‘ಕಿಸ್​ ಮೀ’​; ಈಗಿಂದೀಗಲೇ ಬೇಕೆಂದು ಧರಣಿಗೆ ಕುಳಿತ ನೆಟ್ಟಿಗರು

| Updated By: ಶ್ರೀದೇವಿ ಕಳಸದ

Updated on: Nov 23, 2022 | 6:16 PM

Parle-G Kissmi Biscuit : ಇದನ್ನು ನೋಡುತ್ತಾ ನೋಡುತ್ತಾ ನಿಮಗೂ ಬಾಯಲ್ಲಿ ನೀರೂರಿದರೆ ಇದಕ್ಕೆ ನಾವು ಜವಾಬ್ದಾರರಲ್ಲ. ದಾಲ್ಚಿನಿ ಪರಿಮಳದ ಈ ಕಿಸ್ಮಿ ಬಿಸ್ಕೆಟ್​ ನಿಮ್ಮೂರಲ್ಲಿಯೂ ಸಿಗುತ್ತದೆಯಾ?​

‘ಕಿಸ್​ ಮೀ’​; ಈಗಿಂದೀಗಲೇ ಬೇಕೆಂದು ಧರಣಿಗೆ ಕುಳಿತ ನೆಟ್ಟಿಗರು
ನೆಟ್ಟಿಗರು ಈಗಲೇ ಬೇಕು ಎನ್ನುತ್ತಿದ್ದಾರೆ ಪಾರ್ಲೆಜಿ ಕಿಸ್ಮಿ ಬಿಸ್ಕಿಟ್
Follow us on

Viral Post : ಚಿಕ್ಕಂದಿನಲ್ಲಿ ನಾಲ್ಕಾಣೆ ಎಂಟಾಣೆ ಕೊಟ್ಟು ತಿನ್ನುತ್ತಿದ್ದ ಪಾರ್ಲೆ ಕಿಸ್ಮಿ ಚಾಕೋಲೇಟ್​ ಯಾರಿಗೆ ತಾನೆ ಮರೆಯಲು ಸಾಧ್ಯ? ಹಾಗೇ ಎರಡು ರೂಪಾಯಿಗೆ ಸಿಗುತ್ತಿದ್ದ ಪಾರ್ಲೆ ಜಿ ಬಿಸ್ಕೆಟ್​ (Parle-G)?  ಆ ರುಚಿಯ ನೆನಪು ಇನ್ನೂ ನಾಲಗೆಯ ಮೇಲೆ ಹಾಗೇ ಇರಬೇಕಲ್ಲ? ಇದೀಗ ಟ್ವಿಟರ್​ನಲ್ಲಿ ವೈರಲ್ ಆಗುತ್ತಿದೆ ಪಾರ್ಲೆಜಿ ಕಿಸ್ಮಿ ಬಿಸ್ಕಿಟ್. ಈ ಬಿಸ್ಕೆಟ್​ ದಾಲ್ಚಿನ್ನಿ ಪರಿಮಳದಿಂದ ಕೂಡಿದ್ದು, ನೆಟ್ಟಿಗರು ತಕ್ಷಣವೇ ಈ ಬಿಸ್ಕೆಟ್​ ಬೇಕೇಬೇಕು ಎಂದು ಧರಣಿಗೆ ಕುಳಿತಿದ್ದಾರೆ!

 

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ಮೋಡ, ಮಳೆ, ಚಳಿಗೆ ಚಹಾದೊಂದಿಗೆ ಪೆರ್ಫೆಕ್ಟ್​ ಜೋಡಿ ಈ ಬಿಸ್ಕೆಟ್ ಇದಾಗಿದೆ ಎನ್ನುತ್ತಿದ್ದಾರೆ ನೆಟ್ಟಿಗರು. 1,500ಕ್ಕೂ ಹೆಚ್ಚು ಜನರು ಈ ಪೋಸ್ಟ್​ ಇಷ್ಟಪಟ್ಟಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ. ನಾನು ಈ ಬಿಸ್ಕೆಟ್​ ಅನ್ನು ನೋಡಿದ್ದೇನೆ ಆದರೆ ರುಚಿ ನೋಡಿಲ್ಲ ಎಂದಿದ್ದಾರೆ ಒಬ್ಬರು. ದೆಹಲಿಯಲ್ಲಿ ಎಲ್ಲಿ ಸಿಗುತ್ತದೆ ಎಂದು ಕೇಳಿದ್ದಾರೆ ಇನ್ನೂ ಒಬ್ಬರು. ನನಗಂತೂ ಈ ರುಚ್ಚಿ ಹುಚ್ಚು ಹಿಡಿಸಿದೆ ಎಂದಿದ್ದಾರೆ ಮತ್ತೊಬ್ಬರು.

ನಮ್ಮೂರಲ್ಲಿ ಸಿಗುತ್ತಿಲ್ಲ ನಿಮ್ಮೂರಲ್ಲಿ ಸಿಗುತ್ತದೆಯೇ? ಆನ್​ಲೈನಿನಲ್ಲಿ ಸಿಗುತ್ತದೆಯೇ? ಎಂದು ನೆಟ್ಟಿಗರು ಚರ್ಚಿಸುತ್ತಿದ್ದಾರೆ. ಇದು ರುಚಿಯ ಮಹಿಮೆ ಎಂದರೆ. ಬೇರೆ ಬೇರೆ ಬಿಸ್ಕೆಟ್​ ಬ್ರ್ಯಾಂಡ್​ಗಳ ಹೆಸರು ಹೇಳಿ ಇದಕ್ಕಿಂತ ಅವೇ ರುಚಿಯಾಗಿವೆ ಎಂದೂ ಹೇಳುತ್ತಿದ್ದಾರೆ. ಆದರೂ ಈ ಹಳೆಯ ರುಚಿ ಮರೆಯಲುಂಟೇ? ಎನ್ನುತ್ತಿದ್ದಾರೆ. ಪತಂಜಲಿ ಕೂಡ ಚೆನ್ನಾಗಿದೆ ಎಂದಿದ್ದಾರೆ ಇನ್ನೊಬ್ಬರು.

ಈ ಬಿಸ್ಕೆಟ್​ ನೋಡಿದ ನಿಮ್ಮ ಅಭಿಪ್ರಾಯವೇನು? ನಿಮ್ಮೂರಲ್ಲಿ ಸಿಗುತ್ತವೆಯಾ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 6:06 pm, Wed, 23 November 22