Video: ಕೋಪದಲ್ಲಿ ಚೆರ್ರಿ ಹಣ್ಣು ಹಾಕಿದ್ದ ತಟ್ಟೆಯನ್ನೇ ಎಸೆದ ಗಿಳಿ

ಗಿಳಿಗಳು ತುಂಬಾನೇ ಬುದ್ಧಿವಂತ ಪಕ್ಷಿಗಳು ಎಂಬುದು ಎಲ್ಲರಿಗೂ ತಿಳಿದಿದೆ. ಮನುಷ್ಯನ ಜತೆಗೆ ಸಂಭಾಷಣೆ ಮಾಡುವ ವಿಡಿಯೋಗಳನ್ನು ನೀವು ನೋಡಿರುತ್ತೀರಿ. ಇದೀಗ ವೈರಲ್ ಆಗಿರುವ ಕ್ಲಿಪಿಂಗ್‌ನಲ್ಲಿ ಗಿಳಿಯೊಂದು ಕೋಪದಲ್ಲೇ ಚೆರ್ರಿ ಹಣ್ಣು ಹಾಕಿದ ತಟ್ಟೆಯನ್ನೇ ಎಸೆದಿದೆ. ಈ ಮುದ್ದಾದ ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ

Video: ಕೋಪದಲ್ಲಿ ಚೆರ್ರಿ ಹಣ್ಣು ಹಾಕಿದ್ದ ತಟ್ಟೆಯನ್ನೇ ಎಸೆದ ಗಿಳಿ
ವೈರಲ್‌ ವಿಡಿಯೋ
Image Credit source: Facebook

Updated on: Feb 17, 2026 | 11:15 AM

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಕೆಲ ವಿಡಿಯೋಗಳು ನೆಟ್ಟಿಗರ ಹೃದಯ ಗೆಲ್ಲುತ್ತವೆ. ಅದರಲ್ಲೂ ಈ ಪ್ರಾಣಿ ಪಕ್ಷಿಗಳಿಗೆ ಸಂಬಂಧ ಪಟ್ಟ ದೃಶ್ಯಗಳು ಬಹುಬೇಗನೆ ವೈರಲ್ ಆಗುತ್ತವೆ. ಆದರೆ ಇದೀಗ ಗಿಳಿಯೊಂದು (Parrot) ಮನೆಮಾಲೀಕನೊಂದಿಗೆ ಕೋಪಿಸಿಕೊಂಡಿದೆ. ಮನೆ ಮಾಲೀಕ ತಟ್ಟೆಗೆ ಚೆರ್ರಿ ಹಣ್ಣು ಹಾಕುತ್ತಿದ್ದಂತೆ ಕೋಪದಲ್ಲಿ ತಟ್ಟೆಯನ್ನು ಎಸೆದಿದೆ. ಕೋಪಿಸಿಕೊಂಡ ಗಿಳಿಯ ವಿಡಿಯೋ ಸದ್ಯ ವೈರಲ್ ಆಗಿದ್ದು, ನೆಟ್ಟಿಗರು ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ.

ಚಂದು ಡಾಟ್‌ ಕಾಮ್‌ (Chandu Dot Com) ಹೆಸರಿನ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಕೋಪಗೊಂಡ ಗಿಳಿಯ ರಿಯಾಕ್ಷನ್ ಹೇಗಿತ್ತು ಎನ್ನುವುದನ್ನು ನೋಡಬಹುದು. ಮಾಲೀಕನು ಗಿಳಿಯ ಮುಂದೆ ತಟ್ಟೆಯಿಟ್ಟು ಅದಕ್ಕೆ ಚೆರ್ರಿ ಹಣ್ಣನ್ನು ಹಾಕಿದ್ದಾನೆ. ಕೋಪಗೊಂಡಿದ್ದ ಗಿಳಿಯೂ ಚೆರ್ರಿ ಹಣ್ಣು ಸಹಿತ ತಟ್ಟೆಯನ್ನು ಎಸೆಯುತ್ತಿರುವುದನ್ನು ಕಾಣಬಹುದು. ಪ್ರತಿ ಸಲನು ಚೆರ್ರಿ ಹಣ್ಣು ತಟ್ಟೆಯಲ್ಲಿ ಇಟ್ಟೊಡನೆ ಇದೇ ರೀತಿ ಮಾಡುತ್ತಿರುವುದನ್ನು ಕಾಣಬಹುದು.

ವೈರಲ್‌ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಟೊಮೊಟೊ ಕೊಡಲ್ಲ ಎಂದಿದ್ದಕ್ಕೆ ಮನೆಯೊಡತಿಗೆ ಬೆದರಿಕೆ ಹಾಕಿದ ಸಾಕು ಗಿಳಿ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಯಾಕೆ ಗಿಳಿಯೂ ಕೋಪಗೊಂಡಿದೆ ಎಂದು ಕೇಳಿದ್ದಾರೆ. ಮತ್ತೊಬ್ಬರು, ಅದಕ್ಕೆ ಈ ಹಣ್ಣು ಇಷ್ಟ ಇಲ್ಲ ಎಂದು ಕಾಣಿಸುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಮತ್ತೆ ಮತ್ತೆ ನೋಡಬೇಕೆನಿಸುವ ದೃಶ್ಯ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Sainandha P

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Follow Us