Optical Illusion: ಜಸ್ಟ್ 10 ಸೆಕೆಂಡುಗಳಲ್ಲಿ ಈ ಸುಂದರವಾದ ಕಾಡಿನಲ್ಲಿ ಅಡಗಿರುವ ಅಳಿಲನ್ನು ಹುಡುಕಿ

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ಸೇರಿದಂತೆ ಒಗಟಿನ ಆಗಾಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿರುತ್ತವೆ. ಅವುಗಳಲ್ಲಿ ಕೆಲವು ಸವಾಲುಗಳು ತುಂಬಾ ಸುಲಭವಾಗಿದ್ದರೆ, ಇನ್ನೂ ಕೆಲವು ಸವಾಲುಗಳು ತುಂಬಾನೇ ಕಠಿಣವಾಗಿರುತ್ತದೆ. ಇದೀಗ ಅಂತಹದ್ದೇ ಕಠಿಣ ಸವಾಲಿನ ಫೋಟೋವೊಂದು ವೈರಲ್‌ ಆಗಿದ್ದು, ಸುಂದರವಾದ ಕಾಡಿನ ಚಿತ್ರವಿದೆ. ಕಾಡಿನಲ್ಲಿ ಅಳಿಲು ಕೂಡ ಇದೆ, ಅದನ್ನು ನೀವು ಗುರುತಿಸಲೇಬೇಕು. ಅಳಿಲನ್ನು ಗುರುತಿಸಲು ನಿಮಗೆ ಕೇವಲ 10 ಸೆಕೆಂಡುಗಳಿವೆ.

Optical Illusion: ಜಸ್ಟ್ 10 ಸೆಕೆಂಡುಗಳಲ್ಲಿ ಈ ಸುಂದರವಾದ ಕಾಡಿನಲ್ಲಿ ಅಡಗಿರುವ ಅಳಿಲನ್ನು ಹುಡುಕಿ
ಆಪ್ಟಿಕಲ್‌ ಇಲ್ಯೂಷನ್‌
Image Credit source: Social Media

Updated on: Oct 17, 2025 | 10:43 AM

ಮೆದುಳಿಗೆ ಕೆಲಸ ನೀಡುವಂತಹ ಆಪ್ಟಿಕಲ್‌ ಇಲ್ಯೂಷನ್‌ (Optical Illusion) ಚಿತ್ರಗಳು ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ್ಗೆ ಕಾಣಸಿಗುತ್ತವೆ. ಸ್ವಲ್ಪ ಟ್ರಿಕ್ಕಿ ಆಗಿದ್ದರೂ ಈ ಸವಾಲುಗಳಿಗೆ ಉತ್ತರ ಕಂಡುಕೊಂಡ ಮೇಲೆ ಆಗುವ ಖುಷಿಯೇ ಬೇರೆ. ಇದು ಟೈಮ್‌ ಪಾಸ್‌ ಆಟ ಮಾತ್ರವಲ್ಲದೆ ನಮ್ಮ ದೃಷ್ಟಿ ಮತ್ತು ಮೆದುಳಿನ ತೀಷ್ಣತೆಯನ್ನು ಕೂಡಾ ಹೆಚ್ಚಿಸುವಂತಹ ಆಟವಾಗಿದೆ. ಇಂತಹ ಹಲವಾರು ಒಗಟಿನ ಚಟುವಟಿಕೆಗಳನ್ನು ಇಷ್ಟ ಪಡುತ್ತೀರಿ ಅಲ್ವಾ. ಇದೀಗ ಇಲ್ಲೊಂದು ಇಂತಹದ್ದೇ ಕಠಿಣ ಸವಾಲಿನ ಫೋಟೋವೊಂದು ವೈರಲ್‌ ಆಗಿದ್ದು, ಸುಂದರವಾದ ಕಾಡಿನಲ್ಲಿ ಅಳಿಲೊಂದು ಅಡಗಿದ್ದು, ಆ ಜೀವಿಯನ್ನು ಕೇವಲ 10 ಸೆಕೆಂಡುಗಳಲ್ಲಿ ನೀವು ಹುಡುಕಬಲ್ಲಿರಾ?

ಈ ಚಿತ್ರದಲ್ಲಿ ಏನಿದೆ ಎಂದು ನೋಡಿ

ಆಪ್ಟಿಕಲ್‌ ಇಲ್ಯೂಷನ್‌ನಂತಹ ಒಗಟಿನ ಚಟುವಟಿಕೆಗಳು ನಮ್ಮನ್ನು ತಲೆ ಕೆಡಿಸಿಕೊಳ್ಳುವಂತೆ ಮಾಡುತ್ತವೆ. ಇಂತಹ ಟ್ರಿಕ್ಕಿಯಾಗಿರುವಂತಹ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ಕಿತ್ತಳೆ ಬಣ್ಣಕ್ಕೆ ತಿರುಗಿರುವ ಸುಂದರವಾದ ಕಾಡಿನ ನೋಟವನ್ನು ನೀವು ನೋಡಬಹುದು. ಆದಾಗ್ಯೂ, ನೀವು ಗಮನಹರಿಸಬೇಕಾಗಿರುವುದು ಕಿತ್ತಳೆ ಬಣ್ಣದ ಕಾಡನ್ನು ಅಲ್ಲವೇ ಅಲ್ಲ. ನೀವು ಗಮನಹರಿಸಬೇಕಾದದ್ದು ಅಳಿಲು! ಹೌದು, ಕಾಡಿನಲ್ಲಿ ಅಳಿಲೊಂದು ಅಡಗಿದೆ. ಈ ಒಗಟು ಬಿಡಿಸಲು ಸಮಯ ಮಿತಿ ಇರುವ ಕಾರಣ ಈ ಚಿತ್ರದತ್ತ ಗಮನ ಹರಿಸಿ

ಈ ಸವಾಲನ್ನು ಸ್ವೀಕರಿಸಲು ಸಿದ್ಧರಿದ್ದೀರಾ?

ಈ ಚಿತ್ರದಲ್ಲಿದಲ್ಲಿ ಅಡಗಿರುವ ಅಳಿಲನ್ನು ಕಂಡು ಹಿಡಿಯಲು ತೀಕ್ಷ್ಣ ದೃಷ್ಟಿ ಮತ್ತು ಉತ್ತಮ ವೀಕ್ಷಣಾ ಕೌಶಲ್ಯ ಹೊಂದಿರುವುದು ಬಹಳ ಮುಖ್ಯ. ಈ ಗುಣಗಳ ಕೊರತೆಯಿರುವ ಉಳಿದ ಜನರು 3 ಸೆಕೆಂಡುಗಳಿಗಿಂತ ಕಡಿಮೆ ಅವಧಿಯಲ್ಲಿ ಕೆಲಸವನ್ನು ಪೂರ್ಣಗೊಳಿಸಲು ವಿಫಲರಾಗಬಹುದು. ಇದು  ಮೆದುಳಿಗೆ ಕಸರತ್ತು ನೀಡುವ ಕಾರಣ ಆದಷ್ಟು ಬೇಗ ಸವಾಲು ಸ್ವೀಕರಿಸಲು ಸಿದ್ಧರಾಗಿ.

ಇದನ್ನೂ ಓದಿ
ಈ ಚಿತ್ರದಲ್ಲಿ ಅಡಗಿರುವ ಪಾಂಡಗಳನ್ನು ಗುರುತಿಸಿ
ಈ ಚಿತ್ರದಲ್ಲಿ ಅಡಗಿರುವ ಬೆಕ್ಕನ್ನು ಕಂಡು ಹಿಡಿಯಿರಿ
ಈ ಚಿತ್ರದಲ್ಲಿ ಅಡಗಿರುವ ಜಿಂಕೆಯನ್ನು ಕಂಡುಹಿಡಿಯಿರಿ
ಬುದ್ಧಿವಂತರಿಗೊಂದು ಸವಾಲ್;‌ ಈ ಚಿತ್ರದಲ್ಲಿ ಅಡಗಿರುವ ಮೀನನ್ನು ಗುರುತಿಸಿ

ಇದನ್ನೂ ಓದಿ:Optical Illusion: ನಿಮ್ಮದು ಹದ್ದಿನ ಕಣ್ಣಾಗಿದ್ರೆ ಈ ಚಿತ್ರದಲ್ಲಿ ಅಡಗಿರುವ ಪಾಂಡಗಳನ್ನು ಗುರುತಿಸಿ

ನಿಮ್ಮ ಕಣ್ಣಿಗೆ ಅಳಿಲು ಕಂಡಿತೇ?

ಅಯ್ಯೋ ಎಷ್ಟೇ ಹುಡುಕಿದರೂ ಅಳಿಲು ನಿಮ್ಮ ಕಣ್ಣಿಗೆ ಕಾಣಿಸುತ್ತಿಲ್ಲವೇ. ನಿಮಗೆ ಏನಾದರೂ ಸುಳಿವು ಬೇಕೇ? ಆದರೆ, ನಾವು ನಿಮಗೆ ಯಾವುದೇ ಸುಳಿವು ನೀಡಲು ಸಾಧ್ಯವಿಲ್ಲ. ಸಣ್ಣ ಸುಳಿವು ಕೂಡ ದೃಷ್ಟಿ ಸಾಮರ್ಥ್ಯ ಎಷ್ಟಿದೆ ಎಂದು ಪರೀಕ್ಷಿಸಲು ಅಡ್ಡಿಯಾಗುತ್ತದೆ. ಒಂದು ವೇಳೆ ಈ ಚಿತ್ರದಲ್ಲಿ ನೀವು ಅಳಿಲನ್ನು ಗುರುತಿಸಿದ್ದೀರಿ ಅಂತಾದ್ರೆ ನೀವು ಬುದ್ಧಿವಂತರು. ಒಂದು ವೇಳೆ ನಿಮ್ಮ ಕಣ್ಣಿಗೆ ಅಳಿಲು ಬಿದ್ದಿಲ್ಲವೆಂದಾದರೆ ಈ ಮೇಲಿನ ಚಿತ್ರದಲ್ಲಿ ನಾವು ಅಳಿಲನ್ನು ಕೆಂಪು ಬಣ್ಣದಲ್ಲಿ ಗುರುತಿಸಿದ್ದೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 10:42 am, Fri, 17 October 25