
ಆಪ್ಟಿಕಲ್ ಇಲ್ಯೂಷನ್ (Optical Illusion) ಸೇರಿದಂತೆ ಟ್ರಿಕ್ಕಿ ಒಗಟಿನ ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ಆಗಾಗ್ಗೆ ವೈರಲ್ ಆಗುತ್ತಲೇ ಇರುತ್ತವೆ. ಇದು ನಿಮ್ಮ ಮೆದುಳು ಎಷ್ಟು ಚುರುಕುತನದಿಂದ ಕೂಡಿದೆ ಎಂದು ತಿಳಿದುಕೊಳ್ಳಲು ಈ ಸಹಾಯ ಮಾಡುತ್ತದೆ. ಕಣ್ಣಿನ ತೀಕ್ಷ್ಣತೆಗೆ ಸವಾಲೊಡ್ಡುವ ಈ ಇಲ್ಯೂಷನ್ ಚಿತ್ರಗಳನ್ನು ಬಿಡಿಸುವುದರಲ್ಲಿರುವ ಖುಷಿಯೇ ಬೇರೆ. ಇಲ್ಲೊಂದು ಅಂತಹದ್ದೇ ಚಿತ್ರವೊಂದು ವೈರಲ್ ಆಗಿದ್ದು, ಇದರಲ್ಲಿ ಅಡಗಿರುವ ಹಾವನ್ನು ಐದು ಸೆಕೆಂಡುಗಳಲ್ಲಿ ಕಂಡುಹಿಡಿಯಬೇಕು. ಕಡಿಮೆ ಸಮಯದಲ್ಲಿ ಹಾವನ್ನು (snake) ಕಂಡುಹಿಡಿದರೆ ನೀವು ಅತ್ಯುತ್ತಮ ವೀಕ್ಷಣಾ ಸಾಮರ್ಥ್ಯ ಹೊಂದಿದ್ದೀರಿ ಎನ್ನುವುದು ಖಚಿತವಾಗುತ್ತದೆ.
ಈ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಬಿಡುವಿನ ವೇಳೆಯಲ್ಲಿ ಉಪಯುಕ್ತ ರೀತಿಯಲ್ಲಿ ಸಮಯ ಕಳೆಯಲು ಸಹಾಯ ಮಾಡುತ್ತವೆ. ಇಂದು, ಇಂಟರ್ನೆಟ್‌ನಲ್ಲಿ ಟ್ರೆಂಡ್ ಆಗಿರುವ ಚಿತ್ರದಲ್ಲಿ ಮರುಭೂಮಿ ಪ್ರದೇಶವನ್ನು ಕಾಣಬಹುದು. ಇಲ್ಲಿ ಒಂದು ಡೇರೆ ಹಾಕಲಾಗಿದ್ದು, ಹೊರಭಾಗದಲ್ಲಿ ವ್ಯಕ್ತಿಯೊಬ್ಬ ಕುಳಿತುಕೊಂಡಿದ್ದಾನೆ. ಮರುಭೂಮಿಯಲ್ಲಿ ಚೇಳುಗಳು ಹರಿದಾಡುತ್ತಿವೆ. ಅಲ್ಲಲ್ಲಿ ಪಾಪಸ್ ಕಳ್ಳಿ ಗಿಡಗಳಿರುವುದನ್ನು ಕಾಣಬಹುದು. ಈ ಚಿತ್ರವು ನಿಮ್ಮ ಕಣ್ಣುಗಳಿಗೆ ಸವಾಲು ಹಾಕುವಂತೆ ವಿನ್ಯಾಸಗೊಳಿಸಲಾಗಿದೆ. ಈ ಚಿತ್ರದಲ್ಲಿ ಹಾವೊಂದು ಅಡಗಿ ಕುಳಿತಿದೆ. ನೀವುಹಾವನ್ನು ಕೇವಲ 5 ಸೆಕೆಂಡುಗಳಲ್ಲಿ ಕಂಡುಹಿಡಿಯಬೇಕು.
ಈ ಚಿತ್ರದಲ್ಲಿ ಅಡಗಿರುವ ಹಾವನ್ನು ಹುಡುಕುವ ಸವಾಲನ್ನು ಸ್ವೀಕರಿಸಲು ಸಿದ್ಧವಿದ್ದೀರಾ ಎಂದು ನಾವು ಭಾವಿಸುತ್ತೇವೆ. ಈ ಹಾವನ್ನು ತಕ್ಷಣಕ್ಕೆ ಹುಡುಕಲು ನಿಮಗೆ ಕಷ್ಟವಾಗಾಬಹುದು. ಈ ಆಪ್ಟಿಕಲ್ ಒಗಟುಗಳಲ್ಲಿನ ವಿನ್ಯಾಸಗಳು ನಿಮ್ಮನ್ನು ಗೊಂದಲಕ್ಕೀಡು ಮಾಡುತ್ತವೆ ಎನ್ನುವುದು ತಿಳಿದಿದೆ. ಆದರೆ ನಿಮ್ಮ ಕಣ್ಣನ್ನು ಅಗಲಿಸಿ ಈ ಹಾವನ್ನು ಕಂಡುಹಿಡಿದು ಜಾಣರು ಎನಿಸಿಕೊಳ್ಳಿ.
ಇದನ್ನೂ ಓದಿ:ನಿಮ್ಮ ಕಣ್ಣಿಗೊಂದು ಸವಾಲ್; ಈ ಚಿತ್ರದಲ್ಲಿರುವ ಚಿಟ್ಟೆಯನ್ನು ಹುಡುಕಬಲ್ಲಿರಾ
ಈ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಭ್ರಮೆಯಲ್ಲಿ ಸಿಲುಕಿಸುವ ಕಾರಣ ತಕ್ಷಣವೇ ಉತ್ತರ ಕಂಡುಕೊಳ್ಳುವುದು ಕಷ್ಟಕರವಾಗಿರಬಹುದು. ಉತ್ತರ ಕಂಡುಕೊಂಡವರು ಅದ್ಭುತ ವೀಕ್ಷಣಾ ಕೌಶಲ್ಯ ಹೊಂದಿದ್ದೀರಿ ಎಂದು ತಿಳಿಯುತ್ತದೆ. ಆದರೆ, ಹಾವು ಎಲ್ಲಿದೆ ಎಂದು ತಿಳಿದಿಲ್ಲದವರು, ಸ್ವಲ್ಪ ಸಮಯ ತೆಗೆದುಕೊಂಡು ಐದು ಸೆಕೆಂಡುಗಳ ಕಾಲ ಮತ್ತೆ ಹುಡುಕಲು ಪ್ರಯತ್ನಿಸಿ. ಒಂದು ವೇಳೆ ನಿಮಗೆ ಹಾವು ಕಾಣಿಸಿಲ್ಲ ಎಂದಾದರೆ ನಾವು ನಿಮಗೆ ಸುಳಿವು ನೀಡುತ್ತೇವೆ. ಚಿತ್ರದ ಮೇಲಿನ ಬಲಭಾಗವನ್ನು ನೋಡಿ, ಇಲ್ಲಿ ಅಡಗಿ ಕುಳಿತಿರುವ ಹಾವೊಂದು ಕಾಣಿಸುತ್ತದೆ. ನಿಮ್ಮ ಕಣ್ಣಿಗೆ ಹಾವು ಕಾಣಿಸಿಲ್ಲವೆಂದಾದರೆ ಈ ಮೇಲಿನ ಚಿತ್ರದಲ್ಲಿ ಹಾವು ಎಲ್ಲಿದೆ ಎಂದು ವೃತ್ತಾಕಾರದಲ್ಲಿ ಗುರುತಿಸಿದ್ದೇವೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ