ಸ್ಟೇಜ್​ ಮೇಲೆಯೇ ಪತ್ನಿಗೆ ಕತ್ತೆ ಗಿಫ್ಟ್ ಕೊಟ್ಟ ಪತಿ: ಕಾರಣ ಕೇಳಿದ್ರೆ ಹೃದಯಕ್ಕೆ ಟಚ್ ಆಗುತ್ತೆ

ಯಾರೋ ಒಬ್ಬರು ತಮಗೆ ಇಷ್ಟವಾದ ವ್ಯಕ್ತಿಗೆ ಗಿಫ್ಟ್ ಕೊಡಬೇಕಾದ್ರೆ, ಅವರಿಗೆ ಏನು ಇಷ್ಟು ಎಂದು ತಿಳಿದುಕೊಂಡು ಅದನ್ನೇ ಕೊಡುತ್ತಾರೆ. ಅದರಂತೆ ಇಲ್ಲೋರ್ವ ವ್ಯಕ್ತಿ, ತನ್ನನ್ನು ಮದುವೆಯಾದ ಹುಡುಗಿಗೆ ಕತ್ತೆ ಇಷ್ಟವೆಂದು ತಿಳಿದು ಅದನ್ನೇ ಉಡುಗೊರೆಯನ್ನಾಗಿ ಕೊಟ್ಟಿದ್ದಾನೆ.

ಸ್ಟೇಜ್​ ಮೇಲೆಯೇ ಪತ್ನಿಗೆ ಕತ್ತೆ ಗಿಫ್ಟ್ ಕೊಟ್ಟ ಪತಿ: ಕಾರಣ ಕೇಳಿದ್ರೆ ಹೃದಯಕ್ಕೆ ಟಚ್ ಆಗುತ್ತೆ
ಪತ್ನಿಗೆ ಕತ್ತೆಯನ್ನು ಗಿಫ್ಟ್ ಕೊಟ್ಟ ಪತಿ
Edited By:

Updated on: Dec 12, 2022 | 4:35 PM

ಕರಾಚಿ: ಮನೆಯಲ್ಲಿ ಶುಭ ಕಾರ್ಯಗಳನ್ನು ಆಯೋಜಿಸಿದಾಗ ಅಥವಾ ವಿಶೇಷ ಸಂದರ್ಭಗಳಲ್ಲಿ ಆಪ್ತರಿಗೆ ಹಾಗೂ ಬಂಧು ಮಿತ್ರರಿಗೆ ವಿಶೇಷ ಉಡುಗೊರೆಯನ್ನು (Gift) ನೀಡಿ, ಸಂತೋಷಪಡಿಸುವುದು ಸಾಮಾನ್ಯ. ಇನ್ನು ಈ ಉಡುಗೊರೆಗಳು ಸಾಕಷ್ಟು ಖುಷಿಯನ್ನು ಕೊಡುತ್ತವೆ ಮತ್ತು ವಿಶೇಷ ಸಂದರ್ಭಗಳನ್ನು ಅವಿಸ್ಮರಣೀಯಗೊಳಿಸುತ್ತವೆ. ಅದರಂತೆ ಇಲ್ಲೊರ್ವ ವ್ಯಕ್ತಿ ತನ್ನ ಮದುವೆ ದಿನದಂದು ಪತ್ನಿಗೆ ಕತ್ತೆಯನ್ನು (Donkey) ಉಡುಗೊರೆಯಾಗಿ ನೀಡಿದ್ದಾನೆ.

ಇದನ್ನೂ ಓದಿ: ಖ್ಯಾತ ಯೂಟ್ಯೂಬರ್​ನ ಇಬ್ಬರು ಪತ್ನಿಯರು ಒಂದೇ ಬಾರಿಗೆ ಪ್ರೆಗ್ನೆಂಟ್, ಅದು ಹೇಗೆ ಸಾಧ್ಯವೆಂದು ಅಚ್ಚರಿಗೊಂಡ ಜನ

ಹೌದು…ಅಚ್ಚರಿ ಎನ್ನಿಸಿದರೂ ಸತ್ಯ. ಪಾಕಿಸ್ತಾನದ ಯೂಟ್ಯೂಬರ್ (Pakistani Youtuber) ಒಬ್ಬರು ತಮ್ಮ ಮದುವೆಯ ದಿನದಂದು ತನ್ನ ಪತ್ನಿಗೆ (Wife) ಕತ್ತೆಯನ್ನು ಉಡುಗೊರೆ ನೀಡಿ ಮದುವೆಗೆ ಬಂದವರ ಗಮನಸೆಳೆದಿದ್ದಾನೆ.

ಕರಾಚಿಯ ಯೂಟ್ಯೂಬರ್ ಅಜ್ಲಾನ್ ಶಾ ಅವರು ಅರಕ್ಷತೆಯಲ್ಲಿ ಕತ್ತೆ ಮರಿಯೊಂದನ್ನು ತಂದು ತನ್ನ ಹೆಂಡತಿಗೆಗೆ ಉಡುಗೊರೆಯಾಗಿ ನೀಡಿದ್ದಾರೆ. ಇದನ್ನು ನೋಡಿದ ಪತ್ನಿ ವಾರಿಷಾ ಆಶ್ಚರ್ಯಗೊಂದು ಸಂತಸಗೊಂಡಿದ್ದಾಳೆ. ವಾರಿಷಾಗೆ ಕತ್ತೆ ಮರಿಗಳೆಂದರೆ ಪ್ರೀತಿ ಎಂದು ಗೊತ್ತಿತ್ತು. ಈ ಹಿನ್ನೆಲೆಯಲ್ಲಿಆಕೆಗೆ ಮದುವೆಯ ಉಡುಗೊರೆಯಾಗಿ ಕತ್ತೆ ಮರಿಯನ್ನು ಕೊಟ್ಟಿದ್ದೇನೆ. ಕತ್ತೆಯೂ ವಿಶ್ವದ ಅತ್ಯಂತ ಶ್ರಮಶೀಲ ಹಾಗೂ ಪ್ರೀತಿಯ ಪ್ರಾಣಿಯಾಗಿದೆ ಎಂದು ಅಜ್ಲಾನ್ ಕತ್ತೆ ಗಿಫ್ಟ್ ಕೊಟ್ಟಿರುವ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.

ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಅವಳಿ ಸೋದರಿಯರೊಂದಿಗೆ ಅವಳಿ ಸೋದರರ ಮದುವೆ


ಇನ್ನು ಇದನ್ನು ವಾರಿಷಾ ತಮ್ಮ ಇನ್ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿದ್ದು, ನೆಟ್ಟಿಗರು ವಿಧವಿಧವಾಗಿ ಕಮೆಂಟ್ ಮಾಡುತ್ತಿದ್ದಾರೆ. ಕೆಲವರು ಟ್ರೋಲ್ ಮಾಡಿದ್ರೆ, ಇನ್ನೂ ಕೆಲವರು ಗ್ರೇಟ್ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದರಲ್ಲೊಬ್ಬ ಒಂದು ಕತ್ತೆಯ ಜೊತೆ ಮತ್ತೊಂದು ಕತ್ತೆ ಫ್ರೀ ಎಂದು ಕಮೆಂಟ್ ಮಾಡಿದ್ದಾನೆ.


ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 4:25 pm, Mon, 12 December 22