
ಇತ್ತೀಚಿನ ದಿನಗಳಲ್ಲಿ ಆಪ್ಟಿಕಲ್ ಇಲ್ಯೂಷನ್ (Optical Illusion) ಸೇರಿದಂತೆ ಕಠಿಣ ಒಗಟಿನ ಚಿತ್ರಗಳು ಸಾಕಷ್ಟು ಜನಪ್ರಿಯವಾಗಿವೆ. ಮೆದುಳಿಗೆ ಕೆಲಸ ನೀಡುವ ಇಂತಹ ಒಗಟಿನ ಆಟವನ್ನು ಆಡುವ ಮಜಾನೇ ಬೇರೆ. ಈ ಒಗಟಿನ ಆಟಗಳು ಟೈಮ್ ಪಾಸ್ ಮಾತ್ರವಲ್ಲದೆ ನಮ್ಮ ಮೆದುಳಿಗೆ ವ್ಯಾಯಾಮವನ್ನು ನೀಡುತ್ತವೆ. ಇದೀಗ ಇಲ್ಲೊಂದು ನಿಮ್ಮ ಕಣ್ಣಿನ ತೀಕ್ಷ್ಣತೆಗೆ ಸವಾಲೊಡ್ಡುವ ಒಗಟಿನ ಚಿತ್ರ ವೈರಲ್ ಆಗಿದ್ದು, ಈ ಚಿತ್ರದಲ್ಲಿ ಸಾಲು ಸಾಲು ಮರದ ದಿಮ್ಮಿಗಳಿದ್ದು, ಇದರಲ್ಲಿ ಮರೆ ಮಾಡಲಾಗಿರುವ ಬೆಕ್ಕನ್ನು (cat) ಹದಿನೈದು ಸೆಕೆಂಡುಗಳ ಒಳಗೆ ಕಂಡು ಹಿಡಿಯಬೇಕು. ಕಣ್ಣಿನ ಸೂಕ್ಷ್ಮತೆ ಮತ್ತು ಏಕಾಗ್ರತೆ ಎಷ್ಟಿದೆ ಎಂಬುದನ್ನು ಪರೀಕ್ಷಿಸಲು ಸಹಾಯಕವಾಗಿರುವ ಈ ಒಗಟನ್ನು ಬಿಡಿಸಲು ಸಾಧ್ಯನಾ ಎಂದು ನೋಡಿ.
FindTheSniper ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಶೇರ್ ಮಾಡಲಾದ ಚಿತ್ರಕ್ಕೆ ಮರದ ದಿಮ್ಮಿಗಳ ನಡುವೆ ಇರುವ ಈ ಬೆಕ್ಕನ್ನು ನೀವು ಹುಡುಕಬಹುದೇ” ಎಂಬ ಶೀರ್ಷಿಕೆಯನ್ನು ನೀಡಲಾಗಿದೆ. ಮೊದಲ ನೋಟದಲ್ಲಿ ನೀವು ಕಾಡಿನಲ್ಲಿ ರಾಶಿ ರಾಶಿ ಮರದ ದಿಮ್ಮಿಗಳನ್ನು ನೋಡುತ್ತೀರಿ. ಇಲ್ಲಿ ಮರದ ದಿಮ್ಮಿಗಳನ್ನು ಅಚ್ಚುಕಟ್ಟಾಗಿ ಜೋಡಿಸಲಾಗಿದೆ. ಆದರೆ ಮರದ ದಿಮ್ಮಿಗಳ ನಡುವೆ, ಒಂದು ಕಳ್ಳ ಬೆಕ್ಕು ಜಾಣತನದಿಂದ ಅಡಗಿಕೊಂಡು ಕುಳಿತಿದೆ. ನಿಮ್ಮ ತಾಳ್ಮೆ ಹಾಗೂ ಏಕಾಗ್ರತೆಯಿಂದ ಪರೀಕ್ಷಿಸಲು ಇದೊಂದು ಒಳ್ಳೆಯ ಸಮಯ. ಕೇವಲ ಹದಿನೈದು ಸೆಕೆಂಡುಗಳ ಒಳಗೆ ಈ ಒಗಟು ಬಿಡಿಸಿ ನೀವು ಜಾಣರು ಎನಿಸಿಕೊಳ್ಳಿ.
ಮರದ ದಿಮ್ಮಿಗಳ ನಡುವೆ ಅಡಗಿರುವ ಬೆಕ್ಕನ್ನು ಕಂಡುಹಿಡಿಯುವುದು ಹೇಳುವಷ್ಟು ಸುಲಭವಲ್ಲ. ಬೆಕ್ಕಿನ ತುಪ್ಪಳದ ಬಣ್ಣವು ಈ ಮರದ ದಿಮ್ಮಿಗಳ ಬಣ್ಣಕ್ಕೆ ಹೋಲುತ್ತದೆ. ಕಂದು, ಹಳದಿ ಮತ್ತು ನೆರಳುಗಳು ಸಂಪೂರ್ಣವಾಗಿ ಮಿಶ್ರಣವಾಗಿ ಬೆಕ್ಕು ಸುಲಭವಾಗಿ ನಿಮ್ಮ ಕಣ್ಣಿಗೆ ಬೀಳದಂತೆ ಮರೆ ಮಾಡಲಾಗಿದೆ. ಹೀಗಾಗಿ ನೀವು ತಾಳ್ಮೆ ಕಳೆದುಕೊಳ್ಳದೇ ಏಕಾಗ್ರತೆಯಿಂದ ಈ ಬೆಕ್ಕನ್ನು ಕಂಡು ಹಿಡಿಯಲು ಪ್ರಯತ್ನಿಸಿ.
ಇದನ್ನೂ ಓದಿ:ಮನೆಯ ಹೊರಾಂಗಣದಲ್ಲಿ ಅಡಗಿ ಕುಳಿತಿರುವ ಕಪ್ಪು ಬೆಕ್ಕನ್ನು ಗುರುತಿಸಬಲ್ಲಿರಾ
ಅಬ್ಬಬ್ಬಾ ಎಷ್ಟೇ ಹುಡುಕಿದರೂ ಮರದ ದಿಮ್ಮಿಗಳ ನಡುವೆ ಅಡಗಿ ಕುಳಿತಿರುವ ಬೆಕ್ಕನ್ನು ಹುಡುಕಲು ಸಾಧ್ಯವಾಗುತ್ತಿಲ್ಲವೇ. ಚಿಂತಿಸಬೇಡಿ, ಬೆಕ್ಕು ಎಲ್ಲಿ ಅಡಗಿ ಕುಳಿತಿದೆ ಎಂಬುದನ್ನು ನಾವು ಹೇಳುತ್ತೇವೆ. ನಾವು ಹೇಳಿದ ಸುಳಿವನ್ನು ಗಮನಿಸಿ ಬೆಕ್ಕನ್ನು ಕಂಡು ಹಿಡಿಯಲು ಪ್ರಯತ್ನಿಸಿ. ಬೆಕ್ಕು ಮರದ ದಿಮ್ಮಿಗಳ ಮಧ್ಯದ ರಾಶಿಯಲ್ಲಿ, ಮೇಲ್ಭಾಗದಲ್ಲಿ ಅಡಗಿ ಕುಳಿತಿದೆ. ನೀವು ಹತ್ತಿರದಿಂದ ನೋಡಿದರೆ, ಅದರ ಮುಖವು ಮರದ ದಿಮ್ಮಿಗಳ ನಡುವೆ ಇಣುಕುವುದು ನಿಮಗೆ ಕಾಣಿಸುತ್ತದೆ. ಹೀಗಾಗಿ ನೀವು ಗಮನ ಹರಿಸಿ ಈ ಬೆಕ್ಕನ್ನು ಕಂಡುಹಿಡಿಯಲು ಪ್ರಯತ್ನಿಸಿ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ