AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೀಸೆಯಿಂದಲೇ ಫೇಮಸ್ ಈ ರೆಡ್ಡಿಯ್ಯ; ಈ ವ್ಯಕ್ತಿಯ ಉದ್ದನೆಯ ಮೀಸೆ ಹಿಂದಿದೆ ಈ ಗುಟ್ಟು

ಗಡ್ಡ ಮೀಸೆ ಇದ್ರೇನೆ ಪುರುಷರಿಗೆ ಚಂದ. ಆದರೆ ಏಲೂರು ಜಿಲ್ಲೆಯ ಅಚ್ಚಿಯಪಲೆಂನ ತಂಬಾಕು ಕೃಷಿಕ ಮೀಸೆ ರೆಡ್ಡಿಯ್ಯ ಕೂಡ ತಮ್ಮ ವಿಶಿಷ್ಟ ಮೀಸೆಯಿಂದ ಎಲ್ಲರ ಗಮನ ಸೆಳೆದಿದ್ದಾರೆ. ಉದ್ದನೆಯ ಮೀಸೆ ಬೆಳೆಸಿ ಎಲ್ಲೆಡೆ ಫೇಮಸ್ ಆಗಿದ್ದಾರೆ. ಇವರ ಮೀಸೆಯ ಉದ್ದ ಕೇಳಿದ್ರೆ ನೀವು ಶಾಕ್ ಆಗೋದು ಗ್ಯಾರಂಟಿ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಮೀಸೆಯಿಂದಲೇ ಫೇಮಸ್ ಈ ರೆಡ್ಡಿಯ್ಯ; ಈ ವ್ಯಕ್ತಿಯ ಉದ್ದನೆಯ ಮೀಸೆ ಹಿಂದಿದೆ ಈ ಗುಟ್ಟು
ಮೀಸೆ ರೆಡ್ಡಿಯ್ಯImage Credit source: Social Media
ಸಾಯಿನಂದಾ
|

Updated on:Dec 08, 2025 | 4:45 PM

Share

ಆಂಧ್ರಪ್ರದೇಶ, ಡಿಸೆಂಬರ್ 08: ಗಡ್ಡ, ಮೀಸೆ ಪುರುಷತ್ವದ ಸಂಕೇತ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಇತ್ತೀಚೆಗಿನ ದಿನಗಳಲ್ಲಿ ಗಡ್ಡ, ಮೀಸೆ ಬಿಡುವುದು ಟ್ರೆಂಡ್ ಆಗಿದೆ. ಆದರೆ ಈ ಮೀಸೆ ರೆಡ್ಡಿಯ್ಯರವರ (Moustache Reddiyya) ಈ ಮೀಸೆ ಬೆಳೆಸುವ ಕ್ರೇಜ್ ನಿನ್ನೆ ಮೊನ್ನೆಯದಲ್ಲ. 1982 ರಿಂದ ತಮ್ಮ ಮೀಸೆಯನ್ನು ಹವ್ಯಾಸವಾಗಿ ಬೆಳೆಸಿಕೊಂಡು ಬಂದು, ಎಲ್ಲರಿಗೂ ಚಿರಪರಿಚಿತರಾಗಿದ್ದಾರೆ. ಆಂಧ್ರ ಪ್ರದೇಶದ (Andhra Pradesh) ಏಲೂರು ಜಿಲ್ಲೆಯ ಬುಟ್ಟಾಯಗುಡೆಮ್ ಮಂಡಲದ ಅಚ್ಚಿಯಪಾಲಂನ ರೆಡ್ಡಿಯ್ಯ ತಮ್ಮ ಮೀಸೆಯಿಂದಲೇ ಎಲ್ಲರೂ ಇವರನ್ನು ಗುರುತಿಸುತ್ತಾರಂತೆ. ಮೀಸೆ ರೆಡ್ಡಿಯ್ಯರವರು ತಂಬಾಕು ವ್ಯಾಪಾರಿಯಾಗಿದ್ದು, ಮೀಸೆಯಷ್ಟೇ ಕುಟುಂಬವನ್ನು ಪ್ರೀತಿಸುತ್ತಾರೆ. ರೆಡ್ಡಿಯ್ಯರವರ ಕುಟುಂಸ್ಥರಿಗೂ ಇವರ ಮೀಸೆ ಕಂಡರೆ ಇಷ್ಟವಂತೆ. ತಮ್ಮ ಈ ಹವ್ಯಾಸವು ಇಂದು ನಾಲ್ಕು ಜನರು ಇವರನ್ನು ಗುರುತಿಸುವಂತೆ  ಮಾಡಿದೆ.

ರೆಡ್ಡಿಯ್ಯರವರ ಮೀಸೆಯ ಹಿಂದಿನ ಗುಟ್ಟು ಇದೆ ನೋಡಿ

1982 ರಿಂದ ತಮ್ಮ ಮೀಸೆಯನ್ನು ಉತ್ಸಾಹದಿಂದ ಬೆಳೆಸಲು ಪ್ರಾರಂಭಿಸಿದರು, ಅಂದು ಸುಮಾರು ಮೂರು ಅಡಿ ಮತ್ತು ಎರಡು ಇಂಚುಗಳಷ್ಟು ಉದ್ದವಿತ್ತು. ವಯಸ್ಸಾದಂತೆ ಮೀಸೆಯೂ ಉದುರುತಿದ್ದು ಎರಡೂವರೆ ಅಡಿ ಉದ್ದವಿದೆಯಂತೆ. ಆದರೆ ಉದ್ದನೆಯ ಮೀಸೆಯ ಹಿಂದಿದೆ ಈ ನಿಂಬೆ ಹಣ್ಣು. ಹೌದು, ಪ್ರಾರಂಭದಿಂದಲೂ ಮೀಸೆಯ ಮೇಲೆ ನಿಂಬೆಹಣ್ಣು ಹಚ್ಚಿಕೊಳ್ಳುತ್ತಿದ್ದೆ ಎನ್ನುತ್ತಾರೆ ರೆಡ್ಡಿಯ್ಯ.

ಇದನ್ನೂ ಓದಿ:ಅಮ್ಮನ ಮೃತದೇಹದ ಮುಂದೆ ಪ್ರತಿಜ್ಞೆ: 160 ಕೆಜಿಯಿಂದ 85 ಕೆಜಿಗೆ ತೂಕ ಇಳಿಸಿಕೊಂಡ ಯುವಕ

ಈ ಮೀಸೆಯೇ ರೆಡ್ಡಿಯ್ಯರವರಿಗೆ ಖ್ಯಾತಿ ತಂದುಕೊಟ್ಟದ್ದು. ರಾಜಕೀಯ ಮತ್ತು ಚಲನಚಿತ್ರೋದ್ಯಮದ ಮನ್ನಣೆಯೊಂದಿಗೆ ರೆಡ್ಡಿಯ್ಯ ಕೆಲವು ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿಯೂ ನಟಿಸಿದರು. ರಾಜಕೀಯವಾಗಿ ಎನ್.ಟಿ. ರಾಮರಾವ್ ಅವರಿಂದ ಅತ್ಯುತ್ತಮ ತಂಬಾಕು ರೈತ ಪ್ರಶಸ್ತಿಯನ್ನು ಪಡೆದರು. ತಮ್ಮ ಮೀಸೆಯಿಂದ ಪ್ರಭಾವಿತರಾಗಿ ಡಿ.ಸಿ.ಬಿ. ಅಧ್ಯಕ್ಷ ಹುದ್ದೆಯನ್ನು ಸಹ ನೀಡಿದರು. ಆಂಧ್ರ ಶುಗರ್ಸ್ ಪೆಂಡ್ಯಾಲ ಅಚಿಬಾಬು ಮತ್ತು ಎರ್ರಾಮ್ ನಾಯ್ಡು ಅವರಂತಹ ಪ್ರಮುಖ ರಾಜಕಾರಣಿಗಳು ಹಾಗೂ ಸಿನಿಮಾರಂಗದ ನಟರು ಮೀಸೆಯಿಂದಲೇ ಪರಿಚಯವಾದರು ಎನ್ನುತ್ತಾರೆ ಮೀಸೆ ರೆಡ್ಡಿಯ್ಯ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:44 pm, Mon, 8 December 25

ಮುಸ್ಲಿಂ ಯುವತಿಯೊಂದಿಗೆ ಇದ್ದ ಹಿಂದೂ ಯುವಕರು ಮೇಲೆ ಹಲ್ಲೆ
ಮುಸ್ಲಿಂ ಯುವತಿಯೊಂದಿಗೆ ಇದ್ದ ಹಿಂದೂ ಯುವಕರು ಮೇಲೆ ಹಲ್ಲೆ
ಶಿವಮೊಗ್ಗ: ಗ್ರಾಮಸ್ಥನಿಗೆ ಅವಾಚ್ಯವಾಗಿ ನಿಂದಿಸಿದ ಕಾಂಗ್ರೆಸ್ ಕಾರ್ಯಕರ್ತ
ಶಿವಮೊಗ್ಗ: ಗ್ರಾಮಸ್ಥನಿಗೆ ಅವಾಚ್ಯವಾಗಿ ನಿಂದಿಸಿದ ಕಾಂಗ್ರೆಸ್ ಕಾರ್ಯಕರ್ತ
ಬಿಕೆ ಹರಿಪ್ರಸಾದ್ ಬಟ್ಟೆ ಹರಿದರಾ ಬಿಜೆಪಿಗರು? ಅಸಲಿ ಸತ್ಯ ಈ ವಿಡಿಯೋದಲ್ಲಿದೆ
ಬಿಕೆ ಹರಿಪ್ರಸಾದ್ ಬಟ್ಟೆ ಹರಿದರಾ ಬಿಜೆಪಿಗರು? ಅಸಲಿ ಸತ್ಯ ಈ ವಿಡಿಯೋದಲ್ಲಿದೆ
ಭಾಷಣಕ್ಕೆ ಹರಿಪ್ರಸಾದ್​​ ಪಟ್ಟು: ಸದನದಿಂದ ಹೊರಟ ಗವರ್ನರ್​ ತಡೆದು ಹೈಡ್ರಾಮಾ
ಭಾಷಣಕ್ಕೆ ಹರಿಪ್ರಸಾದ್​​ ಪಟ್ಟು: ಸದನದಿಂದ ಹೊರಟ ಗವರ್ನರ್​ ತಡೆದು ಹೈಡ್ರಾಮಾ
ವಾಸ್ತವಕ್ಕೆ ಬರಲು ಒದ್ದಾಡಿದ ಗಿಲ್ಲಿ; ಹೊಸ ವಿಡಿಯೋ ವೈರಲ್
ವಾಸ್ತವಕ್ಕೆ ಬರಲು ಒದ್ದಾಡಿದ ಗಿಲ್ಲಿ; ಹೊಸ ವಿಡಿಯೋ ವೈರಲ್
ನರೇಗಾ ಹೆಸರು ಬದಲಾವಣೆ ವಿವಾದ, ರಾಜ್ಯಪಾಲರ ಭಾಷಣ
ನರೇಗಾ ಹೆಸರು ಬದಲಾವಣೆ ವಿವಾದ, ರಾಜ್ಯಪಾಲರ ಭಾಷಣ
ರೋಡ್​​ಶೋ ವೇಳೆ ಮೀನು  ಹಿಡಿದು ಕುಣಿದ ಪಟಾಕಿ ರಕ್ಷಿತಾ
ರೋಡ್​​ಶೋ ವೇಳೆ ಮೀನು  ಹಿಡಿದು ಕುಣಿದ ಪಟಾಕಿ ರಕ್ಷಿತಾ
ಕೊನೆಯ ಓವರ್​ನಲ್ಲಿ 3 ಸಿಕ್ಸ್​ ಸಿಡಿಸಿ 3 ರನ್​ಗಳಿಂದ ಗೆದ್ದ ಹೋಬಾರ್ಟ್​ ಪಡೆ
ಕೊನೆಯ ಓವರ್​ನಲ್ಲಿ 3 ಸಿಕ್ಸ್​ ಸಿಡಿಸಿ 3 ರನ್​ಗಳಿಂದ ಗೆದ್ದ ಹೋಬಾರ್ಟ್​ ಪಡೆ
ಬೀದಿಯಲ್ಲಿ ವ್ಯಕ್ತಿಯ ಬೆನ್ನಟ್ಟಿ ಚಾಕುವಿನಿಂದ ಇರಿದು ಪುರುಷರ ಗುಂಪು
ಬೀದಿಯಲ್ಲಿ ವ್ಯಕ್ತಿಯ ಬೆನ್ನಟ್ಟಿ ಚಾಕುವಿನಿಂದ ಇರಿದು ಪುರುಷರ ಗುಂಪು
ಮಾಲೀಕರ ಅಂತ್ಯಕ್ರಿಯೆಗೂ ಟ್ರ್ಯಾಕ್ಟರ್ ಹತ್ತಿ ಬಂದ ನಾಯಿ
ಮಾಲೀಕರ ಅಂತ್ಯಕ್ರಿಯೆಗೂ ಟ್ರ್ಯಾಕ್ಟರ್ ಹತ್ತಿ ಬಂದ ನಾಯಿ