
ಕೆಲವೊಮ್ಮೆ ನೀವು ನಿಮ್ಮನ್ನು ಹಾಗೂ ನಿಮ್ಮ ಬುದ್ಧಿವಂತಿಕೆಯನ್ನು ಪರೀಕ್ಷಿಸಿಕೊಳ್ಳಬೇಕಾಗುತ್ತದೆ. ಹೀಗಾದಾಗ ಈ ಆಪ್ಟಿಕಲ್ ಇಲ್ಯೂಷನ್ (optical illusion) ಚಿತ್ರಗಳು ನಿಮ್ಮ ಸಹಾಯಕ್ಕೆ ಬರುತ್ತದೆ. ಈ ಚಿತ್ರಗಳಲ್ಲಿ ಕೆಲವೊಂದು ಹೆಚ್ಚು ಸವಾಲು ಇದ್ದು ಬಿಟ್ಟರೆ ಸಮಯ ಕಳೆಯದ್ದು ತಿಳಿಯುವುದೇ ಇಲ್ಲ. ಇದು ನಿಮ್ಮ ಬುದ್ಧಿ ಹಾಗೂ ದೃಷ್ಟಿ ತೀಕ್ಷ್ಣತೆ ಎಷ್ಟಿದೆ ಎಂದು ತಿಳಿಸುತ್ತದೆ. ಆದರೆ ಈ ಕೆಲವು ಒಗಟುಗಳನ್ನು ಸ್ವಲ್ಪ ಟ್ರಿಕ್ಕಿಯಾಗಿ ಕಂಡರೂ ಬಿಡಿಸುವುದರಲ್ಲಿರುವ ಖುಷಿನೇ ಬೇರೆ. ಇದೀಗ ಆಪ್ಟಿಕಲ್ ಇಲ್ಯೂಷನ್ ಚಿತ್ರವೊಂದು ವೈರಲ್ ಆಗಿದೆ. ಹಸಿರಾದ ಹುಲ್ಲು ಹಾಗೂ ಎಲೆಯ ನಡುವೆ ಕಪ್ಪೆಯೊಂದು ಅಡಗಿದ್ದು, ಅದನ್ನು ನೀವು ಕಂಡು ಹಿಡಿಯಬೇಕು. ಆದರೆ ಈ ಒಗಟು ಬಿಡಿಸಲು ನಿರ್ದಿಷ್ಟ ಸಮಯಾವಕಾಶವಿಲ್ಲ.
No_Feed_9708 ಎಂಬ ಹೆಸರಿನ ಬಳಕೆದಾರರು ಹಸಿರಾದ ಹುಲ್ಲು, ಪೊದೆ ಹಾಗೂ ಎಲೆಗಳನ್ನು ಒಳಗೊಂಡಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಚಿತ್ರವನ್ನು ನೀವು ನೋಡಿದಾಗ ಇದು ಪ್ರಕೃತಿಯ ನೋಟವನ್ನು ಒದಗಿಸುತ್ತದೆ. ಹಸಿರಾದ ಹುಲ್ಲು ಹಾಗೂ ಎಲೆಗಳ ಮೇಲೆ ಕಪ್ಪೆಯೊಂದನ್ನು ಮರೆಮಾಡಲಾಗಿದೆ. ಹೀಗಾಗಿ ಈ ಸಣ್ಣ ಗಾತ್ರದ ಕಪ್ಪೆಯನ್ನು ಹುಡುಕುವ ಸವಾಲು ನೀಡಲಾಗಿದೆ.
ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಭ್ರಮೆಯನ್ನುಂಟು ಮಾಡಬಹುದು. ಮೊದಲ ನೋಟದಲ್ಲೇ ನಿಮ್ಮ ಕಣ್ಣನ್ನು ಮೋಸಗೊಳಿಸಬಹುದು. ಆದರೆ ಈ ಚಿತ್ರದಲ್ಲಿ ಮರೆಮಾಡಲಾಗಿರುವ ಕಪ್ಪೆಯನ್ನು ಹುಡುಕಲು ಕಾಲಮಿತಿ ಇಲ್ಲದಿದ್ದರೂ, ಇದು ಟ್ರಿಕ್ಕಿಯಾಗಿದ್ದು ಒಗಟು ಬಿಡಿಸುವುದು ಕಷ್ಟಸಾಧ್ಯ. ಆದರೆ ಈ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿ ಎಲೆಗಳು ಹುಲ್ಲಿನತ್ತ ಹೆಚ್ಚು ಗಮನಹರಿಸಿ. ನೆರಳಿನಂತಹ ಸಣ್ಣ ಸುಳಿವು ಕೂಡ ಒಗಟು ಬಿಡಿಸಲು ಸಹಾಯ ಮಾಡುತ್ತದೆ. ಸಣ್ಣ ಉಭಯವಾಸಿ ಜೀವಿಯಾಗಿದ್ದು, ಮೊದಲ ನೋಟದಲ್ಲೇ ಇದು ನಿಮ್ಮ ಕಣ್ಣಿಂದ ತಪ್ಪಿಸಿಕೊಳ್ಳಬಹುದಾಗಿದೆ.
ಇದನ್ನೂ ಓದಿ:Optical Illusion: ಈ ಕಾಡಿನಲ್ಲಿ ಅಡಗಿರುವ ಜಿಂಕೆಯನ್ನು ಕಂಡು ಹಿಡಿಯಿರಿ
ಈ ಭ್ರಮೆ ಉಂಟು ಮಾಡುವ ಈ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಅಡಗಿರುವ ಕಪ್ಪೆಯನ್ನು ಕಂಡುಹಿಡಿಯುವಲ್ಲಿ ಸೋತಿದ್ದೀರಾ. ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ. ಸಣ್ಣ ಕಪ್ಪೆ ಎಲ್ಲಿದೆ ಎಂದು ಕೆಂಪು ಬಣ್ಣದಲ್ಲಿ ಗುರುತಿಸಿದ್ದೇವೆ. ಈ ಮೇಲಿನ ಚಿತ್ರವನ್ನು ಗಮನಿಸಿದರೆ ಈ ಉಭಯವಾಸಿ ಜೀವಿ ನಿಮ್ಮ ಕಣ್ಣಿಗೆ ಬೀಳುತ್ತದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕಿಕ್ಲ್ ಮಾಡಿ