Viral Video: ಚಿಕನ್​​ ಕರಿ ರುಚಿಯಾಗಿ ಮಾಡಿಲ್ಲವೆಂದು ಪತ್ನಿಯನ್ನು 2ನೇ ಮಹಡಿಯಿಂದ ತಳ್ಳಿದ ಪತಿ

ಸಿಸಿಟಿವಿ ದೃಶ್ಯಾವಳಿಯಲ್ಲಿ ಮಹಡಿಯಿಂದ ಮಹಿಳೆ ಬೀಳುತ್ತಿರುವುದನ್ನು ಕಾಣಬಹುದು. ಬಿದ್ದ ತಕ್ಷಣ ನೋವು ತಾಳಲಾರದೆ ಮಹಿಳೆ ಕಿರುಚಿದ್ದು, ಮಹಿಳೆಯ ಕಿರಿಚಾಟ ಕೇಳಿ ಅಕ್ಕ ಪಕ್ಕದ ಮನೆಯವರು ಮಹಿಳೆಯ ಸಹಾಯಕ್ಕೆ ಬಂದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

Viral Video: ಚಿಕನ್​​ ಕರಿ ರುಚಿಯಾಗಿ ಮಾಡಿಲ್ಲವೆಂದು ಪತ್ನಿಯನ್ನು 2ನೇ ಮಹಡಿಯಿಂದ ತಳ್ಳಿದ ಪತಿ

Updated on: Mar 31, 2024 | 12:15 PM

ಪತಿ ಪತ್ನಿ ನಡುವೆ ಅಡುಗೆ ವಿಚಾರದಲ್ಲಿ ಜಗಳ ನಡೆದಿದ್ದು, ಅದು ತಾರಕಕ್ಕೇರಿ ಕೋಪದಿಂದ ಪತಿಯೊಬ್ಬ ಪತ್ನಿಯನ್ನು 2ನೇ ಮಹಡಿಯಿಂದ ಕೆಳಗೆ ತಳ್ಳಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​​​ ಆಗುತ್ತಿದೆ. ಪತ್ನಿಯನ್ನು ಮಹಡಿಯಿಂದ ತಳ್ಳಿರುವುದು ಮನೆಗೆ ಅಳವಡಿಸಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಘಟನೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಯನ್ನು @ZafarHeretic ಎಂಬ ಟ್ವಿಟರ್​​ ಖಾತೆಯಲ್ಲಿ ಮಾರ್ಚ್​​​​​ 30 ರಂದು ಹಂಚಿಕೊಳ್ಳಲಾಗಿದೆ. ವಿಡಿಯೋ ಹಂಚಿಕೊಂಡ ಕೇವಲ ಒಂದೇ ದಿನದಲ್ಲಿ ಮೂರು ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ಜೊತೆಗೆ ಈ ವಿಡಿಯೋ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಚಿಕನ್​​ ಕರಿ ರುಚಿಯಾಗಿ ಮಾಡಿಲ್ಲವೆಂದು ಪತ್ನಿಯನ್ನು ಮಹಡಿಯಿಂದ ಪತಿ ತಳ್ಳಿರುವುದಾಗಿ ವಿಡಿಯೋದಲ್ಲಿ ಕ್ಯಾಪ್ಷನ್​​ ಬರೆಯಲಾಗಿದೆ.

ಇದನ್ನೂ ಓದಿ: ಈ ಐಸ್​ಕ್ರೀಮ್​​​ ನೋಡಿದ್ರೆ, ಮಕ್ಕಳು ಯಾವಾತ್ತೂ ಐಸ್​ಕ್ರೀಮ್​ ಬೇಕು ಎಂದು ಹಠ ಮಾಡಲ್ಲ!

ಸಿಸಿಟಿವಿ ದೃಶ್ಯಾವಳಿಯಲ್ಲಿ ಮಹಡಿಯಿಂದ ಮಹಿಳೆ ಬೀಳುತ್ತಿರುವುದನ್ನು ಕಾಣಬಹುದು. ಬಿದ್ದ ತಕ್ಷಣ ನೋವು ತಾಳಲಾರದೆ ಮಹಿಳೆ ಕಿರುಚಿದ್ದು, ಮಹಿಳೆಯ ಕಿರುಚಾಟ ಕೇಳಿ ಅಕ್ಕ ಪಕ್ಕದ ಮನೆಯವರು ಮಹಿಳೆಯ ಸಹಾಯಕ್ಕೆ ಬಂದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ