AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಈ ಮಹಿಳೆಯಷ್ಟೇ ಸಲೀಸಾಗಿ ನೀವು ಇಂಗ್ಲಿಷ್ ಮಾತಾಡ್ತೀರಾ? ವಿಡಿಯೋ ನೋಡಿದ್ರೆ ಇಲ್ಲ ಅಂತೀರಾ

ಎಲ್ಲರಿಗೂ ಕೂಡ ನಾವು ಇಂಗ್ಲಿಷ್ ಭಾಷೆಯನ್ನು ಕಲಿಯಬೇಕು. ಎಲ್ಲರಂತೆ ಸರಾಗವಾಗಿ ಇಂಗ್ಲಿಷ್ ಮಾತನಾಡಬೇಕು ಎನ್ನುವುದಿರುತ್ತದೆ. ಹೀಗಾಗಿ ಆನ್ಲೈನ್ ಕೋರ್ಸ್ ಸೇರಿದಂತೆ ಸ್ಪೋಕನ್ ಇಂಗ್ಲಿಷ್ ಕ್ಲಾಸ್ ಸೇರಿ ಭಾಷೆಯನ್ನು ಕಲಿಯುವುದನ್ನು ನೋಡುತ್ತಿರುತ್ತೇವೆ. ಆದರೆ ಕೆಲವರು ಯಾವುದೇ ತರಬೇತಿಯನ್ನು ಪಡೆಯದೇ ಸಲೀಸಾಗಿ ಇಂಗ್ಲಿಷ್ ಮಾತನಾಡುವುದನ್ನು ನೋಡಿದರೆ ಇದು ಹೇಗೆ ಸಾಧ್ಯ ಎಂದೇನಿಸುತ್ತದೆ. ಇದೀಗ ಗೋವಾ ಬೀಚ್ ನಲ್ಲಿ ಮಹಿಳೆಯೊಬ್ಬರು ಲೀಲಾಜಾಲವಾಗಿ ಇಂಗ್ಲಿಷ್ ಭಾಷೆಯನ್ನು ಮಾತನಾಡುತ್ತಿದ್ದು, ಈ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಆಕೆಯು ಇಂಗ್ಲಿಷ್ ಭಾಷೆ ಮಾತನಾಡುವ ದಾಟಿಗೆ ಫಿದಾ ಆಗಿದ್ದಾರೆ.

Viral Video: ಈ ಮಹಿಳೆಯಷ್ಟೇ ಸಲೀಸಾಗಿ ನೀವು ಇಂಗ್ಲಿಷ್ ಮಾತಾಡ್ತೀರಾ? ವಿಡಿಯೋ ನೋಡಿದ್ರೆ ಇಲ್ಲ ಅಂತೀರಾ
ವೈರಲ್​​​ ವಿಡಿಯೋ ಇಲ್ಲಿದೆ ನೋಡಿ
ಸಾಯಿನಂದಾ
| Edited By: |

Updated on: Feb 06, 2024 | 4:28 PM

Share

ಇತ್ತೀಚೆಗಿನ ದಿನಗಳಲ್ಲಿ ಇಂಗ್ಲಿಷ್ ಭಾಷೆಯ ಮೇಲಿನ ವ್ಯಾಮೋಹವು ಹೆಚ್ಚಾಗಿದೆ. ಇಂಗ್ಲಿಷ್ ಭಾಷೆ ಮಾತನಾಡುವುದು ಪ್ರತಿಷ್ಠೆ ಎನ್ನುವಂತಾಗಿ ಬಿಟ್ಟಿದೆ.. ಸಣ್ಣ ಮಕ್ಕಳು ಕೂಡ ಇಂಗ್ಲಿಷ್ ನಲ್ಲಿ ವ್ಯವಹಾರಿಸುವುದನ್ನು ನೋಡಿದಾಗ ಅಚ್ಚರಿಯಾಗುತ್ತದೆ. ಇದೀಗ ಗೋವಾ ಬೀಚ್‌ನಲ್ಲಿ ಸಾಮಾನ್ಯ ಮಹಿಳೆಯೊಬ್ಬರು ಇಂಗ್ಲಿಷ್​ ಮಾತನಾಡಿದ್ದಾರೆ. ಸಲೀಸಾಗಿ ಇಂಗ್ಲಿಷ್ ಮಾತನಾಡುವ ಮಹಿಳೆಯ ವಿಡಿಯೋ ನೋಡಿದ ನೆಟ್ಟಿಗರು ಭೇಷ್ ಎಂದಿದ್ದಾರೆ.

ಈ ವಿಡಿಯೋದಲ್ಲಿ ಈ ಮಹಿಳೆಯನ್ನು ನೋಡಿದರೆ ಬಳೆಗಳು ಮತ್ತು ಮಣಿಗಳ ನೆಕ್ಲೇಸ್​ಗಳನ್ನು ಮಾರಾಟ ಮಾಡುತ್ತಿರುವುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಈಕೆಯು ಕೋವಿಡ್ ನಂತರದಲ್ಲಿ ಗೋವಾ ಕಡಲತೀರದಲ್ಲಿ ಆಗಿರುವ ಬದಲಾವಣೆಗಳನ್ನು ವಿವರಿಸಿದ್ದಾರೆ. ಸುಶಾಂತ್ ಪಾಟೀಲ್ ಎಂಬುವರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಮಹಿಳೆಯೂ, ‘ನನಗೆ ಚಿಕ್ಕಂದಿನಿಂದಲೂ ವಾಗಟರ್ ಬೀಚ್​ ಪರಿಚಯವಿದೆ. ಕೋವಿಡ್​ಗೂ ಮುನ್ನ ಫ್ರಾನ್ಸ್​, ಜರ್ಮನ್​ ಸೇರಿದಂತೆ ವಿದೇಶಗಳಿಂದ ಜನರು ಬರುತ್ತಿದ್ದರು. ಆದರೆ, ಭಾರತೀಯರೇ ಬರುತ್ತಿರಲಿಲ್ಲ. ಆದರೆ, ಕೋವಿಡ್​ ಬಳಿಕ ಭಾರತೀಯರು ಸಹ ಹೆಚ್ಚಾಗಿ ಬರುತ್ತಿದ್ದಾರೆ. ಎಲ್ಲರೂ ಈ ಸ್ಥಳವನ್ನು ಎಂಜಾಯ್​ ಮಾಡುತ್ತಾರೆ.​ ಸತ್ತ ಮೇಲೆ ನಾವು ಯಾವುದನ್ನೂ ತೆಗದುಕೊಂಡು ಹೋಗುವುದಿಲ್ಲ. ನೆನಪುಗಳು ಮಾತ್ರ ನಮ್ಮೊಂದಿಗೆ ಬರುತ್ತದೆ’ ಎಂದಿದ್ದಾರೆ.

ಇದನ್ನೂ ಓದಿ: ನೀವು ವೈನ್ ಪ್ರಿಯರೇ, ನೂರು ವರ್ಷ ಹಳೆಯ ವೈನ್ ಎಂದಾದರೂ ಕಂಡಿದ್ದೀರಾ? ಇಲ್ಲಿದೆ ನೋಡಿ

ವೈರಲ್ ವಿಡಿಯೋ ಇಲ್ಲಿದೆ ನೋಡಿ:

ವೈರಲ್ ಆಗಿರುವ ಈ ವಿಡಿಯೋಗೆ ಸಾವಿರಾರು ಲೈಕ್ಸ್ ಗಳು ಬಂದಿದ್ದು, ನಾನಾ ರೀತಿಯ ಕಾಮೆಂಟ್ ಗಳು ಹರಿದು ಬಂದಿವೆ. ನೆಟ್ಟಿಗರು ಈ ಮಹಿಳೆಯು ಇಂಗ್ಲಿಷ್ ಮಾತನಾಡುವುದನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಬಳಕೆದಾರರೊಬ್ಬರು, ‘ಆಕೆಗೆ ಹೋಲಿಸಿದರೆ ನಮ್ಮ ಇಂಗ್ಲಿಷ್ ಜ್ಞಾನ ಶೂನ್ಯ’ ಎಂದಿದ್ದಾರೆ. ಮತ್ತೊಬ್ಬ ಬಳಕೆದಾರರು, ‘ಸೋಷಿಯಲ್ ಮೀಡಿಯಾದಿಂದಾಗಿ ಇಂತಹ ಪ್ರತಿಭೆಗಳು ಬೆಳಕಿಗೆ ಬರುತ್ತಿದೆ’ ಎಂದು ಕಾಮೆಂಟ್ ಮಾಡಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ