Optical Illusion: ಈ ಚಿತ್ರದಲ್ಲಿರುವ ಮೀನನ್ನು ಹುಡುಕಿದ್ರೆ ನಿಮ್ಮ ಕಣ್ಣು ಚುರುಕಾಗಿದೆ ಎಂದರ್ಥ

ಮೆದುಳಿಗೆ ಕಸರತ್ತು ನೀಡುವ ಒಗಟುಗಳನ್ನು ಬಿಡಿಸುವ ಮಜಾನೇ ಬೇರೆ. ಸೋಶಿಯಲ್ ಮೀಡಿಯಾದಲ್ಲಿ ಇಂತಹ ಒಗಟುಗಳು ವೈರಲ್ ಆಗುತ್ತಿರುತ್ತವೆ. ಈ ಚಿತ್ರದಲ್ಲಿ ಮೀನು ಎಲ್ಲಿದೆ ಎಂದು 25 ಸೆಕೆಂಡುಗಳಲ್ಲಿ ಹೇಳಬೇಕು. ಈ ಚಿತ್ರ ನೋಡಿದಾಗ ಸುಲಭ ಅನಿಸಬಹುದು. ಆದರೆ ಏಕಾಗ್ರತೆ ಬೇರೆಡೆ ಹರಿಸದೇ ಒಗಟು ಬಿಡಿಸಿ. ಈ ಟ್ರಿಕ್ಕಿ ಒಗಟಿನ ಚಿತ್ರ ಬಿಡಿಸಿ ನೋಡೋಣ.

Optical Illusion: ಈ ಚಿತ್ರದಲ್ಲಿರುವ ಮೀನನ್ನು ಹುಡುಕಿದ್ರೆ ನಿಮ್ಮ ಕಣ್ಣು ಚುರುಕಾಗಿದೆ ಎಂದರ್ಥ
ಆಪ್ಟಿಕಲ್‌ ಇಲ್ಯೂಷನ್‌ ಚಿತ್ರ
Image Credit source: Social Media

Updated on: Feb 26, 2026 | 6:47 PM

ಇತ್ತೀಚೆಗಿನ ದಿನಗಳಲ್ಲಿ ಆಪ್ಟಿಕಲ್‌ ಇಲ್ಯೂಷನ್‌ (Optical Illusion) ಒಗಟಿನ ಚಿತ್ರಗಳು ಸಖತ್‌ ಟ್ರೆಂಡ್ ಆಗುತ್ತಿದೆ. ಆದರೆ ಈ ಒಗಟಿನ ಚಿತ್ರಗಳನ್ನು ಹತ್ತು ಜನರಲ್ಲಿ ಒಬ್ಬರಿಗೆ ಮಾತ್ರ ಬಿಡಿಸಲು ಸಾಧ್ಯ. ಈ ಚಿತ್ರಗಳು ಮೆದುಳಿಗೆ ವ್ಯಾಯಾಮ ನೀಡುವುದರ ಜೊತೆಗೆ ನಿಮ್ಮ ಬುದ್ಧಿವಂತಿಕೆಗೆ ಸವಾಲೆಸಗುತ್ತದೆ. ಅಂತಹದ್ದೊದು ಇಲ್ಯೂಷನ್‌ ಚಿತ್ರ ಇದೀಗ ವೈರಲ್‌ ಆಗಿದೆ. ಈ ಚಿತ್ರದಲ್ಲಿ ಮೀನೊಂದು ಇದ್ದು, ನೀವು ಆ ಜಲಚರ ಜೀವಿಯನ್ನು ಹುಡುಕಿ ಜಾಣರು ಎನಿಸಿಕೊಳ್ಳಿ.

ಈ ಚಿತ್ರದಲ್ಲಿ ನಿಮಗೆ ಏನು ಕಾಣಿಸಿತು?

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ಸುಲಭವಾಗಿ ಕಾಣುತ್ತವೆ. ಆದರೆ ಅಷ್ಟೇ ಟ್ರಿಕ್ಕಿಯಾಗಿದೆ. ಈ ಚಿತ್ರದಲ್ಲಿ ಮರದ ಮೇಲೆ ಮಲಗಿರುವ ಚಿರತೆ ನಿಮ್ಮ ಕಣ್ಣಿಗೆ ಕಾಣಿಸುತ್ತೀರಬಹುದು. ಅದೇ ಮರದಲ್ಲಿ ಮೀನೊಂದು ಅಡಗಿ ಕುಳಿತಿದೆ. ನೀವು 25 ಸೆಕೆಂಡುಗಳಲ್ಲಿ ಮೀನು ಹುಡುಕಬೇಕು. ಬಹಳ ಎಚ್ಚರಿಕೆಯಿಂದ ಚಿತ್ರ ನೋಡಿ ಮೀನು ಹುಡುಕಲು ಪ್ರಯತ್ನಿಸಿ.

ಇದನ್ನೂ ಓದಿ: ಈ ಚಿತ್ರದಲ್ಲಿದೆ ಮನೆಯ ಮುದ್ದಿನ ಶ್ವಾನ, 7 ಸೆಕೆಂಡುಗಳಲ್ಲಿ ಕಂಡು ಹಿಡಿಯಬಲ್ಲಿರಾ

ಮೀನು ನಿಮ್ಮ ಕಣ್ಣಿಗೆ ಕಾಣಿಸಿತೇ?

ನೀವು ಏಕಾಗ್ರತೆಯಿಂದ ಈ ಒಗಟು ಬಿಡಿಸಿದ್ದೀರಿ ಎಂದಾದರೆ ನಿಮ್ಮ ವೀಕ್ಷಣಾ ಕೌಶಲ್ಯಕ್ಕೆ ಹ್ಯಾಟ್ಸ್ ಆಫ್ ಹೇಳುತ್ತೇವೆ. ಒಂದು ವೇಳೆ ಮೀನು ಹುಡುಕಲು ಸಾಧ್ಯವಾಗಿಲ್ಲ ಎಂದಾದರೆ ನಾವೇ ನಿಮಗೆ ಉತ್ತರ ಹೇಳುತ್ತೇವೆ. ಈ ಕೆಳಗಿನ ಚಿತ್ರದಲ್ಲಿ ಮೀನು ಎಲ್ಲಿದೆ ಎಂದು ನಾವು ಗುರುತಿಸಿದ್ದೇವೆ. ಮೀನು ನಿಮ್ಮ ಕಣ್ಣಿಗೆ ಕಾಣಿಸಿತು ಎಂದು ನಾವು ಭಾವಿಸುತ್ತೇ

Optical Illusion Answer

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Loading...
Unable to load recommendations.
Follow Us