
ಸೋಶಿಯಲ್ ಮೀಡಿಯಾದಲ್ಲಿ ಕಣ್ಣಾಯಿಸಿದಾಗಲೆಲ್ಲಾ ಆಪ್ಟಿಕಲ್ ಇಲ್ಯೂಷನ್ (optical illusion) ಒಗಟಿನ ಚಿತ್ರಗಳು ವೈರಲ್ ಆಗುತ್ತಿರುತ್ತದೆ. ಈ ಒಗಟಿನ ಚಿತ್ರಗಳು ಸರಳವಾಗಿ ಕಂಡರೂ ಅಷ್ಟೇ ಟ್ರಿಕ್ಕಿಯಾಗಿರುತ್ತದೆ. ಕೆಲವರಿಗೆ ಎಷ್ಟೇ ಸಮಯ ತೆಗೆದುಕೊಂಡರೂ ಇಂತಹ ಒಗಟುಗಳನ್ನು ಬಿಡಿಸಲು ಆಗುವುದಿಲ್ಲ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಆಪ್ಟಿಕಲ್ ಇಲ್ಯೂಷನ್ ಚಿತ್ರವು ಬಹಳ ಕಠಿಣವಾಗಿದೆ. ಜಾಣತನದಿಂದ ಮರೆ ಮಾಡಲಾಗಿರುವ ಐಸ್ ಕ್ರೀಮ್ ಕಂಡು ಹಿಡಿಯುವ ಸವಾಲು ಇಲ್ಲಿದೆ. ಈ ಒಗಟು ಬಿಡಿಸಲು ಕೇವಲ 9 ಸೆಕೆಂಡುಗಳಷ್ಟು ಟೈಮ್ ಇದೆ.
ಆಪ್ಟಿಕಲ್ ಭ್ರಮೆಯ ಚಿತ್ರವೊಂದು ವೈರಲ್ ಆಗಿದ್ದು, ಇಲ್ಲಿ ಮಕ್ಕಳು ಯುವಕ ಯುವತಿಯರು, ಪುರುಷರು, ಮಹಿಳೆಯರು ಸೇರಿದಂತೆ ವೃದ್ಧರು ಇರುವುದನ್ನು ಕಾಣಬಹುದು. ಇದೆಲ್ಲದರ ನಡುವೆ ಐಸ್ ಕ್ರೀಮ್ ಅನ್ನು ಜಾಣತನದಿಂದ ಮರೆಮಾಡಲಾಗಿದೆ. ಅದನ್ನು ನಿಮಗೆ ನೀಡಿರುವ ಇಂತಿಷ್ಟು ಸಮಯದೊಳಗೆ ಪತ್ತೆ ಹಚ್ಚಬೇಕು.
ಇದನ್ನೂ ಓದಿ:ಈ ಚಿತ್ರದಲ್ಲಿ ಮರೆಮಾಡಲಾಗಿರುವ ತೆಂಗಿನಕಾಯಿಯನ್ನು ಗುರುತಿಸಿ ನೋಡೋಣ
ಆಪ್ಟಿಕಲ್ ಇಲ್ಯೂಷನ್ ಒಗಟಿನ ಆಟವನ್ನು ಬಿಡಿಸಲು ನಿಮಗೆ ಕೊಟ್ಟಿರುವ ಸಮಯಾವಕಾಶ ಒಂಬತ್ತು ಸೆಕೆಂಡುಗಳು ಮಾತ್ರ. ಈ ಸಮಯದೊಳಗೆ ನಿಮಗೆ ಐಸ್ ಕ್ರೀಮ್ ಹುಡುಕಲು ಸಾಧ್ಯವಾಗದೇ ಇರಬಹುದು. ಆದರೆ ಐಸ್ ಕ್ರೀಮ್ ಎಲ್ಲಿದೆ ಎಂದು ಈ ಕೆಳಗಿನ ಚಿತ್ರದಲ್ಲಿ ಕೆಂಪು ಬಣ್ಣದಲ್ಲಿ ಗುರುತಿಸಿದ್ದೇವೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ