Optical Illusion: 5 ಸೆಕೆಂಡುಗಳಲ್ಲಿ ಬೇಟೆಗಾರನಿಗಿಂತ ಮೊದಲು ನೀವೇ ಮೊಲವನ್ನು ಕಂಡುಹಿಡಿಯಬಹುದೆ?

| Updated By: Digi Tech Desk

Updated on: Sep 26, 2022 | 1:23 PM

IQ Test : ಕೆಲಸದ ಒತ್ತಡದಲ್ಲಿ ತಲೆಭಾರವಾದಂತೆ ಆಗುತ್ತಿದೆಯೆ? ಮಕ್ಕಳು ಹೋಮ್​ವರ್ಕ್ ಮಾಡಿ ಬೇಸತ್ತಿದ್ದಾರೆಯೇ? ಈ ಚಿತ್ರ ಗಮನಿಸಿ. ಇಂಥ ಬ್ರೇನ್​ ಟೀಸರ್​ಗಳು ಮೆದುಳನ್ನು ಚುರುಕುಗೊಳಿಸಲು ಸಹಾಯ ಮಾಡುತ್ತವೆ.

Optical Illusion: 5 ಸೆಕೆಂಡುಗಳಲ್ಲಿ ಬೇಟೆಗಾರನಿಗಿಂತ ಮೊದಲು ನೀವೇ ಮೊಲವನ್ನು ಕಂಡುಹಿಡಿಯಬಹುದೆ?
ಎಲ್ಲಿದೆ ಮೊಲ ಇಲ್ಲಿ?
Follow us on

Optical Illusion for IQ Test: ಈ ಚಿತ್ರದಲ್ಲಿರುವ ಕಾಡಿನೊಳಗೆ ಮೊಲ ಅಡಗಿದೆ. ಬೇಟೆಗಾರನಿಗಿಂತ (Hunter) ಮೊದಲು ನೀವೇ ಯಾಕೆ ಆ ಮೊಲವನ್ನು ಕಂಡುಹಿಡಿಯಬಾರದು? ಈ ಆಪ್ಟಿಕಲ್ ಇಲ್ಯೂಷನ್ (Optical Illusion) ಮೂಲಕ ನಿಮ್ಮ ಬುದ್ಧಿಶಕ್ತಿ ಎಷ್ಟಿದೆ ಎಂದು ಕಂಡುಕೊಳ್ಳಬಹುದು. ಆರಂಭದಲ್ಲಿ ನಿಮ್ಮ ಮೆದುಳು (Brain) ಮತ್ತು ಕಣ್ಣುಗಳ (Eye) ಮಧ್ಯೆ ಈ ಚಿತ್ರ ಸವಾಲನ್ನು ಒಡ್ಡಿ ಭ್ರಮೆಗೆ ಬೀಳಿಸಬಹುದು. ಹೀಗೆ ಭ್ರಮೆಗೆ ಬೀಳಿಸುವಂತೆಯೇ ಇದನ್ನು ಚಿತ್ರಿಸಲಾಗಿದೆ. ಹಾಗಿದ್ದರೆ ನಿಮ್ಮ ಸಮಯ ಕೇವಲ ಐದೇ ಸೆಕೆಂಡು. ಮೊಲವನ್ನು ಕಂಡುಹಿಡಿಯಬಲ್ಲಿರೆ?

ಇಂಥ ಚಿತ್ರಗಳು ಮೆದುಳಿಗೆ ಸವಾಲನ್ನು ಎಸೆಯುವಂಥವು. ಒಂದು ಚಿತ್ರವನ್ನು ನೋಡಿದಾಗ ನಿಮ್ಮ ಮೆದುಳು ಏನೇನನ್ನು, ಯಾವೆಲ್ಲ ಕೋನಗಳಲ್ಲಿ ಗ್ರಹಿಸುತ್ತದೆ, ಭಿನ್ನವಾಗಿ ನಿರೂಪಿಸುತ್ತದೆ ಎನ್ನುವುದನ್ನು ಕಂಡುಕೊಳ್ಳಲು ಇರುವ ಮನೋವಿಶ್ಲೇಷಣೆಯ ಒಂದು ವಿಧಾನವಿದು. ಇದು ಪೂರ್ತಿ ನಿಮ್ಮ ಬುದ್ಧಿಶಕ್ತಿಗೆ ಸಂಬಂಧಿಸಿದ್ದು.

ಐದು ಸೆಕೆಂಡಿನೊಳಗೆ ಮೊಲವನ್ನು ಗುರುತಿಸಲು ಸಾಧ್ಯವಾಗಲಿಲ್ಲವೆ? ಹಾಗಿದ್ದರೆ, ಬೇಟೆಗಾರನ ಹಿಂದೆ ದಟ್ಟವಾದ ಪೊದೆ ಗಮನಿಸಿ. ಬಹುಶಃ ಈಗ ಮೊಲ ಕಂಡುಹಿಡಿಯಲು ನಿಮಗೆ ಸಾಧ್ಯವಾಗಬಹುದು.

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಮೇಲಿನ ಚಿತ್ರವು ಮಕ್ಕಳು ಮತ್ತು ದೊಡ್ಡವರಿಗಾಗಿ ರಚಿಸಲ್ಪಟ್ಟಿದೆ. ಇದೊಂದು ಬ್ರೇನ್​ ಟೀಸರ್. ಬೇಟೆಗಾರ ತನ್ನ ನಾಯಿಯೊಂದಿಗೆ ಬಂದೂಕಿನೊಂದಿಗೆ ಕಾಡು ಹೊಕ್ಕಿದ್ದಾನೆ. ಮೊಲ ಇಲ್ಲೇ ಎಲ್ಲೋ ಅಡಗಿದೆ. ಇನ್ನೂ 5 ಸೆಕೆಂಡ್​ ಸಮಯ ತೆಗೆದುಕೊಂಡು ಮೊಲವನ್ನು ಕಂಡುಹಿಡಿಯಿರಿ.

ಕೊನೆಯದಾಗಿ ಒಂದು ಸುಳಿವು. ನಾಯಿಯ ಬಾಲದ ಬಳಿ ಗಮನಿಸಿ. ಈಗ ಪೊದೆಯಲ್ಲಿ ಅಡಗಿ ಕುಳಿತ ಮೊಲ ಕಂಡೇ ಕಾಣುವುದು!

ದಿನಕ್ಕೆ ಒಂದಾದರೂ ಇಂಥ ಚಿತ್ರವನ್ನು ನೀವೂ ನೋಡಿ ನಿಮ್ಮ ಮಕ್ಕಳಿಗೂ ತೋರಿಸಿ. ಕೆಲಸದ ಒತ್ತಡದಿಂದ ಮೆದುಳು ಸುಸ್ತಾದಾಗ ಇಂಥ ಚಿತ್ರಗಳು ಟಾನಿಕ್​ನಂತೆ. ಮಕ್ಕಳು ಹಠ ಹಿಡಿದಾಗ, ಹೋಮ್​ವರ್ಕ್​ನಿಂದ ಬೇಸತ್ತಾಗ ಇಂಥ ಚಿತ್ರಗಳನ್ನು ತೋರಿಸಿ, ಸವಾಲನ್ನು ಬಗೆಹರಿಸಲು ಪ್ರೋತ್ಸಾಹಿಸಬಹುದು.

ವೈರಲ್​ ವಿಡಿಯೋ ನೋಡಲು ಕ್ಲಿಕ್ ಮಾಡಿ

 

Published On - 12:25 pm, Mon, 26 September 22