Optical Illusion: ಮನೆಯ ಹಿಂಭಾಗದ ವರಾಂಡಾದಲ್ಲಿ ಅಡಗಿ ಕುಳಿತಿರುವ ಹಲ್ಲಿಯನ್ನು ಗುರುತಿಸಬಲ್ಲಿರಾ
ನಿಮ್ಮ ಮೆದುಳು ಎಷ್ಟು ಚುರುಕುತನದಿಂದ ಕೂಡಿದೆ ಎಂದು ತಿಳಿದುಕೊಳ್ಳಬೇಕೇ. ಹಾಗಾದ್ರೆ ನೀವು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಈ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳತ್ತ ಕಣ್ಣು ಹಾಯಿಸುವುದು ಸೂಕ್ತ. ಇಲ್ಲೊಂದು ಅಂತಹದ್ದೇ ಇಲ್ಯೂಷನ್ ಚಿತ್ರವೊಂದು ವೈರಲ್ ಆಗಿದ್ದು, ಇಲ್ಲಿ ಜಾಣತನದಿಂದ ಮರೆ ಮಾಡಲಾಗಿರುವ ಹಲ್ಲಿಯನ್ನು ಹುಡುಕುವ ಸವಾಲು ನೀಡಲಾಗಿದೆ. ಈ ಒಗಟು ಬಿಡಿಸಲು ಸಾಧ್ಯವೇ ಎಂದು ಒಮ್ಮೆ ನೋಡಿ.

ಈಗಂತೂ ಸೋಶಿಯಲ್ ಮೀಡಿಯಾದಲ್ಲಿ ಆಪ್ಟಿಕಲ್ ಇಲ್ಯೂಷನ್ (Optical Illusion) ಚಿತ್ರಗಳು ವೈರಲ್ ಆಗುತ್ತಿರುತ್ತವೆ. ಕಣ್ಣಿನ ತೀಕ್ಷ್ಣತೆಗೆ ಸವಾಲೊಡ್ಡುವ ಒಗಟಿನ ಆಟಗಳನ್ನು ಬಿಡಿಸುವುದರಲ್ಲಿರುವ ಮಜಾನೇ ಬೇರೆ. ಇದು ಯೋಚನಾ ಶಕ್ತಿಗೆ ಸವಾಲು ನೀಡುವುದಲ್ಲದೇ ಮೆದುಳಿಗೆ ವ್ಯಾಯಾಮ ನೀಡುತ್ತದೆ. ಇದೀಗ ವೈರಲ್ ಆಗಿರುವ ಈ ಚಿತ್ರವು ನಿಮ್ಮನ್ನು ಭ್ರಮೆಯಲ್ಲಿ ಸಿಲುಕಿಸಬಹುದು. ಮನೆಯ ವರಾಂಡಾದಲ್ಲಿ ಅಡಗಿರುವ ಹಲ್ಲಿಯನ್ನು ಹುಡುಕುವ ಸವಾಲು ಇಲ್ಲಿದೆ. ಈ ಸರೀಸೃಪವನ್ನು ಗುರುತಿಸುವುದು ನಿಮ್ಮ ಬುದ್ಧಿವಂತಿಕೆಯನ್ನು ಪರೀಕ್ಷಿಸುವಂತಿದೆ. ಈ ಟ್ರಿಕ್ಕಿ ಒಗಟನ್ನು ಬಿಡಿಸಲು ಸಾಧ್ಯವೇ ಎಂದು ನೋಡಿ.
ಆಪ್ಟಿಕಲ್ ಇಲ್ಯೂಷನ್ ಚಿತ್ರವನ್ನು ಫೈಂಡ್ ದಿ ಸ್ನೈಪರ್ (r/FindTheSniper) ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಈ ಚಿತ್ರವನ್ನು ಮೊದಲು ನೋಡಿದಾಗ ಮನೆಯ ಹಿಂಭಾಗದ ವರಾಂಡಾದಲ್ಲಿ ಹಿನ್ನೆಲೆಯಲ್ಲಿ ಎರಡು ಕಂದು ಬಣ್ಣದ ಕುರ್ಚಿಯಿದ್ದು, ಈ ಚೌಕಟ್ಟಿನಲ್ಲಿ ಹಲ್ಲಿ ಅಡಗಿದೆ. ಈ ಸರೀಸೃಪ ಸುತ್ತಮುತ್ತಲಿನ ಪ್ರದೇಶಗಳೊಂದಿಗೆ ಸರಾಗವಾಗಿ ಬೆರೆತುಹೋಗಿದ್ದು, ಈ ಹಲ್ಲಿಯನ್ನು ಹುಡುಕಬೇಕು.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ

ಇದನ್ನೂ ಓದಿ:ಈ ಎರಡು ಚಿತ್ರಗಳಲ್ಲಿನ ಮೂರು ವ್ಯತ್ಯಾಸ ಗುರುತಿಸಬಲ್ಲಿರಾ
ಹಲ್ಲಿಯನ್ನು ಕಂಡು ಹಿಡಿಯಲು ಸಾಧ್ಯವಾಯಿತೇ?
ಈ ಒಗಟಿನ ಚಿತ್ರಗಳು ನಿಮ್ಮನ್ನು ಭ್ರಮೆಯಲ್ಲಿ ಸಿಲುಕಿಸಿ, ನಿಮ್ಮ ಕಣ್ಣನ್ನು ಮೋಸಗೊಳಿಸುತ್ತವೆ. ಸರೀಸೃಪ ಜೀವಿ ಹಲ್ಲಿಯ ಮೈ ಬಣ್ಣವು ಈ ಸುತ್ತಲಿನ ಪ್ರದೇಶದೊಂದಿಗೆ ಬೆರೆತು ಹೋಗಿದ್ದು, ನಿಮಗೆ ಹಲ್ಲಿಯನ್ನು ಹುಡುಕುವುದು ಕಷ್ಟವಾಗಬಹುದು. ಹೀಗಾಗಿ ಚಿತ್ರವನ್ನು ವಿಭಾಗಗಳಾಗಿ ವಿಂಗಡಿಸಿ ಸೂಕ್ಷ್ಮವಾಗಿ ನೋಡಿದ್ರೂ ಈ ಜೀವಿ ನಿಮ್ಮ ಕಣ್ಣಿಗೆ ಕಾಣಿಸುತ್ತಿಲ್ಲವೇ. ನಾವು ನಿಮಗೆ ಈ ಸರೀಸೃಪ ಎಲ್ಲಿದೆ ಎಂದು ಹೇಳುತ್ತೇವೆ. ಹಲ್ಲಿಯೂ ಎಡ ಕುರ್ಚಿಯ ಹಿಂಭಾಗದ ಮಧ್ಯದಲ್ಲಿ ವಿಶ್ರಾಂತಿ ಪಡೆಯುತ್ತಿದ್ದು, ನಿಮ್ಮ ಕಣ್ಣಿಗೆ ಕಾಣಿಸಿತು ಎಂದು ಭಾವಿಸುತ್ತೇವೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:21 am, Tue, 9 December 25




