Optical Illusion: ಹಚ್ಚಹಸಿರಿನ ಮರಗಳ ನಡುವೆ ಅಡಗಿದೆ ಚಂದದ ಗಿಣಿ; ಜಸ್ಟ್ 10 ಸೆಕೆಂಡುಗಳಲ್ಲಿ ಹುಡುಕಿ ಹೇಳಿ

ಇತ್ತೀಚೆಗಿನ ದಿನಗಳಲ್ಲಿ ಮೆದುಳನ್ನು ಚುರುಕುಗೊಳಿಸುವ ದೃಷ್ಟಿ ಸಾಮರ್ಥ್ಯ ಪರೀಕ್ಷಿಸುವ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ್ಗೆ ವೈರಲ್ ಆಗುತ್ತಿರುತ್ತದೆ. ಇದೀಗ ಕಠಿಣ ಸವಾಲಿನ ಚಿತ್ರವೊಂದು ವೈರಲ್ ಆಗಿದ್ದು, ಮರದ ಕೊಂಬೆಯ ಮೇಲೆ ಅಡಗಿರುವ ಅಂದದ ಅರಗಿಣಿಯನ್ನು ಗುರುತಿಸಬೇಕು. ಈ ಒಗಟಿನ ಚಿತ್ರವನ್ನು ಬಿಡಿಸಲು ನಿಮ್ಮಿಂದ ಸಾಧ್ಯವೇ?, ಒಮ್ಮೆ ಪ್ರಯತ್ನಿಸಿ ನೋಡಿ.

Optical Illusion: ಹಚ್ಚಹಸಿರಿನ ಮರಗಳ ನಡುವೆ ಅಡಗಿದೆ ಚಂದದ ಗಿಣಿ; ಜಸ್ಟ್ 10 ಸೆಕೆಂಡುಗಳಲ್ಲಿ ಹುಡುಕಿ ಹೇಳಿ
ಆಪ್ಟಿಕಲ್‌ ಇಲ್ಯೂಷನ್‌
Image Credit source: Reddit

Updated on: Aug 18, 2025 | 12:23 PM

ಕೆಲವರು ಬಿಡುವುದು ಸಿಕ್ಕಾಗಲೆಲ್ಲಾ ಮೆದುಳಿಗೆ ಕೆಲಸನೀಡುವ ಆಟಗಳಲ್ಲಿ ತೊಡಗಿಕೊಳ್ಳುತ್ತಾರೆ. ಈಗೀಗ ಈ ಆಪ್ಟಿಕಲ್‌ ಇಲ್ಯೂಷನ್‌ ನಂತಹ (Optical Illusion) ಒಗಟಿನ ಚಿತ್ರಗಳು ವೈರಲ್ ಆಗುತ್ತಿದ್ದು, ಇದು ಮೋಜಿನ ಆಟ ಅನ್ನೋದು ನಿಜ. ಆದರೆ ಈ ಚಿತ್ರಗಳು ನಿಮ್ಮ ವ್ಯಕ್ತಿತ್ವ ಏನು ಎನ್ನುವುದನ್ನು ಬಹಿರಂಗ ಪಡಿಸುತ್ತವೆ. ಎಷ್ಟೋ ಸಲ ನಿಮ್ಮ ಕಣ್ಣನ್ನು ಮೋಸಗೊಳಿಸಿ, ಭ್ರಮೆಯಲ್ಲಿ ಸಿಲುಕಿಸಲು ಬಹುದು. ಇದೀಗ ಅಂತಹದ್ದೇ ಟ್ರಿಕ್ಕಿಯಾಗಿರುವ ಒಗಟಿನ ಚಿತ್ರವಾಗಿದ್ದು, ಹಚ್ಚಹಸಿರಿನಿಂದ ಕೂಡಿದ ಮರಗಳಿದ್ದು, ಮರದ ಕೊಂಬೆಯ ಮೇಲೆ ಗಿಳಿಯೊಂದು (parrot) ಕುಳಿತಿದೆ. ನೀವು ಹತ್ತು ಸೆಕೆಂಡುಗಳಲ್ಲಿ ಆ ಗಿಣಿ ಎಲ್ಲಿದೆ ಎಂದು ಪತ್ತೆಹಚ್ಚಬೇಕು. ಈ ಒಗಟನ್ನು ಬಿಡಿಸಲು ನೀವು ಸಿದ್ಧವಿದ್ರೆ ನಿಮ್ಮ ಸಮಯ ಇದೀಗ ಆರಂಭವಾಗುತ್ತದೆ. ಈ ಕಠಿಣ ಸವಾಲಿನ ಒಗಟನ್ನು ಬಿಡಿಸಿ ನೋಡೋಣ.

ಈ ಚಿತ್ರದಲ್ಲಿ ಏನಿದೆ ಎಂದು ಒಮ್ಮೆ ನೋಡಿ

ಇದನ್ನೂ ಓದಿ
ಈ ಚಿತ್ರದಲ್ಲಿ ಅಡಗಿರುವ ಆಂಗ್ರಿ ಫೇಸ್ ಇಮೋಜಿ ಕಂಡುಹಿಡಿಯಬಲ್ಲಿರಾ?
ಈ ಚಿತ್ರದಲ್ಲಿ ಅಡಗಿರುವ ನಾಲ್ಕನೇ ಬೆಕ್ಕನ್ನು ಹುಡುಕಿ ನೋಡೋಣ
ಈ ಎರಡು ಚಿತ್ರಗಳ ನಡುವೆ ಏಳು ವ್ಯತ್ಯಾಸಗಳಿವೆ, ಏನೆಂದು ಹೇಳಿ ನೋಡೋಣ
ಈ ಚಿತ್ರದಲ್ಲಿ ಅಡಗಿರುವ ಮಿಡತೆಯನ್ನು 10 ಸೆಕೆಂಡಿನಲ್ಲಿ ಕಂಡು ಹಿಡಿಯಬಲ್ಲಿರಾ

ಈ ಒಗಟಿನ ಆಟಗಳು ಮೋಜನ್ನು ನೀಡುವುದು ಮಾತ್ರವಲ್ಲದೆ ನಮ್ಮಲ್ಲಿ ಯೋಚನಾ ಶಕ್ತಿ ಮತ್ತು ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಈ ಚಿತ್ರವು ನಿಮ್ಮ ಬುದ್ಧಿ ಶಕ್ತಿ ಮತ್ತು ಕಣ್ಣಿನ ತೀಕ್ಷಣೆ ಎಷ್ಟಿದೆ ಎಂಬುದನ್ನು ತಿಳಿಯಬಹುದಾಗಿದೆ. ಸ್ಪೈಡರ್‌ಬೀಟಲ್‌ಬೀಸ್ ಎಂಬ ಬಳಕೆದಾರರು ರೆಡ್ಡಿಟ್‌ನಲ್ಲಿ ಹಂಚಿಕೊಳ್ಳಲಾದ ಈ ಚಿತ್ರದಲ್ಲಿ ಹಚ್ಚ ಹಸಿರಿನ ಗಿಡಮರಗಳಿದ್ದು, ಇಲ್ಲಿರುವ ಮರದ ಕೊಂಬೆ ಮೇಲೆ ಗಿಣಿಯೊಂದು ಅಡಗಿದೆ. ಗಿಳಿ ಮೈ ಬಣ್ಣವು ಹಾಗೂ ಹಚ್ಚಹಸಿರಿನ ಗಿಡ ಮರಗಳ ಹಿನ್ನಲೆಯೊಂದಿಗೆ ಬೆರೆಯುವುದರಿಂದ ಈ ಮುದ್ದಾದ ಗಿಳಿಯನ್ನು ಪತ್ತೆ ಹಚ್ಚುವುದು ಕಷ್ಟವಾಗಬಹುದು. ಆದರೆ ಹತ್ತು ಸೆಕೆಂಡುಗಳ ಒಳಗೆ ಈ ಗಿಳಿಯು ಎಲ್ಲಿದೆ ಎಂದು ಹೇಳಬೇಕು ಎನ್ನುವ ಸವಾಲು ಇದಾಗಿದ್ದು, ಏಕಾಗ್ರತೆಯಿಂದ ಗಮನ ಹರಿಸಿ ಈ ಒಗಟನ್ನು ಬಿಡಿಸಲು ಪ್ರಯತ್ನಿಸಿ.

ಇದನ್ನೂ ಓದಿ: Optical Illusion: ಈ ಚಿತ್ರದಲ್ಲಿ ಅಡಗಿರುವ ಆಂಗ್ರಿ ಫೇಸ್ ಇಮೋಜಿ ಕಂಡು ಹಿಡಿದ್ರೆ ನೀವು ಬುದ್ಧಿವಂತರು ಎಂದರ್ಥ

ಉತ್ತರ ಇಲ್ಲಿದೆ

ನೀವೇನಾದರೂ 10 ಸೆಕೆಂಡುಗಳಲ್ಲಿ ಚಿತ್ರದಲ್ಲಿ ಅಡಗಿರುವ ಗಿಳಿಯನ್ನು ಪತ್ತೆ ಹಚ್ಚಿದ್ರೆ ನೀವು ತೀಕ್ಷ್ಣ ವೀಕ್ಷಣಾ ಕೌಶಲ್ಯವನ್ನು ಹೊಂದಿದ್ದೀರಾ ಎಂದು ಅರ್ಥ. ಆದರೆ ಎಷ್ಟೇ ಪ್ರಯತ್ನಿಸಿದರೂ ಹಚ್ಚಹಸಿರಾದ ಮರ ಗಿಡಗಳ ನಡುವೆ ಕೊಂಬೆಯ ಮೇಲೆ ಅಡಗಿರುವ ಗಿಳಿಯನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಎಂದಾದ್ರೆ ಚಿಂತಿಸಬೇಕು. ಸಣ್ಣ ಸುಳಿವನ್ನು ನಾವು ನಿಮಗೆ ನೀಡುತ್ತೇವೆ. ಈ ಚಿತ್ರದ ಮಧ್ಯದಲ್ಲಿ ಹಸಿರು ಗಿಣಿಯನ್ನು ಲಂಬವಾಗಿ, ಬಲದಿಂದ ಸುಮಾರು 1/4 ಇಂಚು ದೂರದಲ್ಲಿ ಪತ್ತೆ ಮಾಡಬಹುದಾಗಿದೆ. ಈ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದರೆ ಉತ್ತರ ನಿಮ್ಮ ಕಣ್ಣಿಗೆ ಬೀಳುತ್ತದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:19 pm, Mon, 18 August 25