
ಸಾಮಾಜಿಕ ಜಾಲತಾಣದಲ್ಲಿ ಕಣ್ಣು ಮತ್ತು ಮೆದುಳಿಗೆ ಸವಾಲೊಡ್ಡುವ ಕುತೂಹಲಕಾರಿ ಆಪ್ಟಿಕಲ್ ಇಲ್ಯೂಷನ್ (Optical Illusion) ಚಿತ್ರಗಳು ಹರಿದಾಡುತ್ತಿರುತ್ತವೆ. ಕೆಲವರಿಗೆ ಇಂತಹ ಒಗಟಿನ ಚಿತ್ರಗಳನ್ನು ಬಿಡಿಸುವುದೆಂದರೆ ಅದೇನೋ ಖುಷಿ. ಆದರೆ ಹೆಚ್ಚಿನವರು ಇಂತಹ ಒಗಟನ್ನು ಬಿಡಿಸುವಲ್ಲಿ ವಿಫಲರಾಗುತ್ತಾರೆ. ಆದರೆ ಭ್ರಮೆಯನ್ನು ಉಂಟು ಮಾಡುವ ಈ ಚಿತ್ರಗಳು ನಮ್ಮ ಕಣ್ಣಿನ ಸೂಕ್ಷ್ಮತೆ ಮತ್ತು ಯೋಚನಾ ಸಾಮರ್ಥ್ಯವನ್ನು ಪರೀಕ್ಷಿಸುತ್ತವೆ. ಕೆಲವೊಂದು ನಮ್ಮ ವ್ಯಕ್ತಿತ್ವವನ್ನು ಬಹಿರಂಗ ಪಡಿಸುತ್ತವೆ. ಇದೀಗ ಅಂತಹದ್ದೇ ಚಿತ್ರವೊಂದು ವೈರಲ್ ಆಗಿದ್ದು, ಆ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿ, ಇಲ್ಲಿ ಅಡಗಿರುವ ಅಳಿಲು (squirrel) ಎಲ್ಲಿದೆ ಎಂದು ಹೇಳಬೇಕು. ಈ ಒಗಟಿನ ಚಿತ್ರ ಬಿಡಿಸಲು ನೀವು ರೆಡಿ ಇದ್ದೀರಾ?.
ಈ ಚಿತ್ರದಲ್ಲಿ ಏನಿದೆ?
ಆಪ್ಟಿಕಲ್ ಭ್ರಮೆಯ ಚಿತ್ರಗಳು ನೋಡಲು ತುಂಬಾ ಸಾಮಾನ್ಯವಾಗಿ ಕಂಡರೂ ಉತ್ತರ ಹುಡುಕಲು ಕುಳಿತುಕೊಂಡಾಗಲೇ ಎಷ್ಟು ಕಷ್ಟ ಎಂದೆನಿಸುತ್ತದೆ. ಇದೀಗ ವೈರಲ್ ಆಗಿರುವ ಈ ಚಿತ್ರದಲ್ಲಿ ಮಕ್ಕಳಿಂದ ಹಿಡಿದು ಯುವಕ ಯುವತಿಯರು ಹಚ್ಚ ಹಸಿರಿನಿಂದ ಕೂಡಿದ ಪರಿಸರದಲ್ಲಿ ಬಿದ್ದಿರುವ ಕಸವನ್ನು ಹೆಕ್ಕುವುದರಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಈ ಚಿತ್ರದಲ್ಲಿ ಅಳಿಲೊಂದು ಅಡಗಿದೆ. ಕೇವಲ 20 ಸೆಕೆಂಡುಗಳಲ್ಲಿ ಈ ಅಳಿಲು ಎಲ್ಲಿದೆ ಎಂದು ಪತ್ತೆ ಹಚ್ಚುವ ಸವಾಲು ನೀಡಲಾಗಿದ್ದು, ನೀವು ರೆಡಿ ಇದ್ರೆ ಈಗಲೇ ನಿಮ್ಮ ಸಮಯ ಆರಂಭವಾಗುತ್ತದೆ.
ಈ ಸವಾಲನ್ನು ಸ್ವೀಕರಿಸಿದ್ದೀರಾ?
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಚಿತ್ರವು ಆಪ್ಟಿಕಲ್ ಭ್ರಮೆಗೆ ಪರಿಪೂರ್ಣ ಉದಾಹರಣೆಯಾಗಿದೆ. ನಿಮಗೆ ಹದ್ದಿನಂತಹ ಕಣ್ಣುಗಳಿದ್ದರೆ, ಸಮಯದ ಮಿತಿಯೊಳಗೆ ಅಳಿಲನ್ನು ಗುರುತಿಸುತ್ತೀರಿ. ಈ ಒಗಟಿನ ಚಿತ್ರವನ್ನು ಬಿಡಿಸಲು ನೀವು ಸಿದ್ದವಿದ್ದು ಸವಾಲನ್ನು ಸ್ವೀಕರಿಸಿದ್ದೀರಿ ಎಂದು ನಾವು ಭಾವಿಸುತ್ತೇವೆ.
ಇದನ್ನೂ ಓದಿ:Optical Illusion: ಹಚ್ಚಹಸಿರಿನ ಪರಿಸರದ ನಡುವೆ ಕಪ್ಪೆ ಎಲ್ಲಿದೆ ಎಂದು ಹೇಳಬಲ್ಲಿರಾ?
ಅಳಿಲನ್ನು ಪತ್ತೆ ಹಚ್ಚಿದ್ರಾ?
ಈ ಆಪ್ಟಿಕಲ್ ಇಲ್ಯೂಷನ್ ಫೋಟೋ ಜನರಿಗೆ ಗೊಂದಲವನ್ನು ಉಂಟು ಮಾಡಿದೆ. ಈ ಒಗಟನ್ನು ಬಿಡಿಸಲು ಸಾಧ್ಯವಾಗಿದ್ರೆ ನಿಮ್ಮದು ಉತ್ತಮ ದೃಷ್ಟಿ ಸಾಮರ್ಥ್ಯ ಹಾಗೂ ಬುದ್ಧಿವಂತರಾಗಿದ್ದೀರಿ ಎಂದರ್ಥ. ನೀವು ಇಲ್ಲಿ ನೀಡಿರುವ ನಿರ್ದಿಷ್ಟ ಸಮಯದೊಳಗೆ ಅಳಿಲನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲದಿದ್ದರೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ಉತ್ತರವನ್ನು ನಾವೇ ನಿಮಗೆ ಹೇಳುತ್ತೇವೆ. ಈ ಚಿತ್ರದಲ್ಲಿ ಯುವತಿಯೊಬ್ಬಳು ಕಸವನ್ನು ಹೆಕ್ಕಿ ಗೋಣಿ ಚೀಲಕ್ಕೆ ಹಾಕುತ್ತಿರುವುದನ್ನು ಕಾಣಬಹುದು. ಆ ಗೋಣಿ ಚೀಲದ ಪಕ್ಕದಲ್ಲೇ ಅಳಿಲು ಇದೆ. ಉತ್ತರವನ್ನು ಹಳದಿ ಬಣ್ಣದಲ್ಲಿ ಗುರುತಿಸಿದ್ದೇವೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:43 pm, Thu, 28 August 25