Palace on Wheels: ಅಯೋಧ್ಯೆ ಯಾತ್ರೆ ಪ್ರಾರಂಭಿಸಿದ ವಿಶ್ವದ ಐಷಾರಾಮಿ ರೈಲು; 42 ವರ್ಷಗಳ ಬಳಿಕ ರೈಲಿನ ಮಾರ್ಗ ಬದಲಾವಣೆ

|

Updated on: Feb 07, 2024 | 12:37 PM

ಪ್ಯಾಲೇಸ್ ಆನ್ ವೀಲ್ಸ್ ಶೀಘ್ರದಲ್ಲೇ ಧಾರ್ಮಿಕ ಪ್ರಯಾಣವನ್ನು ಕೈಗೊಳ್ಳಲಿದೆ. ಈ ರೈಲು ಧಾರ್ಮಿಕ ಸ್ಥಳಗಳಿಗೆ ಪ್ರವಾಸಕ್ಕೆ ಹೋಗುವುದರಿಂದ ಅದರಲ್ಲಿ ಪ್ರಯಾಣಿಸುವ ಪ್ರಯಾಣಿಕರ ಆಹಾರ ಮೆನುವನ್ನು ಬದಲಾಯಿಸಲಾಗಿದ್ದು, ಪ್ರಯಾಣಿಕರಿಗೆ ಮದ್ಯವನ್ನು ನೀಡಲಾಗುವುದಿಲ್ಲ. ಜೊತೆಗೆ ಮಧ್ಯಾಹ್ನ ಅಥವಾ ರಾತ್ರಿಯ ಊಟದಲ್ಲಿ ಬೆಳ್ಳುಳ್ಳಿ ಮತ್ತು ಈರುಳ್ಳಿ ಕರಿಯನ್ನು ನಿಷೇಧಿಸಿದೆ. ಈ ರೈಲು ವಾರಣಾಸಿ, ಮಥುರಾ, ವೃಂದಾವನ ಮತ್ತು ಅಯೋಧ್ಯೆ ಮುಂತಾದ ಧಾರ್ಮಿಕ ನಗರಗಳಿಗೆ ಭೇಟಿ ನೀಡಲಿದೆ.

Palace on Wheels: ಅಯೋಧ್ಯೆ ಯಾತ್ರೆ ಪ್ರಾರಂಭಿಸಿದ ವಿಶ್ವದ ಐಷಾರಾಮಿ ರೈಲು; 42 ವರ್ಷಗಳ ಬಳಿಕ ರೈಲಿನ ಮಾರ್ಗ ಬದಲಾವಣೆ
Palace on Wheels on religious journey
Follow us on

42 ವರ್ಷಗಳ ನಂತರ ಮೊದಲ ಬಾರಿಗೆ ರಾಜಸ್ಥಾನದ ರಾಯಲ್ ಟ್ರೈನ್ ಎಂದು ಕರೆಯಲ್ಪಡುವ ಪ್ಯಾಲೇಸ್ ಆನ್ ವೀಲ್ಸ್(Palace on Wheels) ಶೀಘ್ರದಲ್ಲೇ ಧಾರ್ಮಿಕ ಪ್ರಯಾಣವನ್ನು ಕೈಗೊಳ್ಳಲಿದೆ. ಈ ರೈಲು ಪ್ರಯಾಗರಾಜ್, ವಾರಣಾಸಿ ಮೂಲಕ ರಾಮನಗರ ಅಯೋಧ್ಯೆಗೆ ಹೋಗಲಿದೆ. ಇಲ್ಲಿಂದ ಈ ರೈಲು ಆರು ದಿನಗಳ ನಂತರ ಮಥುರಾ ವೃಂದಾವನದ ಮೂಲಕ ದೆಹಲಿಗೆ ಮರಳಲಿದೆ. ಈ ರೈಲು ಧಾರ್ಮಿಕ ಸ್ಥಳಗಳಿಗೆ ಪ್ರವಾಸಕ್ಕೆ ಹೋಗುವುದರಿಂದ ಅದರಲ್ಲಿ ಪ್ರಯಾಣಿಸುವ ಪ್ರಯಾಣಿಕರ ಆಹಾರ ಮೆನುವನ್ನು ಬದಲಾಯಿಸಲಾಗಿದೆ. ಹೊಸ ಬದಲಾವಣೆಯ ಪ್ರಕಾರ, ಪ್ರಯಾಣಿಕರಿಗೆ ಮದ್ಯವನ್ನು ನೀಡಲಾಗುವುದಿಲ್ಲ ಅಥವಾ ಮಧ್ಯಾಹ್ನ ಅಥವಾ ರಾತ್ರಿಯ ಊಟದಲ್ಲಿ ಬೆಳ್ಳುಳ್ಳಿ ಮತ್ತು ಈರುಳ್ಳಿ ಕರಿಯನ್ನು ನಿಷೇಧಿಸಿದೆ. ಈ ರೈಲನ್ನು ಆರ್‌ಟಿಡಿಸಿಯಿಂದ 7 ವರ್ಷಗಳ ಕಾಲ ಗುತ್ತಿಗೆ ಪಡೆದಿರುವ ಕಂಪನಿಯು ಈ ಹೊಸ ಪ್ರಯಾಣದ ನೀಲಿನಕ್ಷೆಯನ್ನು ಆರ್‌ಟಿಡಿಸಿ ಮುಂದೆ ಸಲ್ಲಿಸಿದೆ.

ಪ್ಯಾಲೇಸ್ ಆನ್ ವೀಲ್ಸ್ ಟಿಕೇಟ್​​ ದರ ಎಷ್ಟು?

ಪ್ಯಾಲೇಸ್ ಆನ್ ವೀಲ್ಸ್‌ನ ನಿರ್ದೇಶಕ ಪ್ರದೀಪ್ ಬೋಹ್ರಾ ಪ್ರಕಾರ, ಈ ರೈಲಿನಲ್ಲಿ ಪ್ರಯಾಣಿಸಲು ದಿನಕ್ಕೆ 70 ಸಾವಿರ ರೂ ಪಾವತಿಸಬೇಕು. ಈ 70 ಸಾವಿರ ನಿಮಗೆ ಹೆಚ್ಚೆನಿಸಬಹುದು ಆದರೆ ಇದು ಸೆಮಿ-ಡೀಲಕ್ಸ್ ಕೋಚ್‌ನ ದರ. ಈ ರೈಲಿನ ಡಿಲಕ್ಸ್ ಕೋಚ್ ನಲ್ಲಿ ಪ್ರಯಾಣಿಸಲು ಪ್ರಯಾಣಿಕರು ದಿನಕ್ಕೆ 95 ಸಾವಿರ ರೂ. ಇದಲ್ಲದೇ ಸೂಪರ್ ಡಿಲಕ್ಸ್‌ನ ದರವು ದಿನಕ್ಕೆ ಸುಮಾರು 2 ಲಕ್ಷ ರೂ. ಒಟ್ಟಾಗಿ ನೀವು ಈ ರೈಲಿನಲ್ಲಿ ಪ್ರಯಾಣಿಸಲು 13 ಲಕ್ಷ ರೂ. ಖರ್ಚು ಮಾಡಬೇಕಿದೆ. ರೈಲಿನಲ್ಲಿ ಒಂದು ಬಾರಿಗೆ ಒಟ್ಟು 46 ಪ್ರಯಾಣಿಕರು ಪ್ರಯಾಣಿಸಬಹುದು. ಈಗ ಈ ರೈಲು ನಾಲ್ಕನೇ ತಲೆಮಾರಿನದ್ದಾಗಿದೆ ಎಂದು ತಿಳಿಸಿದರು. ಅದರ ನಾಲ್ಕನೇ ನವೀಕರಣವನ್ನು ಹೊಸ ಕಂಪನಿಯೇ ಮಾಡಿದೆ. ವಿಶ್ವದರ್ಜೆಯ ಸೌಲಭ್ಯಗಳನ್ನು ಹೊಂದಿರುವ ಈ ರೈಲಿನಲ್ಲಿ ಮಲಗುವ ಕೋಣೆ, ವಿಶ್ರಾಂತಿ ಕೋಣೆ, ಅಡುಗೆಮನೆ ಹೀಗೆ ಸಾಕಷ್ಟು ಐಷಾರಾಮಿ ಸೌಲಭ್ಯಗಳಿವೆ.

ಇದನ್ನೂ ಓದಿ: ಭಾರತದಲ್ಲಿ ನಿರ್ಮಾಣವಾಗುತ್ತಿದೆ ವಿಶ್ವದ ಮೊದಲ ‘ಓಂ’ ಆಕಾರದ ದೇವಾಲಯ

ಪ್ಯಾಲೇಸ್ ಆನ್ ವೀಲ್ಸ್ ಧಾರ್ಮಿಕ ಪ್ರಯಾಣ ಆರಂಭ ಯಾವಾಗ?

ಬೋಹ್ರಾ ಪ್ರಕಾರ, ಕಂಪನಿಯು ಈ ರೈಲನ್ನು ಮೇ ತಿಂಗಳಿನಿಂದ ಧಾರ್ಮಿಕ ಪ್ರಯಾಣಕ್ಕೆ ಕಳುಹಿಸಲು ಪ್ರಯತ್ನಿಸುತ್ತಿದೆ. ಈ ಯಾತ್ರೆಯು 6 ಹಗಲು ಮತ್ತು 7 ರಾತ್ರಿಗಳ ಕಾಲ ನಡೆಯಲಿದೆ . ಈ ಅವಧಿಯಲ್ಲಿ, ಪ್ರಯಾಗ್ರಾಜ್, ವಾರಣಾಸಿ, ಮಥುರಾ, ವೃಂದಾವನ ಮತ್ತು ಅಯೋಧ್ಯೆ ಮುಂತಾದ ಧಾರ್ಮಿಕ ನಗರಗಳಿಗೆ ಭೇಟಿ ನೀಡಲು ಪ್ರಯಾಣಿಕರನ್ನು ಕರೆದೊಯ್ಯಲಾಗುತ್ತದೆ ಎಂದು ತಿಳಿಸಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:35 pm, Wed, 7 February 24