ಆಪ್ಟಿಕಲ್ ಇಲ್ಯೂಷನ್ ಫೋಟೋಗಳು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಇದೀಗ ವೈರಲ್ ಆಗಿರುವ ಫೋಟೋದಲ್ಲಿ ನೀವು ಅಡಗಿರುವ ಹಾವನ್ನು ಪತ್ತೆ ಹಚ್ಚಬೇಕಿದೆ. ಆದರೆ ಕೇವಲ 30 ಸೆಕೆಂಡುಗಳಲ್ಲಿ ಹಾವು ಎಲ್ಲಿದೆ ಎಂಬುದನ್ನು ನೀವು ಕಂಡುಹಿಡಿಯಬೇಕು. ಕಸ ಕಡ್ಡಿಗಳ ಬಣ್ಣ ಹಾಗೂ ಹಾವಿನ ಬಣ್ಣ ಒಂದೇ ಆಗಿರುವುದರಿಂದ ಹಾವು ಎಲ್ಲಿದೆ ಎಂದು ಕಂಡುಹಿಡಿಯುವುದು ಅಷ್ಟು ಸುಲಭವಲ್ಲ. ಸವಾಲು ಸ್ವೀಕರಿಸಲು ನೀವು ಸಿದ್ಧರಿದ್ದೀರಾ? ಹಾಗಿದ್ರೆ ಕೇವಲ ಕೆಲವೇ ಸೆಕೆಂಡುಗಳಲ್ಲಿ ಅಡಗಿರುವ ಹಾವನ್ನು ಪತ್ತೆ ಹಚ್ಚಿ.
ಮೇಲಿನ ಫೋಟೋದಲ್ಲಿ ಸಾಕಷ್ಟು ಒಣ ಕಸ ಕಡ್ಡಿಗಳನ್ನು ಕಾಣಬಹುದು. ಆದರೆ ಇವುಗಳ ಮಧ್ಯೆ ಎಲ್ಲಿಯೋ ಒಂದು ಬದಿಯಲ್ಲಿ ಹಾವೊಂದು ಅಡಗಿದೆ. ಹಾವು ಎಲ್ಲಿದೆ ಎಂದು ಪತ್ತೆ ಹಚ್ಚುವುದೇ ನಿಮ್ಮ ಕೆಲಸ. ನಿಮ್ಮಿಂದ ಹಾವು ಎಲ್ಲಿದೆ ಎಂದು ಪತ್ತೆ ಹಚ್ಚಲು ಸಾಧ್ಯವೇ ಎಂದು ಪ್ರಯತ್ನಿಸಿ. ಮೇಲಿನ ಚಿತ್ರವನ್ನು ಕೆಲ ಹೊತ್ತಿನ ವರೆಗೆ ಸರಿಯಾಗಿ ಗಮನಿಸಿದರೆ ಮಾತ್ರ ಹಾವು ಇರುವ ಜಾಗವನ್ನು ಪತ್ತೆ ಹಚ್ಚಲು ಸಾಧ್ಯ.
ಇದನ್ನೂ ಓದಿ: ಕಲ್ಲು ಗಾಳಿಯಲ್ಲಿ ತೇಲುತ್ತಿರುವಂತೆ ಕಾಣುತ್ತಿದೆಯೇ? ಆದರೆ ಹಾಗಿಲ್ಲ ಸರಿಯಾಗಿ ಗಮನಿಸಿ
ನಿಮಗೆ ಇನ್ನೂ ಹಾವನ್ನು ಕಂಡುಹಿಡಿಯಲು ಕಷ್ಟವಾಗುತ್ತಿದೆಯೇ? ಎಷ್ಟೇ ಪ್ರಯತ್ನಿಸಿದರೂ ಕಾಣಿಸುತ್ತಿಲ್ಲವೇ? ಹಾಗಿದ್ರೆ ಈ ಕೆಳಗಿನ ಪೋಟೋ ನೋಡಿ. ಫೋಟೋದಲ್ಲಿ ಹಾವು ಎಲ್ಲಿದೆ ಎಂದು ಗುರುತಿಸಲಾಗಿದೆ.
ಅಂದಹಾಗೆ, ಇಂದಿನ ಸವಾಲಿನ ಆಟ ನಿಮಗೆ ಹೇಗಾನಿಸಿತು, ನಿಮಗೆ ಇಷ್ಟವಾಯಿತೆ? ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ. ಕಣ್ಣುಗಳನ್ನು ಮೂರ್ಖರನ್ನಾಗಿಸುವ ಈ ಆಪ್ಟಿಕಲ್ ಭ್ರಮೆ ಫೋಟೋವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ