Optical Illusion: ಈ ಚಿತ್ರದಲ್ಲಿ ಅಡಗಿರುವ ಮೂವರು ವ್ಯಕ್ತಿಗಳ ಮುಖಗಳನ್ನು ಪತ್ತೆ ಹಚ್ಚಿ

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ಮೆದುಳಿಗೆ ಕೆಲಸ ನೀಡುವುದು ಮಾತ್ರವಲ್ಲ, ನಿಮ್ಮ ಬುದ್ಧಿವಂತಿಕೆ ಪರೀಕ್ಷಿಸುತ್ತವೆ. ಸೋಶಿಯಲ್ ಮೀಡಿಯಾದಲ್ಲಿ ಒಗಟಿನ ಚಿತ್ರಗಳು ಸಾಕಷ್ಟು ಚಿತ್ರಗಳು ವೈರಲ್ ಆಗುತ್ತಿದ್ದು, ಕೆಲವರು ಟೈಮ್ ಪಾಸ್‌ಗೆಂದು ಚಿತ್ರಗಳನ್ನು ಬಿಡಿಸುತ್ತಾ ಕೂರುತ್ತಾರೆ. ಇದೀಗ ಟ್ರಿಕ್ಕಿ ಒಗಟಿನ ಚಿತ್ರ ವೈರಲ್ ಆಗಿದ್ದು, ಮೂರು ಗುಪ್ತ ಮುಖಗಳನ್ನು ಕಂಡು ಹಿಡಿಯುವ ಸವಾಲು ನಿಮ್ಮ ಮುಂದಿದೆ. ಈ ಒಗಟಿನ ಚಿತ್ರ ಬಿಡಿಸಿ ನಿಮ್ಮ ಬುದ್ಧಿವಂತಿಕೆಯನ್ನು ಪರೀಕ್ಷಿಸಿಕೊಳ್ಳಿ.

Optical Illusion: ಈ ಚಿತ್ರದಲ್ಲಿ ಅಡಗಿರುವ ಮೂವರು ವ್ಯಕ್ತಿಗಳ ಮುಖಗಳನ್ನು ಪತ್ತೆ ಹಚ್ಚಿ
ಆಪ್ಟಿಕಲ್‌ ಇಲ್ಯೂಷನ್‌ ಚಿತ್ರ
Image Credit source: Social Media

Updated on: Jan 27, 2026 | 10:26 AM

ಇತ್ತೀಚೆಗಿನ ದಿನಗಳಲ್ಲಿ ಆಪ್ಟಿಕಲ್‌ ಇಲ್ಯೂಷನ್‌ (Optical Illusion) ಚಿತ್ರಗಳು ಬಹಳಷ್ಟು ಜನಪ್ರಿಯತೆ ಗಳಿಸುತ್ತಿವೆ. ಹೆಚ್ಚಿನವರು ಬಿಡುವು ಸಿಕ್ಕಾಗಲೆಲ್ಲಾ ಇಂತಹ ಒಗಟಿನ ಚಿತ್ರ ಬಿಡಿಸಲು ಆಸಕ್ತಿ ತೋರುತ್ತಾರೆ. ಆದರೆ ಕೆಲವರು ಒಗಟು ಬಿಡಿಸುವಲ್ಲಿ ಯಶಸ್ವಿಯಾದರೆ, ಇನ್ನು ಕೆಲವರು ವಿಫಲರಾಗುತ್ತಾರೆ. ಇದೀಗ ವೈರಲ್ ಆಗಿರುವ ಇಲ್ಯೂಷನ್ ಚಿತ್ರವು ಸುಲಭವಾಗಿ ಕಾಣುತ್ತದೆ. ಆದರೆ ಈ ಚಿತ್ರದಲ್ಲಿರುವ ಮೂವರ ಮುಖಗಳನ್ನು ಗುರುತಿಸಬೇಕು. ಕೇವಲ ಹತ್ತು ಸೆಕೆಂಡುಗಳೊಳಗೆ ಈ ಒಗಟು ಬಿಡಿಸಿ ನೋಡೋಣ.

ಈ ಚಿತ್ರ ನೋಡಿದಾಗ ನಿಮಗೇನು ಕಾಣಿಸಿತು?

ಆಪ್ಟಿಕಲ್‌ ಇಲ್ಯೂಷನ್‌ ನೋಡುವಷ್ಟು ಸುಲಭವಾಗಿ ಬಿಡಿಸಲಾಗದು. ಈ ಇಲ್ಯೂಷನ್ ಚಿತ್ರದಲ್ಲಿ ಇಬ್ಬರು ಮಹಿಳೆಯರು ನಿಂತಿದ್ದಾರೆ. ಹಿನ್ನೆಲೆಯಲ್ಲಿ ಮನೆಗಳು, ಸಸ್ಯಗಳು, ಮರಗಳು ಗೋಚರಿಸುತ್ತವೆ. ಆದರೆ ಇಬ್ಬರೂ ಮಹಿಳೆಯರು ಮಾತ್ರವಲ್ಲ ಮೂವರು ವ್ಯಕ್ತಿಗಳ ಮುಖಗಳಿವೆ. ನೀವು 10 ಸೆಕೆಂಡುಗಳಲ್ಲಿ ಆ ಮುಖಗಳನ್ನು ಹುಡುಕಲು ಸಾಧ್ಯವಾದರೆ, ವೀಕ್ಷಣಾ ಕೌಶಲ್ಯಕ್ಕೆ ಅತ್ಯದ್ಭುತ ಎಂದರ್ಥ.

ಇದನ್ನೂ ಓದಿ: ಸಮುದ್ರ ಆಳದಲ್ಲಿರುವ ಮೀನನ್ನು 10 ಸೆಕೆಂಡುಗಳಲ್ಲಿ ಕಂಡುಹಿಡಿಯುವಿರಾ

ಮೂವರು ವ್ಯಕ್ತಿಗಳ ಮುಖಗಳನ್ನು ಗುರುತಿಸಿ

ಈ ಚಿತ್ರದಲ್ಲಿ ಮೂವರು ವ್ಯಕ್ತಿಗಳ ಮುಖಗಳು ಸಂಪೂರ್ಣವಾಗಿ ಬೆರೆತು ಹೋಗಿದೆ. ಹೀಗಾಗಿ ಮುಖಗಳನ್ನು ಗುರುತಿಸುವುದು ನೂರರಲ್ಲಿ ಹತ್ತು ಜನರಿಗೆ ಸಾಧ್ಯವಾಗಬಹುದು. ನೀವು ಕೂಡ ಛಲ ಬಿಡದೇ ಪ್ರಯತ್ನಿಸಿ. ಮುಖಗಳು ಕಾಣಿಸಿಕೊಳ್ಳದಿದ್ದರೆ ಹೆಚ್ಚು ಚಿಂತಿಸುವ ಅಗತ್ಯವಿಲ್ಲ. ಈ ಕೆಳಗಿನ ಚಿತ್ರವನ್ನು ಗಮನಿಸಿದರೆ ನಿಮಗೆ ಮೂವರು ವ್ಯಕ್ತಿಗಳ ಮುಖಗಳನ್ನು ಗುರುತಿಸಿರುವುದು ಕಾಣಿಸುತ್ತದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ