ಮೇಲಿನ ಫೋಟೋ ಸರಿಯಾಗಿ ನೋಡಿ, ಗುಡ್ಡಗಾಡು ಪ್ರದೇಶ. ಅಲ್ಲೊಂದು ಇಲ್ಲೊಂದು ಒಣ ಮರಗಳು, ಒಂದಲ್ಲ.. ಎರಡಲ್ಲ.. ಮೂರು ಚಿರತೆಗಳು ಒಟ್ಟಿಗೆ ಇಲ್ಲಿವೆ. ಆದರೆ ಚಿರತೆಗಳಿ ಎಲ್ಲಿವೆ ಎಂಬುದನ್ನು ಕಂಡುಹಿಡಿಯುವುದು ನಿಮ್ಮ ಕೆಲಸವಾಗಿದೆ. ನಿಮಗೆ ಚಿರತೆಯನ್ನು ಹುಡುಕಲು ಸುಲಭವಾಗುವಂತಹ ಸುಳಿವನ್ನು ನಾವು ನೀಡುತ್ತೇವೆ. ಬೆಟ್ಟದ ತುದಿಯನ್ನು ಒಮ್ಮೆ ನೋಡಿ. ಅಲ್ಲೇ ಹತ್ತಿರದಲ್ಲಿ ನೀವು ಮೂರು ಚಿರತೆಗಳನ್ನು ಕಾಣಬಹುದು. ನೀವು ಚಾಲೆಂಜ್ ಸ್ವೀಕರಿಸಲು ಸಿದ್ಧರಿದ್ದೀರಾ? ಹಾಗಿದ್ದರೆ ಕೇವಲ 7 ಸೆಕೆಂಡುಗಳಲ್ಲಿ ಚಿತ್ರದಲ್ಲಿದಲ್ಲಿ ಅಡಗಿರುವ ಮೂರು ಚಿರತೆಗಳನ್ನು ಪತ್ತೆ ಹಚ್ಚಿ ನೋಡೋಣ.
ಆಪ್ಟಿಕಲ್ ಇಲ್ಯೂಷನ್ ಸವಾಲಿನ ಆಟ ನಿಮ್ಮ ಮೆದುಳಿಗೆ ವ್ಯಾಯಾಮವನ್ನು ನೀಡುವುದಲ್ಲದೆ ನಿಮ್ಮ ಅರಿವಿನ ಸಾಮರ್ಥ್ಯವನ್ನೂ ಹೆಚ್ಚಿಸಲು ಉತ್ತಮ ಆಯ್ಕೆಯಾಗಿದೆ. ಈ ಆಟ ನಿಮ್ಮ ದೃಷ್ಟಿ ಸಾಮರ್ಥ್ಯಕ್ಕೆ ದೊಡ್ಡ ಸವಾಲು. ಜೊತೆಗೆ ಫೋಕಸ್ ಮಟ್ಟವನ್ನು ಪರೀಕ್ಷಿಸುತ್ತದೆ.ಇದು ಬುದ್ಧಿಮತ್ತೆಯ ಮಟ್ಟವನ್ನು ನಿರ್ಣಯಿಸಲು ಸಹ ಸಹಾಯ ಮಾಡುತ್ತದೆ.
ಇದನ್ನೂ ಓದಿ: ಕಲ್ಲು ಗಾಳಿಯಲ್ಲಿ ತೇಲುತ್ತಿರುವಂತೆ ಕಾಣುತ್ತಿದೆಯೇ? ಆದರೆ ಹಾಗಿಲ್ಲ ಸರಿಯಾಗಿ ಗಮನಿಸಿ
ಎಷ್ಟೇ ಹುಡುಕಿದರೂ ಚಿರತೆಗಳು ಎಲ್ಲಿವೆ ಎಂದು ಪತ್ತೆ ಹಚ್ಚಲು ಸಾಧ್ಯವಿಲ್ಲವೆಂದಾದರೆ ಚಿಂತಿಸಬೇಕಿಲ್ಲ. ಈ ಕೆಳಗಿನ ಚಿತ್ರದಲ್ಲಿ ಮೂರು ಚಿರತೆಗಳು ಎಲ್ಲಿವೆ ಎಂಬುದನ್ನು ಗುರುತಿಸಲಾಗಿದೆ. ಆದ್ದರಿಂದ ಸುಲಭವಾಗಿ ಚಿರತೆ ಎಲ್ಲಿದೆ ಎಂಬುದನ್ನು ತಿಳಿಯಬಹುದುದಾಗಿದೆ.
ಅಂದಹಾಗೆ, ಇಂದಿನ ಸವಾಲಿನ ಆಟ ನಿಮಗೆ ಹೇಗಾನಿಸಿತು, ನಿಮಗೆ ಇಷ್ಟವಾಯಿತೆ? ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ