
ಈಗಂತೂ ಸೋಶಿಯಲ್ ಮೀಡಿಯಾದಲ್ಲಿ ಆಪ್ಟಿಕಲ್ ಇಲ್ಯೂಷನ್ (Optical Illusion) ಚಿತ್ರಗಳು ವೈರಲ್ ಆಗುತ್ತಿರುತ್ತವೆ. ಕಣ್ಣಿನ ತೀಕ್ಷ್ಣತೆಗೆ ಸವಾಲೊಡ್ಡುವ ಒಗಟಿನ ಆಟಗಳನ್ನು ಬಿಡಿಸುವುದರಲ್ಲಿರುವ ಮಜಾನೇ ಬೇರೆ. ಇದು ಯೋಚನಾ ಶಕ್ತಿಗೆ ಸವಾಲು ನೀಡುವುದಲ್ಲದೇ ಮೆದುಳಿಗೆ ವ್ಯಾಯಾಮ ನೀಡುತ್ತದೆ. ಇದೀಗ ವೈರಲ್ ಆಗಿರುವ ಈ ಚಿತ್ರವು ನಿಮ್ಮನ್ನು ಭ್ರಮೆಯಲ್ಲಿ ಸಿಲುಕಿಸಬಹುದು. ಮನೆಯ ವರಾಂಡಾದಲ್ಲಿ ಅಡಗಿರುವ ಹಲ್ಲಿಯನ್ನು ಹುಡುಕುವ ಸವಾಲು ಇಲ್ಲಿದೆ. ಈ ಸರೀಸೃಪವನ್ನು ಗುರುತಿಸುವುದು ನಿಮ್ಮ ಬುದ್ಧಿವಂತಿಕೆಯನ್ನು ಪರೀಕ್ಷಿಸುವಂತಿದೆ. ಈ ಟ್ರಿಕ್ಕಿ ಒಗಟನ್ನು ಬಿಡಿಸಲು ಸಾಧ್ಯವೇ ಎಂದು ನೋಡಿ.
ಆಪ್ಟಿಕಲ್ ಇಲ್ಯೂಷನ್ ಚಿತ್ರವನ್ನು ಫೈಂಡ್ ದಿ ಸ್ನೈಪರ್ (r/FindTheSniper) ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಈ ಚಿತ್ರವನ್ನು ಮೊದಲು ನೋಡಿದಾಗ ಮನೆಯ ಹಿಂಭಾಗದ ವರಾಂಡಾದಲ್ಲಿ ಹಿನ್ನೆಲೆಯಲ್ಲಿ ಎರಡು ಕಂದು ಬಣ್ಣದ ಕುರ್ಚಿಯಿದ್ದು, ಈ ಚೌಕಟ್ಟಿನಲ್ಲಿ ಹಲ್ಲಿ ಅಡಗಿದೆ. ಈ ಸರೀಸೃಪ ಸುತ್ತಮುತ್ತಲಿನ ಪ್ರದೇಶಗಳೊಂದಿಗೆ ಸರಾಗವಾಗಿ ಬೆರೆತುಹೋಗಿದ್ದು, ಈ ಹಲ್ಲಿಯನ್ನು ಹುಡುಕಬೇಕು.
ಇದನ್ನೂ ಓದಿ:ಈ ಎರಡು ಚಿತ್ರಗಳಲ್ಲಿನ ಮೂರು ವ್ಯತ್ಯಾಸ ಗುರುತಿಸಬಲ್ಲಿರಾ
ಈ ಒಗಟಿನ ಚಿತ್ರಗಳು ನಿಮ್ಮನ್ನು ಭ್ರಮೆಯಲ್ಲಿ ಸಿಲುಕಿಸಿ, ನಿಮ್ಮ ಕಣ್ಣನ್ನು ಮೋಸಗೊಳಿಸುತ್ತವೆ. ಸರೀಸೃಪ ಜೀವಿ ಹಲ್ಲಿಯ ಮೈ ಬಣ್ಣವು ಈ ಸುತ್ತಲಿನ ಪ್ರದೇಶದೊಂದಿಗೆ ಬೆರೆತು ಹೋಗಿದ್ದು, ನಿಮಗೆ ಹಲ್ಲಿಯನ್ನು ಹುಡುಕುವುದು ಕಷ್ಟವಾಗಬಹುದು. ಹೀಗಾಗಿ ಚಿತ್ರವನ್ನು ವಿಭಾಗಗಳಾಗಿ ವಿಂಗಡಿಸಿ ಸೂಕ್ಷ್ಮವಾಗಿ ನೋಡಿದ್ರೂ ಈ ಜೀವಿ ನಿಮ್ಮ ಕಣ್ಣಿಗೆ ಕಾಣಿಸುತ್ತಿಲ್ಲವೇ. ನಾವು ನಿಮಗೆ ಈ ಸರೀಸೃಪ ಎಲ್ಲಿದೆ ಎಂದು ಹೇಳುತ್ತೇವೆ. ಹಲ್ಲಿಯೂ ಎಡ ಕುರ್ಚಿಯ ಹಿಂಭಾಗದ ಮಧ್ಯದಲ್ಲಿ ವಿಶ್ರಾಂತಿ ಪಡೆಯುತ್ತಿದ್ದು, ನಿಮ್ಮ ಕಣ್ಣಿಗೆ ಕಾಣಿಸಿತು ಎಂದು ಭಾವಿಸುತ್ತೇವೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:21 am, Tue, 9 December 25