Optical Illusion: ಜಸ್ಟ್ 10 ಸೆಕೆಂಡುಗಳಲ್ಲಿ ಈ ಚಿತ್ರದಲ್ಲಿ ಅಡಗಿರುವ ಕಪ್ಪೆಯನ್ನು ಕಂಡು ಹಿಡಿಯಿರಿ

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳನ್ನು ಬಿಡಿಸುವುದು ಕಷ್ಟದಾಯಕವಾಗಿದ್ದರೂ ಇದು ಮೈಂಡ್ ಅನ್ನು ರಿಲ್ಯಾಕ್ಸ್ ಆಗಿಸುತ್ತದೆ. ಕೆಲವರು ಈ ಒಗಟಿನ ಚಿತ್ರ ಬಿಡಿಸುವಾಗ ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ. ಆದರೆ ಇದೀಗ ವೈರಲ್ ಆಗಿರುವ ಚಿತ್ರದಲ್ಲಿ ಸವಾಲೊಂದನ್ನು ನೀಡಲಾಗಿದೆ. ಹದ್ದಿನ ಕಣ್ಣು ಇರುವವರು ಮಾತ್ರ ಈ ಚಿತ್ರದಲ್ಲಿ ಅಡಗಿರುವ ಕಪ್ಪೆಯನ್ನು ಕಂಡುಹಿಡಿಯಲು ಸಾಧ್ಯ. ನೀವು ಅಂತಹವರಲ್ಲಿ ಒಬ್ಬರಾಗಿದ್ದರೆ ಈ ಒಗಟು ಬಿಡಿಸಲು ಪ್ರಯತ್ನಿಸಿ.

Optical Illusion: ಜಸ್ಟ್ 10 ಸೆಕೆಂಡುಗಳಲ್ಲಿ ಈ ಚಿತ್ರದಲ್ಲಿ ಅಡಗಿರುವ ಕಪ್ಪೆಯನ್ನು ಕಂಡು ಹಿಡಿಯಿರಿ
ಆಪ್ಟಿಕಲ್‌ ಇಲ್ಯೂಷನ್‌ ಚಿತ್ರ
Image Credit source: Reddit

Updated on: Oct 28, 2025 | 10:45 AM

ಆಪ್ಟಿಕಲ್‌ ಇಲ್ಯೂಷನ್‌ (Optical Illusion) ಸವಾಲಿನ ಆಟಗಳು ಕೆಲವರಿಗೆ ಇಷ್ಟ, ಇನ್ನು ಕೆಲವರಿಗೆ ತುಂಬಾನೇ ಕಷ್ಟ. ಆದರೆ ಭ್ರಮೆ ಉಂಟು ಮಾಡುವ ಈ ಚಿತ್ರ ಗಳು ನೂರಕ್ಕೆ ನೂರರಷ್ಟು ಮೆದುಳಿಗೆ ಕೆಲಸ ನೀಡುತ್ತವೆ. ಇಂತಹ ಮೋಜಿನ ಆಟಗಳು ಸ್ವಲ್ಪ ಟ್ರಿಕ್ಕಿ ಆಗಿದ್ದರೂ ಈ ಸವಾಲುಗಳನ್ನು ಎದುರಿಸುವುದರಲ್ಲಿರುವ ಖುಷಿಯೇ ಬೇರೆ. ನಾವೆಷ್ಟು ಬುದ್ಧಿವಂತರು ಹಾಗೂ ದೃಷ್ಟಿ ಸಾಮರ್ಥ್ಯ ಎಷ್ಟಿದೆ ಎಂದು ತಿಳಿಯಬೇಕಿದ್ರೆ ಇಂತಹ ಒಗಟುಗಳನ್ನು ಬಿಡಿಸಿದ್ರೆ ಸಾಕು. ಇದೀಗ ಕಠಿಣ ಸವಾಲಿನ ಚಿತ್ರವೊಂದು ವೈರಲ್‌ ಆಗಿದ್ದು, ಈ ಈಜುಕೊಳದಲ್ಲಿ ಅಡಗಿರುವ ಕಪ್ಪೆಯನ್ನು (Frog) ಗುರುತಿಸಬೇಕು. ಈ ಒಗಟನ್ನು ಬಿಡಿಸಲು ಇರುವ ಸಮಯ ಅವಕಾಶ ಹತ್ತು ಸೆಕೆಂಡುಗಳು ಮಾತ್ರ.

ಈ ಚಿತ್ರದಲ್ಲಿ ಏನಿದೆ ಎಂದು ಗಮನಿಸಿ

ಈ ಚಿತ್ರವನ್ನು ಜನಪ್ರಿಯ ಗುಂಪಿನ ಫೈಂಡ್ ದಿ ಸ್ನೈಪರ್‌ನಲ್ಲಿ (FindTheSniper) ಹೆಸರಿನ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಮೊದಲ ನೋಟದಲ್ಲಿ, ನೀವು ಸ್ಪಷ್ಟ ನೀಲಿ ನೀರಿನಿಂದ ಕೂಡಿದ ಈಜುಕೊಳದ ಒಂದು ಭಾಗವನ್ನು ಮಾತ್ರ ನೋಡುತ್ತೀರಿ. ಎಡಭಾಗದಲ್ಲಿ ಕೊಳದ ಅಂಚು ಇದೆ. ಇಲ್ಲಿ ಕೆಲವು ಕಪ್ಪು ಕಲೆಗಳು ಅಥವಾ ನೆರಳುಗಳನ್ನು ಹೊಂದಿರುವ ಒರಟಾದ ವಸ್ತುವು ನಿಮ್ಮ ಕಣ್ಣಿಗೆ ಕಾಣಿಸುತ್ತದೆ. ಈ ನೀರಿನ ಮಧ್ಯದಲ್ಲಿ ಗಾಢ ನೀಲಿ ಅಥವಾ ಕಪ್ಪು ಡಿಸ್ಕ್ ಅನ್ನು ಹೋಲುವ ಸಣ್ಣ, ವೃತ್ತಾಕಾರದ ವಸ್ತುವು ಇದೆ. ಆದರೆ ತೀಕ್ಷ್ಣ ದೃಷ್ಟಿ ಇರುವವರು ಮಾತ್ರ ಇಲ್ಲಿ ಅಡಗಿರುವ ಕಪ್ಪೆಯನ್ನು ತ್ವರಿತವಾಗಿ ಗುರುತಿಸಬಹುದು.

ಈ ಸವಾಲನ್ನು ಸ್ವೀಕರಿಸಿದ್ದೀರಾ?

ಇದನ್ನೂ ಓದಿ
ಈ ಚಿತ್ರದಲ್ಲಿ ಅಡಗಿರುವ ಮೀನನ್ನು ಹುಡುಕಿ ನೋಡೋಣ
ಈ ಚಿತ್ರದಲ್ಲಿ ಅಡಗಿರುವ ಬೆಕ್ಕನ್ನು ಹತ್ತು ಸೆಕೆಂಡುಗಳಲ್ಲಿ ಕಂಡು ಹಿಡಿಯಿರಿ
ಈ ಕೊಳದಲ್ಲಿ ಅಡಗಿರುವ ಆಮೆಯನ್ನು ಕಂಡುಹಿಡಿಯಿರಿ
ಹದ್ದಿನ ಕಣ್ಣು ಇರುವವರು ಈ ಚಿತ್ರದಲ್ಲಿ ಅಡಗಿರುವ ಶ್ವಾನವನ್ನು ಗುರುತಿಸಿ

ಈ ಚಿತ್ರದಲ್ಲಿ ಕಪ್ಪೆಯನ್ನು ಗುರುತಿಸುವ ಸವಾಲು ನೀಡಲಾಗಿದೆ. ಈ ಚಿತ್ರವು ಆಕರ್ಷಕ ಒಗಟು ಅನುಭವಿ ಆಟಗಾರರಿಗೂ ತಲೆ ಕೆರೆದುಕೊಳ್ಳುವಂತೆ ಮಾಡಿದೆ. ಕಡಿಮೆ ಸಮಯದಲ್ಲಿ ಉತ್ತರ ಕಂಡು ಹಿಡಿಯುವುದು ಕಷ್ಟಕರ. ಆದರೆ ವೀಕ್ಷಣಾ ಕೌಶಲ್ಯಗಳ ಚೆನ್ನಾಗಿದ್ರೆ ಉತ್ತರ ಕಂಡುಕೊಳ್ಳುವುದು ದೊಡ್ಡ ವಿಷಯವೇ ಅಲ್ಲ. ಈಜುಕೊಳದಲ್ಲಿ ಅಡಗಿರುವ ಕಪ್ಪೆಯನ್ನು ಗುರುತಿಸುವ ಈ ಸವಾಲನ್ನು ಸ್ವೀಕರಿಸಲು ಸಿದ್ಧವಿದ್ದೀರಾ.

ಇದನ್ನೂ ಓದಿ:ಈ ಚಿತ್ರದಲ್ಲಿ ಅಕ್ಟೋಪಸ್‌ಗಳ ನಡುವೆ ಅಡಗಿದೆ ಮೀನು, 10 ಸೆಕೆಂಡುಗಳಲ್ಲಿ ಕಂಡುಹಿಡಿಯಿರಿ

ಕಪ್ಪೆಯೂ ನಿಮ್ಮ ಕಣ್ಣಿಗೆ ಕಾಣಿಸಿತೇ?

ಈ ಈಜುಕೊಳದಲ್ಲಿ ಅಡಗಿರುವ ಕಪ್ಪೆಯೂ ನಿಮ್ಮ ಕಣ್ಣಿಗೆ ಕಾಣಿಸಿತೇ?. ನೀವು ಕಪ್ಪೆಯನ್ನು ಹುಡುಕುವಲ್ಲಿ ಯಶಸ್ವಿಯಾಗಿದ್ದರೆ ವೀಕ್ಷಣಾ ಕೌಶಲ್ಯ ಉತ್ತಮವಾಗಿದೆ ಎಂದರ್ಥ. ಉತ್ತರ ಹುಡುಕುವಲ್ಲಿ ಸೋತು ಹೋಗಿದ್ದರೆ ನಾವೇ ನಿಮಗೆ ಕಪ್ಪೆ ಎಲ್ಲಿದೆ ಎನ್ನುವ ಸುಳಿವನ್ನು ನೀಡುತ್ತೇವೆ. ಆಳವಾದ ನೀಲಿ ಪದರ ಮತ್ತು ತರಂಗಗಳಿಂದ ನೀರಿನ ಅಡಿಯಲ್ಲಿ ಇರುವ ಕಪ್ಪೆಯನ್ನು ಗುರುತಿಸಲು ಕಷ್ಟವಾಗುತ್ತವೆ. ಆದಾಗ್ಯೂ, ನೀವು ಫೋಟೋವನ್ನು ಝೋಮ್ ಮಾಡಿ. ಕಪ್ಪೆಯನ್ನು ಪೂಲ್ ಗೋಡೆಯ ಮಧ್ಯಭಾಗದಲ್ಲಿ ಅಥವಾ ಬಲಭಾಗದಲ್ಲಿ ಗುರುತಿಸಬಹುದು. ಕಪ್ಪೆಯೂ ಎರಡು ಕಪ್ಪು ಕಲೆಗಳ ನಡುವೆ ಗೋಚರಿಸುತ್ತದೆ. ನೀವು ಕಣ್ಣು ಬಿಟ್ಟು ಈ ಚಿತ್ರ ನೋಡಿ ಕಪ್ಪೆ ಎಲ್ಲಿದೆ ಎಂದು ಹೇಳಿ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ