
ಆಪ್ಟಿಕಲ್ ಇಲ್ಯೂಷನ್ (Optical Illusion) ಬ್ರೈನ್ ಟೀಸರ್‌ನಂತಹ ಒಗಟಿನ ಚಿತ್ರಗಳು ನೋಡಲು ಸುಲಭವಾಗಿ ಕಂಡರೂ ಬಿಡಿಸುವುದು ತುಂಬಾನೇ ಕಷ್ಟ. ಇಂತಹ ಒಗಟಿನ ಆಟಗಳು ನಿಮ್ಮ ದೃಷ್ಟಿ ಹಾಗೂ ಬುದ್ಧಿಗೆ ಸವಾಲು ಎಸೆಯುತ್ತದೆ. ಈ ಚಿತ್ರದಲ್ಲಿ ಮೀನು ಎಲ್ಲಿದೆ ಎಂದು ಹೇಳುವ ಸವಾಲು ನಿಮಗೆ ನೀಡಲಾಗಿದೆ. ಹತ್ತು ಜನರಲ್ಲಿ ಒಬ್ಬರಿಗೆ ಮಾತ್ರ ಈ ಒಗಟನ್ನು ಬಿಡಿಸಲು ಸಾಧ್ಯವಿದ್ದು ಈ ಒಗಟು ಬಿಡಿಸಲು ನೀವು ರೆಡಿನಾ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಚಿತ್ರವನ್ನು ನೀವು ಮೊದಲು ನೋಡಿದಾಗ ನಿಮಗೆ ಹಳ್ಳಿಯ ಚಿತ್ರಣವು ಕಾಣಿಸುತ್ತದೆ. ಬೇಲಿಯ ಬಳಿ ವ್ಯಕ್ತಿಯೊಬ್ಬ ಕೋಲು ಹಿಡಿದು ನಿಂತಿದ್ದು, ಅವನ ಜತೆ ನಾಯಿಯೂ ಇದೆ. ಮರಗಳು, ಮರದ ಸೇತುವೆ ಹಾಗೂ ಶಾಂತವಾಗಿ ಹರಿಯುತ್ತಿರುವ ನದಿಯನ್ನು ನೀವು ಕಾಣಬಹುದು. ದೂರದಲ್ಲಿ ಹಬ್ಬಿಕೊಂಡಿರುವ ಬೆಟ್ಟಗಳನ್ನು ನೋಡಬಹುದು. ಹಳ್ಳಿಗಾಡಿನ ಐತಿಹಾಸಿಕ ನೋಟವನ್ನು ಬೀರುವ ಈ ಚಿತ್ರದಲ್ಲಿ ಮೀನನ್ನು ಜಾಣತನದಿಂದ ಮರೆ ಮಾಡಲಾಗಿದೆ. ಏಳು ಸೆಕೆಂಡುಗಳಲ್ಲಿ ಮೀನನ್ನು ಗುರುತಿಸಿ ನಿಮ್ಮ ವೀಕ್ಷಣಾ ಸಾಮರ್ಥ್ಯ ಅತ್ಯುತ್ತಮವಾಗಿದೆ ಎಂದು ಖಚಿತ ಪಡಿಸಿಕೊಳ್ಳಿ.
ಇದನ್ನೂ ಓದಿ: ಈ ಚಿತ್ರದಲ್ಲಿ ಅಡಗಿರುವ ಕಳ್ಳ ಬೆಕ್ಕನ್ನು ಹುಡುಕಬಲ್ಲಿರಾ?
ಈ ಚಿತ್ರದತ್ತ ಕಣ್ಣುಹಾಯಿಸಿದರೂ ಮೀನು ನಿಮ್ಮ ಕಣ್ಣಿಗೆ ಮೀನು ಬಿದ್ದಿಲ್ಲವೇ. ವಿಂಟೇಜ್-ಸ್ಟೈಲ್‌ನ ಸವಾಲಿನ ಚಿತ್ರದಲ್ಲಿ ಮೀನು ಎಲ್ಲಿ ಅಡಗಿದೆ ಎಂದು ತಿಳಿಯಲು ನೀವು ಉತ್ಸುಕರಾಗಿದ್ದೀರಾ. ಈ ಚಿತ್ರವನ್ನು ಎಚ್ಚರಿಕೆಯಿಂದ ನೋಡಿ. ಎಡಭಾಗದಲ್ಲಿರುವ ಮರದ ಮಧ್ಯದಲ್ಲಿ ಮೀನನ್ನು ನೋಡಬಹುದು. ಈ ಚಿತ್ರದಲ್ಲಿ ಮೀನನ್ನು ಕೆಂಪು ಬಣ್ಣದಿಂದ ಗುರುತಿಸಿದ್ದೇವೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ