
ಒಗಟು ಬಿಡಿಸುವುದರಲ್ಲಿರುವ ಮಜಾನೇ ಬೇರೆ. ಮೆದುಳಿಗೆ ಕೆಲಸ ನೀಡುವಂತಹ ಆಪ್ಟಿಕಲ್ ಇಲ್ಯೂಷನ್ (Optical Illusion) ಹಾಗೂ ಬ್ರೈನ್ ಟೀಸರ್ ಸೇರಿದಂತೆ ಟ್ರಿಕ್ಕಿ ಚಿತ್ರಗಳನ್ನು ಬಿಡಿಸುವಲ್ಲಿ ಅನೇಕರು ಸೋಲುತ್ತಾರೆ. ಆದರೆ ಇದಕ್ಕೆ ಉತ್ತರ ಕಂಡುಕೊಂಡ ಬಳಿಕ ಆಗುವ ಖುಷಿಯೇ ಬೇರೆ. ನೀವು ಇಂತಹ ಹಲವಾರು ಒಗಟಿನ ಚಟುವಟಿಕೆಗಳನ್ನು ಇಷ್ಟ ಪಡುತ್ತೀರಿ ಅಲ್ವಾ. ಇದೀಗ ಇಲ್ಲೊಂದು ನಿಮಗೆ ಸವಾಲು ಇದೆ. ಈ ಒಗಟಿನ ಚಿತ್ರದಲ್ಲಿ ಪೇರಳೆ ಹಣ್ಣನ್ನು(pear fruit) ಜಾಣತನದಿಂದ ಮರೆ ಮಾಡಲಾಗಿದೆ. ಆದರೆ ಈ ಹಣ್ಣನ್ನು ಹದಿನೈದು ಸೆಕೆಂಡುಗಳಲ್ಲಿ ಪತ್ತೆ ಹಚ್ಚಲು ಸಾಧ್ಯವೇ.
ಆಪ್ಟಿಕಲ್ ಇಲ್ಯೂಷನ್‌ನಂತಹ ಒಗಟಿನ ಚಟುವಟಿಕೆಗಳು ನಮ್ಮನ್ನು ತಲೆ ಕೆಡಿಸಿಕೊಳ್ಳುವಂತೆ ಮಾಡುತ್ತವೆ. ಮೋಸಗೊಳಿಸುವ ಚಿತ್ರಗಳಲ್ಲಿ ಅಡಗಿರುವ ವಸ್ತುಗಳು ನಮ್ಮ ಕಣ್ಣ ಮುಂದೆಯೇ ಇರುತ್ತವೆ, ಆದರೆ ನಾವು ಅವುಗಳನ್ನು ನೋಡಲು ಸಾಧ್ಯವಿಲ್ಲ. ಇಂತಹ ಟ್ರಿಕ್ಕಿಯಾಗಿರುವಂತಹ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಮೃಗಾಲಯದಲ್ಲಿ ಜಿರಾಫೆಗಳು ಮಲಗಿದ್ದು, ಪ್ರವಾಸಿಗರು ಈ ಪ್ರಾಣಿಗಳನ್ನು ನೋಡುತ್ತಾ ನಿಂತಿದ್ದಾರೆ. ಅಲ್ಲೇ ಇರುವ ಮರದ ಮೇಲೆ ಗಿಳಿಯೊಂದು ಕುಳಿತಿದೆ. ಆದರೆ ಈ ಚಿತ್ರದಲ್ಲಿರುವ ಪೇರಳೆ ಹಣ್ಣನ್ನು ಗುರುತಿಸುವ ಸವಾಲನ್ನು ನೀಡಲಾಗಿದೆ. ಈ ಒಗಟು ಬಿಡಿಸಲು ಸಮಯದ ಮಿತಿಯಿದ್ದು, ಹದಿನೈದು ಸೆಕೆಂಡುಗಳ ಒಳಗೆ ಈ ಒಗಟು ಬಿಡಿಸಿ.
ಈ ಚಿತ್ರದಲ್ಲಿದಲ್ಲಿ ಅಡಗಿರುವ ಪೇರಳೆ ಹಣ್ಣನ್ನು ಕಂಡು ಹಿಡಿಯಲು ತೀಕ್ಷ್ಣ ದೃಷ್ಟಿ ಮತ್ತು ಉತ್ತಮ ವೀಕ್ಷಣಾ ಕೌಶಲ್ಯ ಹೊಂದಿರಬೇಕು. ಇದು ಈ ಮೆದುಳಿನ ಕಸರತ್ತು ನೀಡುವ ಕಾರಣ ಜಾಣತನದಿಂದ ಮರೆಮಾಡಲಾಗಿರುವ ಪೇರಳೆ ಹಣ್ಣನ್ನು ಹುಡುಕಲು ಸಿದ್ಧರಾಗಿ. ನೀವು ಸವಾಲು ಈ ಸ್ವೀಕರಿಸಲು ರೆಡಿ ಇದ್ದರೆ ನಿಮ್ಮ ಸಮಯ ಇದೀಗ ಆರಂಭವಾಗುತ್ತದೆ.
ಇದನ್ನೂ ಓದಿ:ಈ ಚಿತ್ರದಲ್ಲಿ ಮರೆಮಾಡಿರುವ ಮನೆಯ ಮುದ್ದಿನ ಶ್ವಾನವನ್ನು ಹುಡುಕಿ
ಎಷ್ಟೇ ಕಣ್ಣು ಬಿಟ್ಟು ನೋಡಿದರೂ ಪೇರಳೆ ಹಣ್ಣು ನಿಮ್ಮ ಕಣ್ಣಿಗೆ ಕಾಣಿಸುತ್ತಿಲ್ಲವೇ. ನಾವು ನೀಡುವ ಸಣ್ಣ ಸುಳಿವು ಕೂಡ ದೃಷ್ಟಿ ಸಾಮರ್ಥ್ಯ ಎಷ್ಟಿದೆ ಎಂದು ಪರೀಕ್ಷಿಸಲು ಅಡ್ಡಿಯಾಗುತ್ತದೆ. ಹೀಗಾಗಿ ಸಾಧ್ಯವಾದಷ್ಟು ಈ ಹಣ್ಣನ್ನು ಹುಡುಕಲು ರೆಡಿಯಾಗಿ. ನಿಮ್ಮ ಸಮಯ ಮೀರಿದ್ದರೆ ಚಿಂತಿಸ ಬೇಡಿ. ಈ ಕೆಳಗಿನ ಚಿತ್ರದಲ್ಲಿ ಪೇರಳೆ ಹಣ್ಣು ಎಲ್ಲಿದೆ ಎಂದು ಹಳದಿ ಬಣ್ಣದಲ್ಲಿ ಗುರುತಿಸಿದ್ದೇವೆ. ಈಗಲಾದರೂ ಪೇರಳೆ ಹಣ್ಣನ್ನು ನೋಡಿದ್ದೀರಿ ಎಂದು ಭಾವಿಸುತ್ತೇವೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:55 pm, Tue, 11 November 25