Optical Illusion: ಈ ಚಿತ್ರದಲ್ಲಿ ಮರೆಮಾಡಲಾಗಿರುವ ತೆಂಗಿನಕಾಯಿಯನ್ನು ಗುರುತಿಸಿ ನೋಡೋಣ
ದಿನನಿತ್ಯ ಸೋಶಿಯಲ್ ಮೀಡಿಯಾದಲ್ಲಿ ಮೆದುಳಿಗೆ ಕೆಲಸ ನೀಡುವ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ವೈರಲ್ ಆಗುತ್ತಿರುತ್ತವೆ. ಇಂತಹ ಟ್ರಿಕ್ಕಿ ಒಗಟಿನ ಚಿತ್ರಗಳನ್ನು ಬಿಡಿಸುತ್ತ ಕುಳಿತರೆ ಸಮಯ ಕಳೆದದ್ದೇ ತಿಳಿಯಲ್ಲ. ಇದೀಗ ವೈರಲ್ ಆಗಿರುವ ಚಿತ್ರದಲ್ಲಿ ಮರೆಮಾಡಲಾಗಿರುವ ತೆಂಗಿನಕಾಯಿಯನ್ನು ಕಂಡುಹಿಡಿಯುವ ಸವಾಲು ನೀಡಲಾಗಿದೆ. ಈ ಒಗಟು ಬಿಡಿಸಲು ಸಾಧ್ಯವೇ ಎಂದು ಪ್ರಯತ್ನಿಸಿ.

ಆಪ್ಟಿಕಲ್ ಇಲ್ಯೂಷನ್ (Optical Illusion), ಬ್ರೈನ್ ಟೀಸರ್ ಸೇರಿದಂತೆ ಒಗಟಿನ ಚಿತ್ರಗಳೇ ಹಾಗೆ, ಒಂದು ಕ್ಷಣ ನಿಮ್ಮ ಕಣ್ಣನ್ನು ಮೋಸಗೊಳಿಸುತ್ತದೆ. ಈ ಚಿತ್ರಗಳು ನಿಮ್ಮ ಮೆದುಳಿಗೆ ಕೆಲಸ ನೀಡುವುದರ ಜತೆಗೆ ನಿಮ್ಮನ್ನು ರಿಲ್ಯಾಕ್ಸ್ ಆಗಿಸುತ್ತದೆ. ಆದರೆ, ಬುದ್ಧಿವಂತರು ಮಾತ್ರ ಕಡಿಮೆ ಸಮಯದಲ್ಲಿ ಉತ್ತರ ಕಂಡುಹಿಡಿಯುತ್ತಾರೆ. ಇದೀಗ ವೈರಲ್ ಆಗಿರುವ ಚಿತ್ರದಲ್ಲಿನ ಈ ಒಗಟನ್ನು ಬಿಡಿಸಲು ಸಾಧ್ಯವೇ ಎಂದು ನೋಡಿ. ನೀವು ಈ ಚಿತ್ರದಲ್ಲಿ ತೆಂಗಿನಕಾಯಿ ಎಲ್ಲಿದೆ ಎಂದು ಹೇಳಬೇಕು. ಈ ಸವಾಲು ಸ್ವೀಕರಿಸಲು ನೀವು ರೆಡಿ ಇದ್ದೀರಾ
ಈ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಏನಿದೆ?

ಈ ಆಪ್ಟಿಕಲ್ ಇಲ್ಯೂಷನ್ ಚಿತ್ರವನ್ನು ನೋಡಿದಾಗ ಕೂಡಲೇ ನಿಮ್ಮನ್ನು ಭ್ರಮೆಗೆ ಸಿಲುಕಿಸುತ್ತದೆ. ಈ ಚಿತ್ರವು ಅದೇ ರೀತಿಯಿದ್ದು, ಇಲ್ಲಿ ಮೇಕೆ, ಹುಂಜ ಹಾಗೂ ಹೆಂಟೆ ಇರುವುದನ್ನು ಕಾಣಬಹುದು. 10 ಸೆಕೆಂಡುಗಳ ಒಳಗೆ ಈ ಚಿತ್ರದಲ್ಲಿ ಮರೆ ಮಾಡಲಾಗಿರುವ ತೆಂಗಿನಕಾಯಿಯನ್ನು ಕಂಡುಹಿಡಿಯಬೇಕು.
ಇದನ್ನೂ ಓದಿ:ನೀವು ಜಾಣರಾಗಿದ್ರೆ ಈ ಚಿತ್ರದಲ್ಲಿರುವ ಸೂಜಿಯನ್ನು ಕಂಡು ಹಿಡಿಯಿರಿ
ತೆಂಗಿನಕಾಯಿಯನ್ನು ಕಂಡು ಹಿಡಿಯಲು ಸಾಧ್ಯವಾಯಿತೇ?
ನೀವು ಎಷ್ಟೇ ಪ್ರಯತ್ನಿಸಿದರೂ ತೆಂಗಿನಕಾಯಿ ನಿಮ್ಮ ಕಣ್ಣಿಗೆ ಬಿದ್ದಿಲ್ಲವೇ. ನಾವು ಹೇಳುವಂತೆ ನೀವು ಮಾಡಿ, ಫೋಟೋವನ್ನು ಭಾಗಗಳಾಗಿ ವಿಂಗಡಿಸಿಕೊಳ್ಳಿ. ಪ್ರತಿಯೊಂದು ಭಾಗಗಳನ್ನು ಸ್ಕ್ಯಾನ್ ಮಾಡಿ. ಒಂದು ವೇಳೆ ತೆಂಗಿನಕಾಯಿ ಗುರುತಿಸಲು ಸಾಧ್ಯವಾಗಿಲ್ಲವೇ. ಈ ಕೆಳಗಿನ ಚಿತ್ರದಲ್ಲಿ ತೆಂಗಿನಕಾಯಿಯನ್ನು ಗುರುತಿಸಿದ್ದೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




