್ನು ನಿರ್ದಿಷ್ಟ ಸಮಯದೊಳಗೆ ಪತ್ತೆ ಹಚ್ಚಿದ್ರೆ ನಿಮ್ಮ ವೀಕ್ಷಣಾ ಸಾಮರ್ಥ್ಯ ಅತ್ಯುತ್ತಮವಾಗಿದೆ ಎಂದರ್ಥ.
ಇದನ್ನೂ ಓದಿ: ನಿಮಗೊಂದು ಸವಾಲ್; ಬಾತುಕೋಳಿಗಳ ನಡುವೆ ಅಡಗಿರುವ ಮೀನುಗಳನ್ನು ಪತ್ತೆ ಹಚ್ಚಿ
ಒಗಟಿನ ಚಿತ್ರಗಳನ್ನು ಬಿಡಿಸುವುದೇ ಸವಾಲುದಾಯಕವಾಗಿದ್ದು, ಕೆಲವೇ ಜನರು ಈ ಒಗಟನ್ನು 7 ಸೆಕೆಂಡುಗಳಲ್ಲಿ ಬಿಡಿಸಲು ಸಾಧ್ಯವಾಗಿದೆ. ನೀವು ಅವರಲ್ಲಿ ನೀವು ಒಬ್ಬರಾಗಿದ್ದರೆ ನಿಮಗೆ ಅಭಿನಂದನೆಗಳು. ಆದರೆ ಛತ್ರಿ ನಿಮ್ಮ ಕಣ್ಣಿಗೆ ಬಿದ್ದಿಲ್ಲ ಎಂದಾದರೆ ಸೋತೆ ಎಂದು ತಲೆ ಕೆಡಿಸಿಕೊಳ್ಳಬೇಡಿ. ಈ ಕೆಳಗಿನ ಫೋಟೋ ನೋಡಿ.. ಕಾಡಿನಲ್ಲಿರುವ ಛತ್ರಿಯೂ ನಿಮ್ಮ ಕಣ್ಣಿಗೆ ಕಾಣಿಸುತ್ತದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:05 am, Wed, 14 January 26