AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಚಿನ್ನ ಹಳದಿ ಬಣ್ಣದಲ್ಲಿ ಇರೋದು ಯಾಕೆ? ಇಲ್ಲಿದೆ ವೈಜ್ಞಾನಿಕ ಕಾರಣ

ಚಿನ್ನ ಅಂದ್ರೆ ಸಾಕು, ಹೆಣ್ಣು ಮಕ್ಕಳ ಕಿವಿ ನೆಟ್ಟಗಾಗಿ ಬಿಡುತ್ತದೆ. ಅದೇಗೋ ಹಣ ಹೊಂದಿಸಿ ಚಿನ್ನವನ್ನು ಖರೀದಿ ಮಾಡ್ತಾರೆ. ಇನ್ನು, ಈ ಚಿನ್ನ ಅಂದ್ರೆ ನೆನಪಾಗೋದು ಹಳದಿ ಬಣ್ಣದ ಲೋಹ. ಇದು ವಿಶ್ವದ ಅತ್ಯಂತ ಅಮೂಲ್ಯ ಲೋಹಗಳಲ್ಲಿ ಒಂದು. ಎಲ್ಲರೂ ಇಷ್ಟ ಪಡುವ ಈ ಚಿನ್ನದ ಬಣ್ಣದ ಹಳದಿ ಯಾಕಿರುತ್ತದೆ. ಎಷ್ಟೋ ಜನರಿಗೆ ಹಳದಿ ಬಣ್ಣದಲ್ಲಿರುವುದು ಯಾಕೆ ಎನ್ನುವುದು ತಿಳಿದೇ ಇಲ್ಲ. ಇದಕ್ಕೆ ಉತ್ತರ ಇಲ್ಲಿದೆ.

Viral: ಚಿನ್ನ ಹಳದಿ ಬಣ್ಣದಲ್ಲಿ ಇರೋದು ಯಾಕೆ? ಇಲ್ಲಿದೆ ವೈಜ್ಞಾನಿಕ ಕಾರಣ
ಸಾಂದರ್ಭಿಕ ಚಿತ್ರImage Credit source: Getty Images
ಸಾಯಿನಂದಾ
|

Updated on: Jul 02, 2026 | 3:45 PM

Share

ಮುಖ್ಯಾಂಶಗಳು

  • ಚಿನ್ನ ಬೆಲೆಬಾಳುವ ಲೋಹಗಳಲ್ಲಿ ಒಂದಾಗಿದೆ
  • ಚಿನ್ನದ ಬಣ್ಣ ಹಳದಿ ಇರುವುದಕ್ಕೆ ವೈಜ್ಞಾನಿಕ ಕಾರಣವಿದೆ
  • ಚಿನ್ನವು ಇತರ ಲೋಹಗಳಿಗಿಂತ ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತದೆ

ಹೆಣ್ಣು ಮಕ್ಕಳಿಗೆ ಚಿನ್ನದ (Gold) ಮೇಲೆ ವಿಪರೀತ ವ್ಯಾಮೋಹ. ಹೀಗಾಗಿ ಚಿನ್ನ ಇಷ್ಟಪಡದವರು ಇರೋದು ಕಡಿಮೆಯೇ. ಮದುವೆ, ಹಬ್ಬ ಹರಿದಿನಗಳಲ್ಲಿ ರೇಷ್ಮೆ ಸೀರೆ ಜತೆಗೆ ಬಂಗಾರದ ಒಡವೆಗಳು ಇರಲೇಬೇಕು. ಚಿನ್ನ ಅಥವಾ ಗೋಲ್ಡ್ ಎಂದಾಗ ನೆನಪಾಗುವುದೇ ಈ ಹಳದಿ ಬಣ್ಣ (yellow colour). ಆದರೆ ಚಿನ್ನ ಹಳದಿ ಬಣ್ಣದಲ್ಲಿ ಯಾಕೆ ಇರೋದು ಎಂದು ಯಾವತ್ತಾದ್ರೂ ಯೋಚಿಸಿದ್ದೀರಾ. ಚಿನ್ನದ ಬಣ್ಣ ಹಳದಿ ಇರುವುದರ ಹಿಂದೆ ವೈಜ್ಞಾನಿಕ ಕಾರಣವು ಇದೆಯಂತೆ. ಹಾಗಾದ್ರೆ ಈ ಕುರಿತಾದ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಚಿನ್ನ ಹಳದಿ ಬಣ್ಣದಲ್ಲಿರುವುದು ಏಕೆ?

ಯಾವುದೇ ವಸ್ತುವಿರಲಿ, ಅದರ ಬಣ್ಣವು ಅದು ಪ್ರತಿಫಲಿಸುವ ಬೆಳಕಿನ ತರಂಗಾಂತರದ ಮೇಲೆ ಅವಲಂಬಿರವಾಗಿರುತ್ತದೆ. ಸಾಮಾನ್ಯವಾಗಿ ಸೂರ್ಯನ ಬೆಳಕು ನಿರ್ದಿಷ್ಟ ವಸ್ತುವಿನ ಮೇಲೆ ಬಿದ್ದಾಗ, ಕೆಲವು ಬಣ್ಣಗಳು ಹೀರಲ್ಪಡುತ್ತವೆ, ಇನ್ನು ಕೆಲವು ಪ್ರತಿಫಲಿಸುತ್ತದೆ. ಈ ಪ್ರತಿಫಲಿತ ಬೆಳಕು ನಮ್ಮ ಕಣ್ಣುಗಳನ್ನು ತಲುಪಿ, ಮೆದುಳು ಅದನ್ನು ವಸ್ತುವಿನ ಬಣ್ಣವೆಂದು ಗ್ರಹಿಸಿಕೊಳ್ಳುತ್ತದೆ. ಈ ಬೆಳ್ಳಿ ಮತ್ತು ಅಲ್ಯೂಮಿನಿಯಂನಂತಹ ಹೆಚ್ಚಿನ ಲೋಹಗಳು ಬಹುತೇಕ ಸಂಪೂರ್ಣ ಗೋಚರ ವರ್ಣಪಟಲವನ್ನು ಪ್ರತಿಬಿಂಬಿಸುತ್ತವೆ. ಅದಕ್ಕಾಗಿಯೇ ಅವು ನಮ್ಮ ಕಣ್ಣಿಗೆ ಬೆಳ್ಳಿಯಾಗಿ ಅಥವಾ ಬಿಳಿ ಬಣ್ಣದಲ್ಲಿ ಕಾಣುತ್ತವೆ.

ಇದನ್ನೂ ಓದಿ: ನೀರಿನ ಬಾಟಲಿನ ಕ್ಯಾಪ್​ಗಳು ಏಕೆ ಬೇರೆ ಬೇರೆ ಬಣ್ಣದಲ್ಲಿರುವುದು ಏಕೆ?

ಆದರೆ ಚಿನ್ನ ಹಾಗಲ್ಲ, ಈ ಚಿನ್ನವು ಇತರ ಲೋಹಗಳಿಗಿಂತ ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತದೆ. ಚಿನ್ನವು ಎಲ್ಲಾ ಗೋಚರ ಬಣ್ಣಗಳನ್ನು ಪ್ರತಿಬಿಂಬಿಸುವ ಬದಲು, ನೀಲಿ ಮತ್ತು ನೇರಳೆ ತರಂಗಾಂತರಗಳ ಹೆಚ್ಚಿನ ಭಾಗವನ್ನು ಹೀರಿಕೊಳ್ಳುತ್ತದೆ. ಹೀಗಾದಾಗ ಇದು ಕೆಂಪು, ಕಿತ್ತಳೆ ಮತ್ತು ಹಳದಿ ತರಂಗಾಂತರಗಳನ್ನು ನಮ್ಮ ಕಣ್ಣುಗಳಿಗೆ ಹಿಂತಿರುಗಿಸುತ್ತದೆ. ಈ ಪ್ರತಿಫಲಿತ ಬಣ್ಣಗಳ ಸಂಯೋಜನೆ ಚಿನ್ನಕ್ಕೆ ಅದರ ಹಳದಿ ಬಣ್ಣವನ್ನು ನೀಡುತ್ತದೆ. ಹೀಗಾಗಿ ಚಿನ್ನ ಹಳದಿ ಬಣ್ಣದಲ್ಲಿ ಕಾಣುತ್ತದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us