ಆರ್ಡರ್ ಮಾಡಿದ್ದು ವೆಜ್ ಬರ್ಗರ್; ತಿಂದಿದ್ದು ನಾನ್ ವೆಜ್ ಬರ್ಗರ್!
ಆರ್ಡರ್ ಮಾಡಿದ್ದು ವೆಜ್ ಬರ್ಗರ್, ಆದ್ರೆ ಬರ್ಗರ್ ತಿಂದಾಗ ವಿಚಿತ್ರವಾದ ರುಚಿ ಅನ್ನಿಸಿದ ಕಾರಣ ಮಧ್ಯದ ಸ್ಲೈಸ್ ಅನ್ನು ತೆರೆದಾಗ ಅದರಲ್ಲಿ ಮಾಂಸ ಕಂಡುಬಂದಿದೆ. ನಾನ್ ವೆಜ್ ಬರ್ಗರ್ ತಿಂದ ಕುಟುಂಬಸ್ಥರ ಆರೋಗ್ಯ ಹದಗೆಟ್ಟಿದೆ. ಈ ವಿಚಾರವಾಗಿ ಗ್ರಾಹಕರ ವೇದಿಕೆ ಮೆಟ್ಟಿಲೇರಿದ್ದಾರೆ ಶುದ್ಧ ಸಸ್ಯಹಾರಿ ಕುಟುಂಬ.
ಮಧ್ಯಪ್ರದೇಶದ ಗ್ವಾಲಿಯರ್‌ನ ಶುದ್ಧ ಸಸ್ಯಹಾರಿ (Pure Vegetarian) ಕುಟುಂಬವೊಂದು ರಾತ್ರಿಯ ಊಟಕ್ಕೆ ಆನ್‌ಲೈನ್‌ನಲ್ಲಿ ವೆಜ್ ಬರ್ಗರ್(Veg Burger) ಆರ್ಡರ್ ಮಾಡಿದೆ. ಆದರೆ ಬರ್ಗರ್ ಅರ್ಧ ತಿಂದ ಬಳಿಕ ಅದು ನಾನ್ ವೆಜ್ ಎಂದು ತಿಳಿದಿದೆ. ಆಹಾರ ಸೇವಿಸಿದ ಕುಟುಂಬ ಸದಸ್ಯರು ಅಸ್ವಸ್ಥತೆ ಒಳಗಾಗಿದ್ದಾರೆ. ಈ ಕುಟುಂಬ ವಿತರಣಾ ಕಂಪನಿ ಮತ್ತು ರೆಸ್ಟೋರೆಂಟ್ ವಿರುದ್ಧ ಗ್ರಾಹಕರ ರೂಪದಲ್ಲಿ ದೂರು ದಾಖಲಿಸಿದ್ದಾರೆ.
ವೆಜ್ ಬರ್ಗರ್ ಮತ್ತು ಚಾಕೊ ಲಾವಾ ಆರ್ಡರ್ :
ಫೆಬ್ರವರಿ 2 ರ ರಾತ್ರಿ ಕುಟುಂಬದೊಂದಿಗೆ ಬರ್ಗರ್ ಮತ್ತು ಚಾಕೊ ಲಾವಾ ತಿನ್ನಲು ನಿರ್ಧರಿಸಿದ್ದರು ಎಂದು ಥಾಟಿಪುರ ನಿವಾಸಿ ಆಶಿಶ್ ಶರ್ಮಾ ಮಾಹಿತಿ ನೀಡಿದ್ದಾರೆ. ಆಶಿಶ್ ನಗರದ ಬರ್ಗರ್ ಬಡಿ ರೆಸ್ಟೋರೆಂಟ್‌ನಿಂದ ಝೊಮಾಟೊ ಆಪ್ ಮೂಲಕ ವೆಜ್ ಬರ್ಗರ್ ಮತ್ತು ಚಾಕೊ ಲಾವಾ ಆರ್ಡರ್ ಮಾಡಿದ್ದರು. ಸ್ವಲ್ಪ ಸಮಯದ ನಂತರ, Zomato ಕಂಪನಿಯ ಡೆಲಿವರಿ ಬಾಯ್ ಆಹಾರವನ್ನು ವಿತರಿಸಿ ಹೊರಟುಹೋಗಿದ್ದಾನೆ. ಮನೆಯವರು ಬರ್ಗರ್ ತಿಂದಾಗ ವಿಚಿತ್ರವಾದ ರುಚಿ ಅನ್ನಿಸಿತು. ನಂತರ ಮಧ್ಯದ ಸ್ಲೈಸ್ ಅನ್ನು ತೆರೆದಾಗ ಅದರಲ್ಲಿ ಮಾಂಸ ಕಂಡುಬಂದಿದೆ.
ಇದನ್ನೂ ಓದಿ: ನೋಡಲು ತುಕ್ಕು ಹಿಡಿದಂತಿರುವ ಈ ಬೆಲ್ಟ್ನ ಬೆಲೆ ಕೇಳಿದ್ರೆ ನೀವು ಶಾಕ್ ಆಗುವುದಂತೂ ಖಂಡಿತಾ!
ಚೋಕೋ ಲಾವಾದ ರ್ಯಾಪರ್ ಅನ್ನು ತೆರೆದಾಗ ಅದು ನಾನ್ ವೆಜ್ ಆಗಿತ್ತು. ನಾನ್ ವೆಜ್ ಬರ್ಗರ್ ತಿಂದ ಕುಟುಂಬಸ್ಥರ ಆರೋಗ್ಯ ಹದಗೆಟ್ಟಿದೆ. ಈ ಬಗ್ಗೆ ಝೊಮಾಟೊ ಕಂಪನಿ ಹಾಗೂ ದೊಡ್ಡ ರೆಸ್ಟೊರೆಂಟ್ ನಿರ್ವಾಹಕರಿಗೆ ಆಶಿಶ್ ದೂರು ನೀಡಿದರೂ ಅಲ್ಲಿಂದ ಯಾವುದೇ ಪರಿಹಾರ ಸಿಕ್ಕಿಲ್ಲ. ಈ ವಿಚಾರವಾಗಿ ಗ್ರಾಹಕರ ವೇದಿಕೆ ಮೆಟ್ಟಿಲೇರಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ