ನನ್ನ ಭಾರತೀಯ ಸ್ನೇಹಿತರು ಈ ವಿಡಿಯೋ ನೋಡಬೇಕು ಎಂದ ಈ ಪಾಕಿಸ್ತಾನಿ ವ್ಯಕ್ತಿ

| Updated By: ಶ್ರೀದೇವಿ ಕಳಸದ

Updated on: Nov 09, 2022 | 2:29 PM

Pakistani man’s warm gesture : ‘ಗಡಿ ದಾಟುವಾಗ ಸ್ವಲ್ಪ ಭಯವಿತ್ತು. ಆದರೆ ಇಲ್ಲಿಗೆ ಬಂದಮೇಲೆ ಇಷ್ಟೊಂದು ಆಪ್ತ ವಾತಾವರಣ ಇರುತ್ತದೆಯೆಂದು ಊಹಿಸಿರಲಿಲ್ಲ. ನಿಜ ಹೇಳಬೇಕೆಂದರೆ ಭಾರತದಲ್ಲಿಯೂ ಇಂಥ ಪ್ರೀತಿ ಸಿಕ್ಕಿರಲಿಲ್ಲ.’

ನನ್ನ ಭಾರತೀಯ ಸ್ನೇಹಿತರು ಈ ವಿಡಿಯೋ ನೋಡಬೇಕು ಎಂದ ಈ ಪಾಕಿಸ್ತಾನಿ ವ್ಯಕ್ತಿ
Pakistani mans warm gesture towards Indian visitors
Follow us on

Viral Video : ನನ್ನ ಭಾರತೀಯ ಸ್ನೇಹಿತರು ಮತ್ತು ಸೋಶಿಯಲ್ ಮೀಡಿಯಾ ಫಾಲೋವರ್​ಗಳು ಈ ವಿಡಿಯೋ ನೋಡಬೇಕೆಂದು ನಾನು ಕೇಳಿಕೊಳ್ಳುತ್ತೇನೆ ಎಂದು ಟ್ವೀಟ್ ಮಾಡಿ ಈ ನೋಟ್​ ಬರೆದಿದ್ದಾರೆ ಪಾಕಿಸ್ತಾನಿ ನಿವಾಸಿ ಇಹ್ತಿಶಮ್​ ಉಲ್​ ಹಕ್​; ‘ಭಾರತೀಯ ಕುಟುಂಬವೊಂದು, ತಮ್ಮ ಹೆಣ್ಣುಮಕ್ಕಳನ್ನು ಟೆನ್ನಿಸ್​ ಪಂದ್ಯಕ್ಕಾಗಿ  ಇಸ್ಲಾಮಾಬಾದಿಗೆ ಕರೆದುಕೊಂಡು ಹೋಗುತ್ತಿರುವಾಗ ಮಾರ್ಗಮಧ್ಯೆ ನನ್ನ ಸ್ನೇಹಿತ ತಾಹಿರ್ ಖಾನ್ ಅವರನ್ನು ಭೇಟಿಯಾಗಿ ಲಿಫ್ಟ್​ ಕೇಳಿದೆ. ಆ ಒಡನಾಟದ ಅನುಭವವನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ. ನಿಜವಾದ ಪಾಕಿಸ್ತಾನವೆಂದರೆ ಇದು.’

‘ಪಾಕಿಸ್ತಾನದ ಇಸ್ಲಾಮಾಬಾದಿನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಟೆನ್ನಿಸ್​ ಪಂದ್ಯಾವಳಿಗೆ ಹೈದರಾಬಾದ್​ ಮೂಲದ ಈ ಇಬ್ಬರೂ ಪೋಷಕರು ತಮ್ಮ ಹೆಣ್ಣುಮಕ್ಕಳನ್ನು ಕರೆದೊಯ್ದಿದ್ದಾರೆ. ಮಾರ್ಗ ಮಧ್ಯೆ ಪಾಕಿಸ್ತಾನದ ವ್ಯಕ್ತಿಯೊಬ್ಬರು ಕಾರಿನಲ್ಲಿ ಬರುತ್ತಿರುವುದನ್ನು ನೋಡಿ ಲಿಫ್ಟ್​ ಕೇಳಿದ್ದಾರೆ. ‘ಗಡಿ ದಾಟುವಾಗ ಸ್ವಲ್ಪ ಭಯವಾಯಿತು. ಆದರೆ ಇಲ್ಲಿಗೆ ಬಂದಮೇಲೆ ಇಷ್ಟೊಂದು ಆಪ್ತ ವಾತಾವರಣ ಇರುತ್ತದೆ ಎಂದು ಊಹಿಸಿರಲಿಲ್ಲ. ನಿಜ ಹೇಳಬೇಕೆಂದರೆ ಭಾರತದಲ್ಲಿಯೂ ಇಂಥ ಪ್ರೀತಿ ಸಿಕ್ಕಿರಲಿಲ್ಲ. ದೇವರು ಈ ದೇಶವನ್ನು ಹೆಚ್ಚು ಆಶೀರ್ವದಿಸಲಿ’ ಎಂದಿದ್ದಾರೆ ಒಬ್ಬ ಪೋಷಕರು.

‘ದೇವರನ್ನು ನಂಬಿ ಇಲ್ಲಿಗೆ ಬಂದಿದ್ದೇವೆ. ಭಾರತದಂತೆಯ ಇಲ್ಲಿಯೂ ಆಪ್ತವಾದ ವಾತಾವರಣ ಇದೆ’ ಎಂದಿದ್ದಾರೆ ಇನ್ನೊಬ್ಬ ಪೋಷಕರು.

ಇವರಿಗೆ ಲಿಫ್ಟ್​ ಕೊಟ್ಟ ವ್ಯಕ್ತಿ ತಾಹೀರ್, ‘ಇವರು ಹೈದರಾಬಾದಿನಿಂದ ಬಂದಿದ್ದಾರೆ ಎಂದು ತಿಳಿದು ಸಂತೋಷವಾಯಿತು. ನೀವು ಎಲ್ಲಿ ಹೋಗಬೇಕೋ ಅಲ್ಲಿ ಡ್ರಾಪ್ ಮಾಡುತ್ತೇನೆ. ಆದರೆ ನೀವು ನಮ್ಮ ಅತಿಥಿಗಳು. ನಮ್ಮ ಆತಿಥ್ಯವನ್ನು ನೀವು ಸ್ವೀಕರಿಸಲೇಬೇಕು. ಹೈದರಾಬಾದಿ ಬಿರಿಯಾನಿ, ಕಾಬೂಲಿ ಪುಲಾವ್​, ಜಾಮೂನ್​ ಖೀರ್ ಎಲ್ಲ ಇದೆ’ ಎಂದು ಹೋಟೆಲಿಗೆ ಕರೆದುಕೊಂಡು ಬಂದಿದ್ದಾರೆ. .

ಟೆನ್ನಿಸ್​ ಪಂದ್ಯಾವಳಿಯಲ್ಲಿ ಭಾಗವಹಿಸಲು ಬಂದ ಹುಡುಗಿಯರು, ‘ಇಲ್ಲಿಗೆ ಬರುವ ಇದೆಲ್ಲವನ್ನೂ ನಾವು ನಿರೀಕ್ಷಿಸಿರಲಿಲ್ಲ. ಬಹಳ ಸುಂದರವಾಗಿದೆ ಪಾಕಿಸ್ತಾನ’ ಎನ್ನುತ್ತಾರೆ. ಅದಕ್ಕೆ ಪ್ರತಿಯಾಗಿ ತಾಹೀರ್, ‘ಹಾಗಿದ್ದರೆ ಯಾರು ಗೆಲ್ಲುತ್ತಾರೆ?’ ಎಂದು ಪ್ರಶ್ನಿಸುತ್ತಾರೆ. ‘ಅದನ್ನು ದೇವರು ನಿರ್ಣಯಿಸುತ್ತಾನೆ’ ಎನ್ನುತ್ತಾರೆ ಹುಡುಗಿಯರು.

ಈ ವಿಡಿಯೋ ಈತನಕ 3.5 ಲಕ್ಷಕ್ಕೂ ಹೆಚ್ಚು ಜನರನ್ನು ತಲುಪಿದೆ. ನೆಟ್ಟಿಗರು ಈ ಸೌಹಾರ್ದಯುತ ಭೇಟಿಯನ್ನು ಶ್ಲಾಘಿಸುತ್ತಿದ್ದಾರೆ. ಮಾನವೀಯತೆ ಇನ್ನೂ ಜೀವಂತವಿದೆ ಎನ್ನುವುದಕ್ಕೆ ಇಂಥ ಘಟನೆಗಳು ಸಾಕ್ಷಿ ಎಂದು ಖುಷಿಗೊಳ್ಳುತ್ತಿದ್ದಾರೆ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

 

 

Published On - 2:16 pm, Wed, 9 November 22